ಸಿಎಂ ಬದಲಾವಣೆ ಬಗ್ಗೆ ವೀರಪ್ಪ ಮೊಯ್ಲಿ ಹೇಳಿಕೆ: ಮೂರ್ನಾಲ್ಕು ಶಾಸಕರ ಮಾತು ಕೇಳಿ ಸಿಎಂ ಬದಲಾಯಿಸಲು ಆಗೋಲ್ಲ: ಸಚಿವ ಸಂತೋಷ್ ಲಾಡ್

ಬೆಂಗಳೂರು: ಸಿಎಂ ಬದಲಾವಣೆ ಬಗ್ಗೆ ವೀರಪ್ಪ ಮೊಯ್ಲಿ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ. ಅದೆಲ್ಲವೂ ಹೈಕಮಾಂಡ್‌ಗೆ ಬಿಟ್ಟದ್ದು, ನನ್ನ ವೈಯಕ್ತಿಕ ಅಭಿಪ್ರಾಯ ಹೇಳಲು ಆಗವುದಿಲ್ಲ ಎಂದಿದ್ದಾರೆ.
ಎಲ್ಲಾರೂ ಅವರವರ ವೈಯಕ್ತಿಕ ಅಭಿಪ್ರಾಯ ಹೇಳುತ್ತಿರಬಹುದು. ಅದರ ಬಗ್ಗೆ ನನ್ನ ಅಭಿಪ್ರಾಯ ಹೇಳಲು ಹೋಗುವುದಿಲ್ಲ. ನಮ್ಮಲ್ಲಿ 140 ಶಾಸಕರು ಇದ್ದಾರೆ. ಯಾರೋ ಮೂರು ನಾಲ್ಕು ಶಾಸಕರು ಮಾತನಾಡಿದ್ದಾರೆ. ಅದನ್ನು ಎಲ್ಲರ ತೀರ್ಮಾನ ಎಂದು ಪರಿಗಣಿಸಲು ಆಗಲ್ಲ. ಕೊನೆಗೆ ಎಲ್ಲರೂ ಪಕ್ಷದ ನಿಯಮಕ್ಕೆ ಶಿಸ್ತುಬದ್ಧವಾಗಿ ಬರುತ್ತಾರೆ. ಕೆಲವರು ಕೆಲವು ಸಂದರ್ಭದಲ್ಲಿ ಆ ರೀತಿ ಮಾತನಾಡಿರುತ್ತಾರೆ ಅಷ್ಟೇ ಎಂದು ಹೇಳಿದರು.
ನಮ್ಮ ನಿಫ್ಟಿ ಕೆಳಗೆ ಬೀಳ್ತಿದೆ. ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ? ಸ್ಟಾಕ್ ಎಕ್ಸ್‌ಚೇಂಜ್ ಕುಸಿದು ಹೋಗುತ್ತಿದೆ. ಇದರ ಬಗ್ಗೆ ಚರ್ಚೆ ಮಾಡಿ. ಬಿಜೆಪಿ ನಾಯಕರು ಮಾತನಾಡಿ ಹೋಗುತ್ತಾರೆ ಇದರ ಬಗ್ಗೆ ಮಾತನಾಡಿ. 15 ಲಕ್ಷ ಕೊಡುತ್ತೇವೆ ಎಂದು ಎದೆ ತಟ್ಟಿ ಹೇಳಿದ್ರು, ಆದರೆ ಇಲ್ಲಿಯವರೆಗೆ ಏನಾದರೂ ಕೊಟ್ಟಿದ್ದಾರಾ? ಈ ಬಗ್ಗೆ ಯಾಕೆ ಚರ್ಚೆ ಮಾಡಲ್ಲ ಎಂದು ಪ್ರಶ್ನಿಸಿದರು.


