CrimeState

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೇರಿ 15 ಜನರಿಗೆ ಗಡಿಪಾರು ನೋಟಿಸ್ ಜಾರಿ

ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು, ಮುಸ್ಲಿಂ ಘಟನೆಯ ಸದಸ್ಯರು ಸೇರಿ ಒಟ್ಟು 15 ಜನರಿಗೆ ಗಡಿಪಾರು ನೋಟಿಸ್ ನೀಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ , ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್ ವಿ ಗೌಡ‌, ಮುಸ್ಲಿಂ ಸಂಘಟನೆಯ ನಾಲ್ವರು ಸೇರಿದಂತೆ 15 ಜನರಿಗೆ ಪೊಲೀಸ್ ‌ಕಾಯ್ದೆ 1963 ಕಲಂ 58ರ ಅಡಿಯಲ್ಲಿ ಜಿಲ್ಲಾಡಳಿತದಿಂದ ಗಡಿಪಾರು ನೋಟಿಸ್ ಜಾರಿ ಮಾಡಿದ್ದು, ಈ ಸಂಬಂಧ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತನ್ನ ಶಿಫಾರಸ್ಸು ಪತ್ರದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇವರನ್ನು ಜಿಲ್ಲೆಯಿಂದ ಹೊರಹಾಕುವಂತೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅದರಂತೆ ಇದೀಗ ನೋಟಿಸ್ ನೀಡಲಾಗಿದೆ.

ಮುಸ್ಲಿಂ ಸಮುದಾಯದ 10 ಜನ ಹಾಗೂ ಹಿಂದೂ ಧರ್ಮದ 05 ಒಟ್ಟು 15 ಜನರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆ ನೀಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಭಜರಂಗದಳದ ಹಾಸನ ವಿಭಾಗದ ಸಂಯೋಜಕ ಶ್ಯಾಮ್ ವಿ ಗೌಡ ಅವರ ಹೆಸರುಗಳಿವೆ. ನೂರ್ ಅಹಮದ್, ಫಾರೂಕ್,ಇಬ್ರಾಹಿಂ ಅಲಿಯಾಸ್ ಇಬ್ಬು, ಇಮ್ರಾನ್,ಚಾoದ್ ಪಾಷಾ, ಜೋಹಾರ್ ಅಂಜುಮ್, ಮೊಹಮ್ಮದ್ ಇದ್ರಿಶ್, ಫಾಜಿಲ್ ಅಹಮದ್, ಜಾವೀದ್ ಖುರೇಶಿ, ಮೊಹಮ್ಮದ್ ಫಾಜಿಲ್, ಮೂಡಿಗೆರೆ ಕೌಶಿಕ್ ಹಾಗೂ ವಿವಿಧ ಕೋಮು ಸಂಘರ್ಷ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ನಾಲ್ವರು ಮುಸ್ಲಿಂ ಮುಖಂಡರ ಹೆಸರನ್ನೂ ಶಿಫಾರಸ್ಸು ಮಾಡಲಾಗಿದೆ. ಜೋಹರ್, ಚಾಂದ್, ಇಬ್ರಾಹಿಂ ಹಾಗೂ ಇಮ್ರಾನ್ ಎಂಬುವವರಿಗೂ ಗಡಿಪಾರು ಭೀತಿ ಎದುರಾಗಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button