Local News

ಅಕ್ಟೋಬರ್ 23 ರಿಂದ 25 ರವರೆಗೆ ಅದ್ಧೂರಿ ಉತ್ಸವ ಆಚರಣೆ ಕಿತ್ತೂರಿನ, ಕಿತ್ತೂರು ಕೋಟೆ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಜರುಗಲಿದೆ.

ಬೆಳಗಾವಿ : ಜಿಲ್ಲಾ ಆಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವೀರರಾಣಿ ಕಿತ್ತೂರು ಚನ್ನಮ್ಮನವರ ಕಿತ್ತೂರು ಉತ್ಸವದ ೨೦೨ನೇ ವರ್ಷದ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭವು ಅಕ್ಟೋಬರ್ ೨೩, ೨೦೨೬ ರಂದು (ಶುಕ್ರವಾರ) ಸಂಜೆ ೭ ಗಂಟೆಗೆ ಕಿತ್ತೂರಿನ, ಕಿತ್ತೂರು ಕೋಟೆ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಜರುಗಲಿದೆ.

ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ. ಸ್ವಾಮೀಜಿ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು ಹಾಗೂ ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ. ಪಂಚಾಕ್ಷರಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹಾಗೂ ಸಹಕಾರ ಸಚಿವರಾದ ಲಕ್ಷ್ಮಣ್ ಸವದಿ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕರ್ನಾಟಕ ಸರ್ಕಾರದ ಮಾನ್ಯ ವಿಶೇ? ಪ್ರತಿನಿಧಿ ೨ ನವದೆಹಲಿ ಪ್ರಕಾಶ ಹುಕ್ಕೇರಿ, ವಾಯುವ್ಯ ಸಾರಿಗೆ ನಿಗಮ ನಿಯಮಿತ ಅಧ್ಯಕ್ಷರಾದ ಭರಮಗೌಡ ಕಾಗೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿ. ಅಧ್ಯಕ್ಷ ಭರಮಣ್ಣ ಉಪ್ಪಾರ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಚಿಕ್ಕೋಡಿ ಲೋಕಸಭಾ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಜಿಲ್ಲಾ ಲೋಕಸಭಾ ಸಂಸದರಾದ ಜಗದೀಶ್ ಶೆಟ್ಟರ, ಉತ್ತರ ಕನ್ನಡ ಲೋಕಸಭಾ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರುಗಳು ಗೌರವಾನ್ವಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಜಿಲ್ಲೆಯ ಎಲ್ಲ ಸಂಸದರು, ಶಾಸಕರು, ಪರಿ?ತ್ ಸದಸ್ಯರು, ಜನಪ್ರತಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳು ಜರುಗಲಿವೆ.

ಕಾಕತಿಯಲ್ಲಿ ಚನ್ನಮ್ಮ ಮೂರ್ತಿಗೆ ಪೂಜೆ: ರಾಣಿ ಚನ್ನಮ್ಮ ತವರೂರು ಕಾಕತಿಯಲ್ಲಿ ಚನ್ನಮ್ಮ ಪ್ರತಿಮೆಗೆ ಮುಂಜಾನೆ ೮.೩೦ ಗಂಟೆಗೆ ಪೂಜೆ ಸಲ್ಲಿಸಲಾಗುವುದು. ಭೂತರಾಮಟ್ಟಿಯ ಮುಕ್ತಿಮಠದ ಧಮಶ್ರೀ ತಪೋರತ್ನ ಶಿವಿಸದ್ದ ಸೋಮೇಶ್ವರ ಶಿಚಾಚಾರ್ಯ ಮಹಾಸ್ವಾಮಿಗಳು, ಕಾಕತಿಯ ಶಿವಪೂಜಿಮಠದ ಪೂಜ್ಯ ರಾಚಯ್ಯ ಮಹಾಸ್ವಾಮಿಗಳು, ಉದಯ ಶಿವಪುತ್ರಯ್ಯಾ ಹಿರೇಮಠ ದಿವ್ಯ ಸಾನಿಧ್ಯ ವಹಿಸುವರು. ಲೋಕೊಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾದ ಸಂಸದರಾದ ಕು.ಪ್ರಿಯಾಂಕಾ ಜಾರಕಿಹೊಳಿ ಅವರು ಆಗಮಿಸುವರು. ಸಿರಿಗನ್ನಡ ಮಹಿಳಾ ವೇದಿಕೆ ಸಾಹಿತಿಗಳಾದ ರಜನಿ ಜೀರಗ್ಯಾಳ ಅವರು ಉಪನ್ಯಾಸಕರಾಗಿ ಆಗಮಿಸುವರು.

ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ: ದಿನಾಂಕ: ೨೩.೧೦.೨೦೨೬, ಶುಕ್ರವಾರ ಬೆಳಗ್ಗೆ ೯ .ಗಂಟೆಗೆ ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ಅವರು ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ ೧೧.೦೦ ಗಂಟೆಗೆ ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ವಿಜಯಜ್ಯೋತಿಗೆ ಸ್ವಾಗತ ಹಾಗೂ ಸಂಸ್ಥಾನದ ಧ್ವಜಾರೋಹಣ ಕಾರ್ಯಕ್ರಮವನ್ನು ಲೋಕಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಅವರು ನೆರವೇರಿಸುವರು. ಬೆಳಗ್ಗೆ ೧೧.೧೫ ಗಂಟೆಗೆ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಅವರು ಜಾನಪದ ಕಲಾವಾಹಿನಿಗೆ ಚಾಲನೆ ನೀಢುವರು. ಮದ್ಯಾಹ್ನ ೧೨-೦೦ ಗಂಟೆಗೆ ಕೋಟೆಯ ದರ್ಬಾರ ಹಾಲ ಎದುರಿನ ಫಲ ಪುಷ್ಪ ಪ್ರದರ್ಶನವನ್ನು ಸಂಸದರಾದ ಕು. ಪ್ರಿಯಾಂಕಾ ಜಾರಕಿಹೊಳಿ ಅವರು ನೆರವೇರಿಸುವರು. ಮದ್ಯಾಹ್ನ ೧೨.೩೦ ಗಂಟೆಗೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಸ್ತು ಪ್ರದರ್ಶನ ಮಳಿಗೆ, ಮಧ್ಯಾಹ್ನ ೧೨.೪೫ ಗಂಟೆಗೆ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ಆರೋಗ್ಯ ಮೇಳವನ್ನು, ಮಧ್ಯಾಹ್ವ ೧೨.-೧೫ ಗಂಟೆಗೆ ಶಾಸರಕಾದ ಬಾಬಾಸಾಹೇಬ ಪಾಟೀಲ ಅವರು ಎ.ಪಿ.ಎಂ.ಸಿ ಆವರಣದಲ್ಲಿ ಜಾನುವಾರು ಜಾತ್ರೆಯನ್ನು ಉದ್ಘಾಟಿಸಲಿದ್ದಾರೆ.
ಸರದಾರ ಗುರುಸಿದ್ದಪ್ಪ ವೇದಿಕೆ (ವೀರಭದ್ರೇಶ್ವರ ಕಲ್ಯಾಣ ಮಂಟಪ): ಮಧ್ಯಾಹ್ನ ೩ ಗಂಟೆಯಿಂದ ಸಾಯಂಕಾಲ ೭.೩೦ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಶ್ರೀ ಬಸವೇಶ್ವರ ಭಜನಾ ಮಂಡಳಿ, ಜಕ್ಕನಾಯಕನಕೊಪ್ಪ ಅವರಿಂಧ ಭಜನೆ,ಶ್ರೀ ಫಕೀರಪ್ಪ ನಾಗಮೇತ್ರಿ ತಂಡದಿಂದ ಶ್ರೀ ಕೃ? ಪಾರಿಜಾತ ಪದಗಳು, ಜಕನಾಯಕನಕೊಪ್ಪ ಶ್ರೀ ಮಹರ್ಷಿ ವಾಲ್ಮೀಕಿ ಸಂಘದಿಂದ ತತ್ವಪದ ಶ್ರೀ ಸಿದ್ದಲಿಂಗೇಶ್ವರ ಭಜನಾ ಸಂಘದಿಂದ ಭಜನೆ ,ಶ್ರೀ ಯಮನೂರೇಶ್ವರ ಭಜನಾ ಸಂಘದಿಂದ ಭಜನೆ, ಶ್ರೀ ಫಕೀರೇಶ್ವರ ಭಜನಾ ಮಂಡಳದಿಂದ ಭಜನೆ, ಶ್ರೀ ಬಸವೇಶ್ವರ ಭಜನಾ ಮಂಡಳದಿಂಧ ಭಜನೆ,,ಭಜನೆ ೦೫.೦೦ ೨೦ ೦೫.