ಸರಕಾರದ ಆದೇಶದಂತೆ ಹೊಬಳಿ ಮಟ್ಟದಲ್ಲಿರುವ ಉಪತಹಸಿಲ್ದಾರರಿಗೆ ಹಕ್ಕು ಬದಲಾವಣೆ ಇಥ್ಯರ್ಥಪಡಿಸಲು ನಿರ್ದೇಶನ ನಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಸರಕಾರದ ಆದೇಶದಂತೆ ಹೊಬಳಿ ಮಟ್ಟದಲ್ಲಿರುವ ಉಪತಹಸಿಲ್ದಾರರಿಗೆ ಹಕ್ಕು ಬದಲಾವಣೆ ಇಥ್ಯರ್ಥಪಡಿಸಲು ನಿರ್ದೇಶನ ನಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ


ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ 1) ಬೀಡಿ, 2) ಗುಂಜಿ 3) ಜಾಂಬೋಟಿ ಉಪತಹಶೀಲದಾರರಿಗೆ ಹಕ್ಕು ಬದಲಾವಣೆಗೆ ಸಂಬಂಧಿಸಿದ ತಕರಾರು ಪ್ರಕರಣಗಳನ್ನು ಆಯಾ ಹೋಬಳಿ ಮಟ್ಟದಲ್ಲಿ ಉಪತಹಶೀಲ್ದಾರರು ಇತ್ಯರ್ಥಪಡಿಸಬೇಕೆಂದು ಸರ್ಕಾರದ ಅಧಿಸೂಚನೆ ಸಂ: ಕಿ86/ಟಿ.ಎರ್.ಎಮ್./2022 ಸರ್ಕಾರದ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಖಾನಾಪೂರದ ಹಿಂದಿನ ತಹಶೀಲದಾರರಾದ ಶ್ರೀ. ಪ್ರಕಾಶ ಗಾಯಕವಾಡ ಇವರು ತಮ್ಮ ಅಧಿಕಾರ ಸ್ವೀಕರಿಸಿದ ನಂತರ ಆಯಾ ಹೋಬಳಿ ಮಟ್ಟದ ಆರ್‌ಟಿಎಸ್ ಪ್ರಕರಣಗಳನ್ನು ತಮ್ಮ ಅಧೀನದಲ್ಲಿ ನಡೆಸಿ ಉಲ್ಲೇಖದನ್ವಯ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ತಮ್ಮ ಅಧಿಕಾರದ ದುರುಪಯೋಗ ಪಡಿಸಿಕೊಂಡಿರುತ್ತಾರೆ.
ಕಾರಣ ಕರ್ನಾಟಕ ರಾಜ್ಯದಲ್ಲಿ ನಮ್ಮ ಖಾನಾಪೂರ ತಾಲೂಕು ವಿಸ್ತಾರದಲ್ಲಿ ಅತೀ ದೊಡ್ಡದಾಗಿರುವುದರಿಂದ ಹಾಗೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದರಿಂದ ಇಲ್ಲಿನ ಸಾರ್ವಜನಿಕರಿಗೆ ಬಸ್ಸಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳು ಕೂಡ ಸರಿಯಾಗಿ ಇರುವುದಿಲ್ಲ. ಆದ್ದರಿಂದ ಖಾನಾಪೂರ ವ್ಯಾಪ್ತಿಯಲ್ಲಿ ಆರ್‌ಟಿಎಸ್ ಪ್ರಕರಣಗಳನ್ನು ವಿಚಾರಣೆ ನಡೆಸಿರುವುದರಿಂದ ಸಾರ್ವಜನಿಕರ ಪ್ರಕರಣಗಳಿಗೆ ಹಾಜರಾಗಲು ತೊಂದರೆ ಆಗುತ್ತದೆ.
ಆದ್ದರಿಂದ ಮಾನ್ಯರವರು ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಆದೇಶ ಪ್ರಕಾರ ಆಯಾ ಹೋಬಳಿ ಮಟ್ಟದ ಆರ್‌ಟಿಎಸ್ ಪ್ರಕರಣಗಳನ್ನು ಉಪತಹಶೀಲ್ದಾರರಿಗೆ ವಿಚಾರಣೆ ಜರುಗಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ಸರಿಪಡಿಸಲು, ಇಲಾಖೆಯಲ್ಲಿ ಪಾರದರ್ಶಕತೆ ಹಾಗೂ ಸರ್ಕಾರದ ಆದೇಶಗಳನ್ನು ಪಾಲಿಸುವ ಉದ್ದೇಶದಿಂದ ಸಮಾಜ ಸೇವಕ ಜ್ಯೋತಿಭಾ ಬೆಂಡಿಗೇರಿ ಅವರು ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ


