Local News
ಬೆಳಗಾವಿ: ಮಾ. 01ಕ್ಕೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಬೆಳಗಾವಿ: ಕಣಬರ್ಗಿಯ 110 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಮಾರ್ಚ 01 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ಎಕ್ಸಿಬಿಷೆನ್ ಸೆಂಟರ್, ಕಣಬರ್ಗಿ, ರಾಮತೀರ್ಥ ನಗರ, ಶಿವಾಲಯ, ಯಮನಾಪುರ, ಆಯುರ್ವೇದ ಕಾಲೇಜ್, ಆಟೋ ನಗರ, ರೆವೆನ್ಯೂ ಕಾಲೋನಿ, ರೇಣುಕಾ ನಗರ, ಕಾಕತಿ, ಮುತ್ಯಾನಟ್ಟಿ, ಬಸವನಕೊಡಚಿ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.