೧೫ ಶ್ರೀ ಸಿದ್ದಾರೂಢ ಭಜನಾ ಮಂಡಳದಿಂದ ಭಜನೆ, ಶ್ರೀಮತಿ ಸುನಂದಾ ಜಾಡರ ಅವರಿಂದ ಜಾನಪದ ಗೀತೆ,ಶ್ರೀ ಗ್ರಾಮದೇವಿ ಭಜನಾ ಮಂಡಳದಿಂದ ಭಜನೆ,ಶ್ರೀ ವಿಠಲ ದೇವರ ಭಜನಾ ಮಂಡಳದಿಂಧ ಭಜನೆ,ಶ್ರೀ ಬಸವೇಶ್ವರ ಭಜನಾ ಮಂಡಳದಿಂದ ಭಜನೆ, ಶ್ರೀಮತಿ ಭವಾನಿ ಅವರಿಂದ ಸುಗಮ ಸಂಗೀತ, ಶ್ರೀ ಅಪ್ಪಣ್ಣ ಬೋಗೂರ ಅವರಿಂದ ಮಿಮಿಕ್ರಿ, ಶ್ರೀ ಶಿವಾನಂದ ಅವರಿಂದ ರಾಯಣ್ಣ ರೂಪಕ, ಶ್ರೀಮತಿ ಸ್ನೇಹಾ ನಾಗುಪ್ತಿಕರ ಅವರಿಂದ ಭರತನಾಟ್ಯ, ರಷ್ಟಿ ಪುಂಡಲೀಕ ವಾಸ್ಟರ್ ಅವರಿಂದ ಭಜನೆ, ತಿಗಡಿಯ ಶ್ರೀ ಬೇಡರ ಕನ್ನಪ್ಪ ಭಜನಾ ಸಂಘ ದಿಂದ ಭಜನೆ, ನಿಚ್ಚಣಕಿಯ ಶ್ರೀ ಬಸವೇಶ್ವರ ಭಜನಾ ಮಂಡಲಿ, ಜಕನಾಯಕನಕೊಪ್ಪ ಶ್ರೀ ನಿಲಕಂಠ ಭಾಸ್ಕರಪ್ಪ ಬಡಿಗೇರ , ಬಚ್ಚನಕೇರಿ ಶ್ರೀ ಮಹರ್ಷಿ ವಾಲ್ಮೀಕಿ ಭಜನಾ ಕಲಾವಿದರ ಮಂಡಳದವರಿಂದ ಭಜನೆ, ಶ್ರೀ ಗಂಗಪ್ಪ ರಾ ಭಜಂತ್ರಿ ಕಿತ್ತೂರು ಅವರಿಂದ ಶಹನಾಯಿ ಕಾರ್ಯಕ್ರಮಗಳು ಜರುಗಲಿವೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕಿತ್ತೂರು ರಾಣಿ ಚನ್ನಮ್ಮಾ ವೇದಿಕೆ, ಕೋಟೆ ಆವರಣದಲ್ಲಿ ಸಾಯಂಕಾಲ ೪ ಗಂಟೆಯಿಂದ ೭.೩೦ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಕು .ಸಹನಾ ಬೋಗೂರ ಮತ್ತು ಪ್ರಿಯಾಂಕ ತಲಗಾರ ಅವರಿಂದ ಸಂಗೀತ, ಶ್ರೀ ಯದುಕುಮಾರ ಮತ್ತು ತಂಡದಿಂದ ನಾದಸ್ವರ,ಶ್ರೀ ಲೋಕೇಶ ಚಕ್ಕರೆ ಮತ್ತು ತಂಡದಿಂದ ಸಂಗೀತ, ಶ್ರೀ ಹನುಮಂತ ನರೆಗಲ್ ಮತ್ತು ತಂಡದವರಿಂದ ವಚನ ಗಾಯನ, ಶ್ರೀಮತಿ ನಾಗರತ್ನಾ ಬ ಅವರಗೋಳ ಮತ್ತು ತಂಡದಿಂದ ವಾಯಲಿನ, ಶ್ರೀ ಪ್ರಕಾಶ ಮಲ್ಲಿಗವಾಡ ಮತ್ತು ತಂಡದವರಿಂದ ನೃತ್ಯ ರೂಪಕ, ಶ್ರೀ ನಾಗರಾಜ ಜೋರಾಪುರ ಮತ್ತು ತಂಡದಿಂದ ಹಾಸ್ಯ ಸಂಜೆ, ಶ್ರೀಮತಿ ಮಂಜುಳಾ ಜೋಶಿ ಮತ್ತು ತಂಡದಿಂದ ವಚನ ಸಂಗೀತ, ರೂಪಾ ಖಡಗಾಂವಿ ಅವರಿಂದ ರಂಗ ಗೀತೆಗಳು, ಶ್ರೀಮತಿ ರೋಹಿಣಿ ಆರ್ ಇಮಾರತಿ ಅವರಿಂದ ನೃತ್ಯ ರೂಪಕ, ಶ್ರೀ ಇಬ್ರಾಹಿಂ ಸುತಾರ ಮತ್ತು ತಂಡದವರಿಂದ ತತ್ವಪದ, ಶ್ರೀ ಸುಮಂತ ವಸಿಷ್ಟ ಮೈಸೂರ ಅವರಿಂದ ಸುಗಮ ಸಂಗೀತ, ಶ್ರೀ ಬಾಬಾಸಾಬ ಕಾಂಬಳೆ ಜೂನಿಯರ ಉಪೇಂದ್ರ, ರವಿಚಂದ್ರ ಮತ್ತು ತಂಡದಿಂದ ಮಿಮಿಕ್ರಿ ರಾತ್ರಿ ೮.೩೦ ಗಂಟೆಯಿಂದ ರಾಮಚಂದ್ರ ಹಡಪದ ಮತ್ತು ತಂಡದಿಂದ ರಸಮಂಜರಿ, ಶೃತಿಪ್ರಿಯಾ ಅಕಾಡೆಮಿ ಯಿಂದ ನೃತ್ಯ ರೂಪಕ, ಚಂದನ ಶೆಟ್ಟಿ ಮತ್ತು ಶಮಿತಾ ಮಳ್ನಾಡ ತಂಡದವರಿಂದ ಸಂಗೀತ ಸಂಜೆ ಜರುಗಲಿದೆ.

