Health & FitnessState

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಜೊತೆಗೆ ಔಷಧ ದರಪಟ್ಟಿ ಪ್ರದರ್ಶನವೂ ಕಡ್ಡಾಯ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ  ಚಿಕಿತ್ಸಾ ವೆಚ್ಚ ಮಾತ್ರವಲ್ಲದೆ ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ನೀಡಲಾಗದ ‘ಶೆಡ್ಯೂಲ್ಡ್ ಔಷಧ’ಗಳ  ದರಪಟ್ಟಿಯನ್ನೂ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಸಂಘಟನೆ (PHANA – ಫನಾ) ಪದಾಧಿಕಾರಿಗಳೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್ ಆಸ್ಪತ್ರೆಗಳ ಸುಲಿಗೆ ಪ್ರವೃತ್ತಿ ಮತ್ತು ಅತಿಯಾದ ದರ ವಸೂಲಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯ ಕ್ರಮದ ಬೆನ್ನಲ್ಲೇ, ಇದೀಗ ರೋಗಿಗಳಿಗೆ ಹೊರೆಯಾಗುತ್ತಿರುವ ಇತರ ಅಗತ್ಯ ಔಷಧಗಳ ದರ ನಿಯಂತ್ರಣಕ್ಕೂ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಸಭೆಯಲ್ಲಿ ಔಷಧಗಳ ಗಗನಮುಖಿ ಬೆಲೆಯ ಬಗ್ಗೆ ಸಚಿವರು ತರಾಟೆಗೆ ತೆಗೆದುಕೊಂಡಾಗ, ಔಷಧಗಳ ಮೂಲ ದರವನ್ನು (ಬೇಸ್ ಪ್ರೈಸ್) ಕಂಪನಿಗಳೇ ನಿಗದಿಪಡಿಸುತ್ತವೆ, ಇದರಲ್ಲಿ ಆಸ್ಪತ್ರೆಗಳ ಪಾತ್ರವೇನೂ ಇಲ್ಲ. ಫ್ಯಾಕ್ಟರಿ ಹಂತದಲ್ಲೇ ಮೂಲ ದರ ಇಳಿಕೆಗೆ ಕ್ರಮ ಕೈಗೊಳ್ಳಿ ಎಂದು ಖಾಸಗಿ ಆಸ್ಪತ್ರೆಗಳ ಮುಖಂಡರು ಮನವಿ ಮಾಡಿದರು. ಜತೆಗೆ ಚಿಕಿತ್ಸೆ ಹಾಗೂ ಔಷಧಗಳ ದರ ಪ್ರದರ್ಶನ ಫಲಕಗಳನ್ನು ಅಳವಡಿಸಲು ಆರು ತಿಂಗಳ ಕಾಲಾವಕಾಶ ನೀಡುವಂತೆ ಕೋರಿದರು.

