ಕುಡಚಿಯ ಮಾಸಾಬಿ ದರ್ಗಾಕ್ಕೆ ಬಂಪರ್ ಕೊಡುಗೆ ಕೊಟ್ಟ ಸಂಸದೆ ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ: ಲಕ್ಷಾಂತರ ಭಕ್ತರನ್ನು ಹೊಂದಿರುವ ರಾಯಬಾಗ ತಾಲೂಕಿನ ಕುಡಚಿಯ ಮಾಸಾಬಿ ದರ್ಗಾಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು 2 ಕೋಟಿಯ ಬಂಪರ್ ಕೊಡುಗೆ ನೀಡುವ ಮೂಲಕ ಜಿಲ್ಲೆಯಲ್ಲಿ ಭಾವೈಕ್ಯದ ಸಂದೇಶ ಸಾರಿದ್ದಾರೆ.
ಹೌದು….. ರಾಯಬಾಗ ತಾಲೂಕಿನ ಕುಡಚಿಯ ಮಾಸಾಬಿ ದರ್ಗಾವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಹೊಂದಿದೆ. ಅಲ್ಲದೇ ಈ ದರ್ಗಾಕ್ಕಾ ಮುಸ್ಲಿಂ ಸಮುದಾಯದವರಷ್ಟೇ ಅಲ್ಲ; ಹಿಂದೂಗಳೂ ಅಪಾರ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆಯುತ್ತಾರೆ. ಇಂತಹ ದರ್ಗಾಕ್ಕೆ ವಕ್ಫ್ ಮಂಡಳಿ ವತಿಯಿಂದ ಅಭಿವೃದ್ಧಿಗೆ 2 ಕೋಟಿ ಅನುದಾನ ಮಂಜೂರು ಮಾಡಿಸುವ ಮೂಲಕ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಬಂಪರ್ ಕೊಡುಗೆ ಕೊಟ್ಟಿದ್ದಾರೆ.

ಪ್ರಿಯಂಕಾ ವಿಶೇಷ ಪ್ರಯತ್ನಿದಿಂದ 2 ಕೋಟಿ ಮಂಜೂರು: ಮಾಸಾಬಿ ದರ್ಗಾಕ್ಕೆ ಅನೇಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ, ಮೂಲಸೌಕರ್ಯ ಸಿದ್ಧಪಡಿಸುವುದಕ್ಕಾಗಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದಾಗಿ 2 ಕೋಟಿ ಮಂಜೂರು ಮಾಡಿದ್ದಾರೆ. ಸಂಸದೆ ಪ್ರಿಯಂಕಾ ಅವರ ಈ ಕಾರ್ಯಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.