ಅಮಟೂರು ಬಾಳಪ್ಪನವರ ವೇದಿಕೆ, (ಕಿತ್ತೂರ ರಾಣಿ ಚನ್ನಮ್ಮ ಸಭಾಭವನ ಚನ್ನಮ್ಮನ ವೃತ್ತ) ೪ಗಂಟೆಯಿಂದ ೯.೩೦ ರವರೆಗೆ ಶ್ರೀ ಪ್ರಭು ಕುಂದರಗಿ ತಂಡದಿಂದ ಸಂಗೀತ, ಅಣ್ಣಾರಾವ ಶೆಳ್ಳಗಿ ಕಲಬುರಗಿ ತಂಡದಿಂದ ಹಿಂದೂಸ್ತಾನಿ ಸಂಗೀತ, ಕರೆಮ್ಮದೇವಿ ಭಜನಾ ಮಂಡಳಿಯಿಂದ ಭಜನೆ, ಶ್ರೀಮತಿ ಲಕ್ಷ್ಮೀ ಹೆಗಡೆ ತಂಡದಿಂದ ಹಿಂದೂಸ್ತಾನಿ ಸಂಗೀತ, ಶ್ರೀಮತಿ ಜ್ಯೋತಿ ಕುಬಸದ ತಂಡದಿಂದ ನೃತ್ಯ ರೂಪಕ, ಶ್ರೀ ದೀಪಕ ಮತ್ತು ತಂಡ ಚಿಕ್ಕಮಂಗಳೂರ ಇವರಿಂದ ಸುಗಮ ಸಂಗೀತ, ಶ್ರೀಮತಿ ಪ್ರೀಯ ಮತ್ತು ತಂಡ ಹಾಸನ ಇವರಿಂದ ತತ್ವಪದ, ಶ್ರೀ ಶೇಖರಪ್ಪ ಮತ್ತು ತಂಡ ಹಾಸನ ಇವರಿಂದ ರಂಗ ಗೀತೆಗಳು, ಶ್ರೀ ಅಶೋಕ ಕುಮಾರ ಕೋಲಾರ ಇವರಿಂದ ಜಾನಪದ ಗಾಯನ, ಶ್ರೀಮತಿ ಎಂ.ಡಿ. ಸುಮಿತ್ರ ಕೋಲಾರ ತಂಡದಿಂದ ಕರಬಲ ಮೇಳ, ನಾಟ್ಯಾಂಕುರ ಪರ್ಪಾಮಿಂಗ್ ಆರ್ಟ ಬೆಂಗಳೂರು ಇವರಿಂದ ನೃತ್ಯ ರೂಪಕ, ಯಾದವೆಂದ್ರ ಪೂಜೆರಿ ಬೆಳಗಾವಿ ಇವರಿಂದ ಸಂಗೀತ, ನವದುರ್ಗಾ ನೃತ್ಯ ಅಕಾಡೆಮಿ ಧಾರವಾಡ ತಂಡದಿಂದ ನೃತ್ಯ ರೂಪಕ, ದ್ರವ್ಯಾ ಕಮ್ಮಾರ ತಂಡದಿಂದ ನೃತ್ಯ ರೂಪಕ, ೭.೩೦ ರಿಂದ ೯.೩೦ ರ ವರಗೆ ಶ್ರೀ ಪಲ್ಲವಿ ಖಾನಪೇಟ ಮತ್ತು ತಂಡದಿಂದ ಸಂಗೀತ, ಶ್ರೀ ಗೋಪಾಲ ಚಪಣೆ ಯಮಕನಮರಡಿ ಹುಕ್ಕೇರಿ ಅವರಿಂದ ಬಯಲಾದ ಪದಗಳು,ಭವ್ಯಶ್ರೀ ಮತ್ತು ತಂಡದಿಂದ ನೃತ್ಯ ರೂಪಕ ಜರುಗಲಿವೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button