ಈ ಮನವಿಯನ್ನು ಖಾದರ್‌ ನೇರವಾಗಿ ನಿರಾಕರಿಸಿದ್ದಾರೆ. “ಆರು ತಿಂಗಳು ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಎಷ್ಟು ಸಮಯಾವಕಾಶ ನೀಡಬೇಕೆಂದು ತೀರ್ಮಾನಿಸುತ್ತೇನೆ. ‘ನಾನ್ ಶೆಡ್ಯೂಲ್ಡ್’ ಔಷಧಗಳ ದರದ ವಿಚಾರ ನ್ಯಾಯಾಲಯದಲ್ಲಿದ್ದು, ಕೋರ್ಟ್ ನಿರ್ದೇಶನದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ವಿದೇಶಿ ಫಂಡಿಂಗ್ ಆಕ್ಷೇಪ:
ವೈದ್ಯಕೀಯ ಕ್ಷೇತ್ರದ ಕಾರ್ಪೊರೇಟೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಚಿವರು, ವೈದ್ಯರೇ ಆಸ್ಪತ್ರೆಗಳನ್ನು ಮುನ್ನಡೆಸಿದಾಗ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ ವಿದೇಶಿ ಕಂಪನಿಗಳು ದೊಡ್ಡ ಮಟ್ಟದ ಹಣ ಹೂಡಿಕೆ (ಫಂಡಿಂಗ್) ಮಾಡಿ ಲಾಭ ಗಳಿಕೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿವೆ. ವೈದ್ಯರಿಗೆ ಟಾರ್ಗೆಟ್ ನೀಡಿ ಚಿಕಿತ್ಸಾ ದರವನ್ನು ವಿಪರೀತ ಹೆಚ್ಚಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಮೆ ಕಂಪನಿಗಳಗೂ ಮೂಗುದಾರ
ಆಸ್ಪತ್ರೆಗಳು ಮತ್ತು ವಿಮಾ ಕಂಪನಿಗಳ ನಡುವಿನ ವ್ಯವಹಾರಗಳ ಮೇಲೂ ನಿಗಾ ಇರಿಸಲು ಸರ್ಕಾರ ಮುಂದಾಗಿದೆ. ಒಂದು ಲಕ್ಷ ರೂಪಾಯಿ ಆಗುವ ಸರ್ಜರಿಗೆ ಮೂರು ಲಕ್ಷ ರೂಪಾಯಿ ಬಿಲ್ ಕಳುಹಿಸಲಾಗುತ್ತದೆ. ಅಂತಿಮವಾಗಿ 50 ಸಾವಿರ ರೂಪಾಯಿಯನ್ನು ರೋಗಿಯ ಕಡೆಯವರೇ ಭರಿಸಬೇಕೆಂದು ಹೇಳುತ್ತಾರೆ. ವಿಮಾ ಕಂಪನಿಗಳು ಎಲ್ಲೋ ದೂರದಲ್ಲಿ ಕುಳಿತು ಸರಿಯಾಗಿ ಸ್ಪಂದಿಸುವುದಿಲ್ಲ. ಈ ಅನ್ಯಾಯವನ್ನು ಯಾರಲ್ಲಿ ಕೇಳುವುದು? ಹಾಗಾಗಿ ಶೀಘ್ರದಲ್ಲೇ ಇನ್ಶೂರೆನ್ಸ್ ಕಂಪನಿಗಳ ಜೊತೆಗೂ ಪ್ರತ್ಯೇಕ ಸಭೆ ನಡೆಸಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುವುದು ಯು.ಟಿ. ಖಾದರ್ ಎಚ್ಚರಿಕೆ ನೀಡಿದರು

ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ದರಗಳು ಗಗನಕ್ಕೇರಿವೆ. ಇವರು ಆರೋಗ್ಯ ಸೇವೆಯನ್ನು ಕೇವಲ ಬ್ಯುಸಿನೆಸ್ ಮಾಡಿಕೊಂಡಿದ್ದಾರೆಯೇ? ಆಸ್ಪತ್ರೆಗಳಿಗೆ ನಷ್ಟವಾಗಬಾರದು ನಿಜ, ಆದರೆ ಅದೇ ನೆಪದಲ್ಲಿ ಜನರ ಜೇಬು ಲೂಟಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಚಿಕಿತ್ಸಾ ದರಪಟ್ಟಿಯನ್ನು ಪ್ರದರ್ಶಿಸಲು ಇವರಿಗೆ ಇರುವ ತೊಂದರೆಯಾದರೂ ಏನು? ಔಷಧಿಗಳಿಗೆ ದುಪ್ಪಟ್ಟು ದರ ವಸೂಲಿ ಮಾಡುವುದು, ಕಮಿಷನ್ ದಂಧೆ, ವೈದ್ಯರಿಗೆ ಟೂರ್ ಆಯೋಜಿಸುವುದು ಹಾಗೂ ಕೇವಲ ಅತಿಯಾದ ಲಾಭ ತರುವ ಔಷಧಿಗಳನ್ನು ಮಾತ್ರ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಮಧ್ಯವರ್ತಿಗಳ ಹಾವಳಿಯೂ ಮಿತಿಮೀರಿದೆ. ಇಂತಹ ದಂಧೆಗಳಿಗೆಲ್ಲಾ ಸರ್ಕಾರ ಶೀಘ್ರವೇ ಕಡಿವಾಣ ಹಾಕಲಿದೆ ಎಂದು ಕಟುವಾಗಿ ಎಚ್ಚರಿಸಿದರು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button