Belagavi: ಎಂಇಎಸ್ ಗೂಂಡಾಗಿರಿಗೆ ಬೆಂಬಲ ಕೊಟ್ಟರೆ ಕೇಸ್ ಹಾಕುತ್ತೇವೆ: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

ಬೆಳಗಾವಿ: ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸೋಮವಾರ (ಫೆ.24) ಕನ್ನಡ- ಮರಾಠಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ ಎರಡು ದಿನದಲ್ಲಿ ಮನೆಗೆ ಕಳುಹಿಸುತ್ತಾರೆ.
ನಮ್ಮ ಎಂ.ಡಿ.ಯವರು ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಗಲಾಟೆಯಾದ ಮೇಲೆ ಕೇಸ್ ಕೊಟ್ಟಿದ್ದಕ್ಕೆ ಗಾಬರಿಯಾಗಿದ್ದಾರೆ. ಏನೇ ಕೇಸ್ ಮಾಡಲಿ ತನಿಖೆ ಮಾಡುತ್ತಾರೆ ಎಂದರು.
ಆ ಬಸ್ ನಲ್ಲಿ ಅಂದು 90 ಜನ ಇದ್ದರು. ಒಂದು ಲಕ್ಷ 72 ಸಾವಿರ ಕರ್ನಾಟಕದಲ್ಲಿ ಟ್ರಿಪ್ಸ್ ಇರುತ್ತವೆ. ಈ ರೀತಿ ದೂರು 65 ವರ್ಷದಲ್ಲಿ ಕೇಸ್ ಆಗಿಲ್ಲ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ. ನಾನು ಕೇಸ್ ಬಗ್ಗೆ ಗೃಹಮಂತ್ರಿ ಬಗ್ಗೆ ಮಾತನಾಡುತ್ತೇನೆ. ಮಹಾದೇವಪ್ಪ ಪರವಾಗಿ ನಮ್ಮ ಇಲಾಖೆ, ಸಾರ್ವಜನಿಕರು ಎಲ್ಲರೂ ಇದ್ದಾರೆ. ಚಿತ್ರದುರ್ಗದಲ್ಲಿ ನಮ್ಮವರು ಮಸಿ ಬಳಿದರು, ಆದರೆ ಮಾರನೇ ದಿನ ಅವರು ಮಸಿ ಬಳಿದರು. ಎರಡು ರಾಜ್ಯಕ್ಕೆ ಇದರಿಂದ ನಷ್ಟ ಆಗುತ್ತದೆ. ಸಾರ್ವಜನಿಕರಿಗೆ ತೊಂದರೆ ಇಲಾಖೆಗೂ ನಷ್ಟ ಆಗುತ್ತದೆ ಎಂದರು.
ಶಿವಸೇನೆಯಂತಹ ಒಂದು ಪಕ್ಷ ಈ ರೀತಿಯ ವ್ಯಕ್ತಿಗಳಿಗೆ ಬೆಂಬಲ ನೀಡಬಾರದು. ಇದೊಂದು ಸಣ್ಣ ಕಾರಣಕ್ಕೆ ಘಟನೆಯಾಗಿದೆ. ಅಂಥವರ ಮೇಲೆ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಬೆಳಗಾವಿಯಲ್ಲಿ ಎಂಇಎಸ್ ನವರು ಗೂಂಡಾಗಿರಿ ಮಾಡುವವರಿಗೆ ಬೆಂಬಲ ಕೊಟ್ಟರೆ ನಾವು ಕೇಸ್ ಹಾಕುತ್ತೇವೆ. ನಮ್ಮ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ಸಚಿವರು ಹೇಳಿದರು.


