ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಮಹಾಲಕ್ಷ್ಮೀ ಜಾತ್ರಾ ಮಾ.18 ರಿಂದ ಮಾ.26ರವರೆಗೆ ಸಂಭ್ರಮದಿಂದ ಜರುಗಲಿದೆ

ಪ್ರತಿ ಐದು ವರ್ಷಕ್ಕೊಮ್ಮೆ ಜರುಗುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವವು ಮಾ.18 ರಿಂದ ಮಾ.26ರವರೆಗೆ ಸಂಭ್ರಮದಿಂದ ಜರುಗಲಿದೆ ಎಂದು ಸುಳೇಭಾವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೊದ್ಧಾರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ದೇವಣ್ಣ ಬಂಗೇನ್ನವರ ಹೇಳಿದರು.
ಸೋಮವಾರ ಬೆಳಗಾವಿ ನಗರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಯಲ್ಲಿ ಮಾತನಾಡಿದರು. ಮಾ.18 ಮಂಗಳವಾರ ಆರಂಭವಾಗಲಿರುವ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದಿಂದ ಭಕ್ತರು ಆಗಮಿಸಲಿದ್ದಾರೆ. ಶ್ರೀ ಮಹಾಲಕ್ಷ್ಮೀ ಜಾತ್ರೆ ಬಂಢಾರ ರಹಿತವಾಗುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಮಾದರಿ ಜಾತ್ರೆಯಾಗಿದೆ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಜಾತ್ರೆ. ನಮ್ಮ ಜಾತ್ರೆಯ ಮಾದರಿಯಲ್ಲಿ ಎಲ್ಲ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
ಮಾ.18 ರಂದು ಬಡಿಗೇರ ಮನೆಯಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಪ್ರತಿಷ್ಠಾನೆ ಮಾಡಿ ಸಂಜೆ 5 ಗಂಟೆಗೆ ದೇವಿಯ ಉಡಿ ತುಂಬುವುದು ಹಾಗೂ ರಾತ್ರಿಯಿಂದ ಗ್ರಾಮದಲ್ಲಿ ಹೊನ್ನಾಟ ಪ್ರಾರಂಭವಾಗುತ್ತದೆ ಎಂದರು. ಮಾ.19 ಬುಧವಾರದಂದು ಗ್ರಾಮದಲ್ಲಿ ಹೊನ್ನಾಟವಾಡಿ ಸಂಜೆ ಜಾತ್ರಾ ದೇವಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಮಾ.20ರಂದು ಗುರುವಾರ ಜಾತ್ರಾ ಮಹೋತ್ಸವ ಆರಂಭವಾಗಲಿದೆ ಎಂದರು.
ಮಾ.21 ರಂದು ಶುಕ್ರವಾರ ದೇವಿಗೆ ಕಾಣಿಕೆ ಸಲ್ಲಿಸುವುದು ಹಾಗೂ ಉಡಿ ತುಂಬುವ ಕಾರ್ಯಕ್ರಮ ಇದೆ. ಮಾ.26 ರಂದು ಬುಧವಾರ ಸಂಜೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದರು. 9 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಎಲ್ಲಿಯೂ ಬ್ಯಾನರ್ ಅಳವಡಿಸುವುದಿಲ್ಲ. ಬ್ಯಾನರ್ ಬಂಟಿಂಗ್ಸ್, ಕಟೌಟ್ ಗಳಿಂದ ಗ್ರಾಮದ ಸೌಂದರ್ಯ ಹಾಳಾಗಬಾರದು ಎಂಬ ಕಾರಣಕ್ಕೆ ಇದನ್ನು ನಿಷೇಧಿಸಲಾಗಿದೆ ಎಂದರು. ಶ್ರೀಮಹಾಲಕ್ಷ್ಮೀ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಮಹಾಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ಬಸವನಗೌಡ ಕೊಂಕ್ರಿಪಾಟೀಲ್ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.



