
ಬೆಳಗಾವಿ: ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಪಾತ್ರವಾದ ಬೆಳಗಾವಿಯಲ್ಲಿ ಈವೆರೆಗೂ ಸಾಕಷ್ಟು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಆದರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದವರು ಕೇವಲ ಕೆಲವೇ ಬೆರಳೆನಿಕೆಷ್ಟು ಮಾತ್ರ…
ಹೌದು…ಗಡಿಜಿಲ್ಲೆ ಬೆಳಗಾವಿಯಲ್ಲಿ ಗಡಿ ವಿವಾದ, ಭಾಷಾ ಸಮಸ್ಯೆ, ರೈತರ ಹೋರಾಟ, ಅಕ್ರಮ ಸಾರಾಯಿ ದಂಧೆ, ಡ್ರಗ್ಸ್ ಮಾರಾಟ, ಅಧಿವೇಶನ, ಹಲವು ವರ್ಷಗಳಿಂದ ಸಂಚಾರ ದಟ್ಟಣೆ ಸಮಸ್ಯೆ ಸೇರಿದಂತೆ ವಿವಿಧ ಕಷ್ಟಕರ ಕೆಲಸಗಳನ್ನು ಸ್ಮಾಟ್ ಆಗಿ ಕೆಲಸ ನಿರ್ವಹಿಸಿ ಎಲ್ಲರ ಮಧ್ಯೆ ಸೈ ಎನಿಸಿಕೊಂಡ ಅಧಿಕಾರಿಗೆ ಬೆಳಗಾವಿ ಜನ ಫೀದಾ ಆಗಿದ್ದಾರೆ. ಈ ಸ್ಮಾಟ್ ಅಧಿಕಾರಿ ಯಾರೆಂದು ನೀವು ಹುಬ್ಬೇರಿಸಬೇಡಿ…ಇವರೆ ನೋಡಿ ನಮ್ಮ ಕುಂದಾನಗರಿಯ ಕನ್ನಡ ಭಾಷೆ ಮೇಲೆ ಅಪಾರ ಪ್ರೀತಿಯಿಟ್ಟ ಸ್ಮಾಟ್ ಅಧಿಕಾರಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್.
ಡಿಸಿ ಮೊಹಮ್ಮದ್ ರೋಷನ್ ವಿವಿರ: ಮೊಹಮ್ಮದ್ ರೋಷನ್ ಅವರು 2015ನೇ ಬ್ಯಾಚಿನ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ. ಹೈದರಾಬಾದ್‌ನವರಾದ ರೋಷನ್ ಅವರು ನಾಗರಿಕ ಸೇವಕರ ಕುಟುಂಬದಿಂದ ಬಂದವರು. ಅವರು ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ ಬಿ. ಟೆಕ್, ಹಣಕಾಸಿನಲ್ಲಿ ಎಂಬಿಎ ಮತ್ತು ಸಾರ್ವಜನಿಕ ನೀತಿಯಲ್ಲಿ ಎಂಎ ಪದವಿ ಪಡೆದಿದ್ದಾರೆ. ಮೊಹಮ್ಮದ್ ರೋಷನ್ ಅವರು ಡಿಸಿ ಹುದ್ದೆಗೆ ಮುಂಚೆ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಈ ಹಿಂದೆ ಹಾವೇರಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಸವಣೂರಿನ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸಂತ್ರಸ್ತರ ನೆರವಿಗೆ ನಿಂತ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಮುಖ್ಯವಾಗಿ ಬೆಳಗಾವಿಯಲ್ಲಿ ಕನ್ನಡ ಭಾಷೆ ಮೇಲೆ ಅಪಾರ ಪ್ರೀತಿಯಿಟ್ಟು ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿಸಿದ ಖಡಕ್ ಅಧಿಕಾರಿಯಾಗಿದ್ದಾರೆ.
