CrimeIndia
Trending

ಟೈಗರ್ ಶ್ರಾಫ್ ಹತ್ಯೆ ಯತ್ನ ಪ್ರಕರಣ: ಬಂಧಿತರ ಸಂಖ್ಯೆ 11ಕ್ಕೆ ಏರಿಕೆ

ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮುಂಬೈ ಪೊಲೀಸರು ಈವರೆಗೆ ಒಟ್ಟು 11 ಮಂದಿಯನ್ನು ಬಂಧಿಸಿದ್ದಾರೆ. ಅಕ್ಟೋಬರ್ 25ರಂದು ಇಂದೋರ್‌ನಲ್ಲಿ ಪ್ರಾಂಜಲ್ ಠಕ್ರಲ್ ಎಂಬಾತನನ್ನು ಬಂಧಿಸಲಾಗಿದ್ದು, ಶೂಟರ್‌ಗೆ ಎರಡನೇ ಪಿಸ್ತೂಲ್ ಒದಗಿಸಿದ ಆರೋಪ ಈತನ ಮೇಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ಕೇವಲ 15 ಗಂಟೆಗಳಲ್ಲೇ ಮೂವರು ಶೂಟರ್‌ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಬಳಿಕ ಶೂಟರ್‌ಗಳಿಗೆ ಸಹಾಯ ಮಾಡಿದ ನಾಲ್ವರನ್ನು ದೆಹಲಿ ಮತ್ತು ಹರಿಯಾಣದಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ತಲುಪಿದೆ.o

ಪೊಲೀಸರ ಪ್ರಕಾರ, ಪ್ರಾಂಜಲ್ ಠಕ್ರಲ್ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶೂಟರ್‌ಗೆ ಎರಡನೇ ಪಿಸ್ತೂಲ್ ಒದಗಿಸಿದ್ದಾನೆ. ಪ್ರಕರಣದ ಪ್ರಮುಖ ಸಂಚುಕೋರ ಎಂದು ಪೊಲೀಸರು ಗುರುತಿಸಿರುವ ಭೂಗತ ಪಾತಕಿ ಅನಿಲ್ ಪಂಡಿತ್ ಜೊತೆಗೂ ಪ್ರಾಂಜಲ್‌ಗೆ ನೇರ ಸಂಪರ್ಕವಿದೆ ಎಂಬ ಆರೋಪ ಕೇಳಿಬಂದಿದೆ. ಆತನ ವಿಚಾರಣೆಯ ವೇಳೆ ಗುಜರಾತ್‌ನ ಸೂರತ್‌ನಲ್ಲಿ ಬಚ್ಚಿಡಲಾಗಿದ್ದ ಪಿಸ್ತೂಲ್ ಸೇರಿದಂತೆ ಕೆಲವು ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಪ್ರಾಂಜಲ್ ಠಕ್ರಲ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆತರಲು ಪೊಲೀಸರು ಮೂರು ದಿನಗಳ ಟ್ರಾನ್ಸಿಟ್ ರಿಮ್ಯಾಂಡ್ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಲ್ಲಿ ಶೂಟರ್‌ಗಳಾದ ಪೂಲ್ ಸಿಂಗ್, ಹೃತಿಕ್ ಮತ್ತು ರೆಹಾನ್ ಅನ್ಸಾರ್ ಸೇರಿದ್ದಾರೆ. ಬಂದೂಕುಗಳನ್ನು ದೆಹಲಿಯಿಂದ ತಂದುಕೊಟ್ಟ ಆರೋಪದ ಮೇಲೆ ರಾಧಾ ಮತ್ತು ಬಬಿತಾ ಅವರನ್ನು ಬಂಧಿಸಲಾಗಿದೆ. ಶೂಟರ್‌ಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸುಮಿತ್ ಮತ್ತು ಕುನಾಲ್ ಸೇರಿದಂತೆ ಇತರರನ್ನು ಬಂಧಿಸಲಾಗಿದೆ. ಬಂದೂಕು ಖರೀದಿ ಹಾಗೂ ಶೂಟರ್‌ಗಳಿಗೆ ಮಾಹಿತಿ ನೀಡಿದ ಆರೋಪದ ಮೇಲೂ ಜತಿನ್ ಮತ್ತು ಸಮೀರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 18ರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಐದರಿಂದ ಆರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ನಟನ ಚಾಲಕ ಮತ್ತು ಯೂಟ್ಯೂಬರ್ ಒಬ್ಬರು ಗಾಯಗೊಂಡಿದ್ದು, ಟೈಗರ್ ಶ್ರಾಫ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ವರದಿಯಾಗಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button