ವರ್ಗಾವಣೆ ಮುನ್ಸೂಚನೆ ನೀಡಿದ ಡಿಸಿ:ಆಡಳಿತಾತ್ಮಕ ಪ್ರಕ್ರಿಯೆಯಾಗಿ ವರ್ಗಾವಣೆಯ ಸಮಯ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ಜನರೊಂದಿಗಿನ ಬಾಂಧವ್ಯದ ನೆನಪನ್ನು ಮೆಲುಕು ಹಾಕಿದ್ದಾರೆ. ನಾನು ಇಲ್ಲಿ ಅಧಿಕಾರದಲ್ಲಿ ಇರಲಿ, ಬಿಡಲಿ, ಈ ಮಣ್ಣಿನೊಂದಿಗೆ ಹಾಗೂ ಇಲ್ಲಿನ ಜನರೊಂದಿಗೆ ಬೆಸೆದಿರುವ ಸಂಬಂಧ ಮತ್ತು ಅನುಬಂಧ ಸದಾ ನನ್ನ ಹೃದಯದಲ್ಲಿ ಹಸಿರಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ತಮಗೆ ಆಡಳಿತ ನಡೆಸಲು ಮತ್ತು ಜನರ ಸೇವೆ ಮಾಡಲು ಅವಕಾಶ ನೀಡಿದ ಕರ್ನಾಟಕದ ಮಣ್ಣಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಸಮಯ ಬಂದಾಗ ಬದಲಾವಣೆ ಅನಿವಾರ್ಯ. ಸರ್ಕಾರ ನಮ್ಮನ್ನು ದೇಶದ ಯಾವುದೇ ಮೂಲೆಗೆ, ಯಾವುದೇ ಜವಾಬ್ದಾರಿಗೆ ನಿಯೋಜಿಸಿದರೂ ಅಲ್ಲಿ ಕರ್ತವ್ಯ ನಿಭಾಯಿಸಲು ನಾವು ಸದಾ ಸಿದ್ಧರಾಗಿದ್ದೇವೆ ಎಂಬ ಬದ್ಧತೆ. ತಮಗೆ ಸಿಗುವ ಮುಂದಿನ ಯಾವುದೇ ಹುದ್ದೆಯಲ್ಲೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಧಾರೆ ಎರೆದು, ದೇಶ ಹೆಮ್ಮೆ ಪಡುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ರೈತರ ಕಷ್ಟಕ್ಕೆ ಮಿಡಿದ ಡಿಸಿ: ಕಬ್ಬಿಗೆ ನ್ಯಾಯಯುತ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಕಬ್ಬು ಬೆಳೆಗಾರರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕು, ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಹಾಗೂ ಎಥನಾಲ್ ಖರೀದಿಗೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ರೈತರ ಸಮಸ್ಯೆಗಳನ್ನು ಗಮನವಿಟ್ಟು ಆಲಿಸಿದ ಜಿಲ್ಲಾಧಿಕಾರಿ, ಅವರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದರು. ಜಿಲ್ಲಾಧಿಕಾರಿಗಳ ಭರವಸೆ ಹಾಗೂ ಮಾತುಕತೆಯ ಬಳಿಕ ರೈತರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ಡಿಸಿ ನಡೆಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಧರ್ಮ ಸಾಮರಸ್ಯಕ್ಕೆ ರೋಷಣ ಮಾದರಿ: ಧರ್ಮ, ಜಾತಿ, ಪಂಥದ ಹೆಸರಿನಲ್ಲಿ ಅಂತರ, ವೈಷಮ್ಯ, ಅಸಹನೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರ ನಡೆ ಸಮಾಜಕ್ಕೆ ಮಾದರಿಯಾಗಿದೆ. ಇವರು ಮುಸ್ಲಿಂ ಧರ್ಮೀಯರಾದರೂ, ಅವರು ತಮ್ಮ ಕುಟುಂಬ ಸಮೇತ ಮನೆಯಲ್ಲಿ ಚೌತಿದಿನ ಗಣಪತಿ ಪ್ರತಿಷ್ಠಾಪಿಸಿ ಸಂಭ್ರಮಾಚರಣೆ ನಡೆಸಿರುವುದು ಧರ್ಮ ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ.
ನೋಡಲು ಯಾವ ಸ್ಟಾರ್ ಹೀರೋಗೂ ಕಡಿಮೆಯಿಲ್ಲ ಈ ಡಿಸಿ: ನಗರದ ರಸ್ತೆಯಲ್ಲಿ ಸಾಮಾನ್ಯ ಡ್ರೆಸ್ ಹಾಕಿಕೊಂಡು ಬಂದರೆ ಇವರನ್ನು ನೋಡಿ ಡಿಸಿ ಎಂದವರು ಯಾರು..? ನೋಡಲು ಇವರು ಯಾವ ಚಿತ್ರ ನಟನಿಗೂ ಕಡಿಮೆ ಇಲ್ಲದ ರೀತಿ ಸ್ಮಾಟ್ ಆಗಿದ್ದಾರೆ ನಮ್ಮ ಡಿಸಿ ಮೊಹಮ್ಮದ್ ರೋಷನ್. ಈವರನ್ನು ನೋಡಿ ಆಶ್ಚರ್ಯ ಆದವರು ಸುಮಾರು ಜನ, ಇವರು ಯಾವುದೋ ಕಾಲೇಜಿನಲ್ಲಿ ಓದುತ್ತಿರುವ ಹುಡುಗ ಎಂದವರು ಎಷ್ಟೋ ಜನ.. ಇವರನ್ನು ಒಮ್ಮೆ ನೋಡಿ ಮತ್ತೋಮ್ಮೆ ತಿರುಗಿ ನೋಡಿದವರು ಇನ್ನೆಷ್ಟೋ ಜನ..ನೋಡಲು ಚಿರ ಯುವಕನಂತೆ ಕಂಡರೂ ಸಹ ಇವರು ನೋಡಲು ಸಕ್ಕತ್ ಸ್ಮಾಟ್ ಆಗಿದ್ದಾರೆ. ಒಟ್ಟಾರೆ ಬೆಳಗಾವಿಯ ಜ್ವಲಂತ ಬರಗಾಲದ ಪರಿಸ್ಥಿತಿ ನಿಭಾಯಿಸುವಲ್ಲಿ, ಪ್ರವಾಹ ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಹಾಗೂ ಕಬ್ಬು ಬೆಳೆಗಾರರ ಮತ್ತು ರೈತರ ಪಾದಯಾತ್ರೆಯ ನೇರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ರೈತ ಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಡಿಸಿ ಮೊಮ್ಮದ ರೋಷಣ ಅವರು ಬೆಳಗಾವಿ ಜನತೆಯ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಡಿಸಿ ಇರಬೇಕು ಎನ್ನುತ್ತಿದಾರೆ ಜನತೆ.



