ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮ ಪಂಚಾಯತ ಅಧಿಕಾರಿ ನಾಗೇಂದ್ರ ಪತ್ತಾರ ಎಂಬುವರಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಮರಾಠಿ ಭಾಷಿಕನೋರ್ವ ಆವಾಜ್ ಹಾಕಿದ ಘಟನೆ

ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮ ಪಂಚಾಯತ ಅಧಿಕಾರಿ ನಾಗೇಂದ್ರ ಪತ್ತಾರ ಎಂಬುವರಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಮರಾಠಿ ಭಾಷಿಕನೋರ್ವ ಆವಾಜ್ ಹಾಕಿದ ಘಟನೆ ನಡೆದಿದ್ದು, ಕನ್ನಡ ರಕ್ಷಣಾ ವೇದಿಕೆಯೂ ಪುಂಡನ ವಿರುದ್ಧ ಕ್ರಮಕೈಗೊಳ್ಳದಿದ್ದರೇ ರಸ್ತೆಗಿಳಿದು ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದೆ.
ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮ ಪಂಚಾಯತ ಅಧಿಕಾರಿ ನಾಗೇಂದ್ರ ಪತ್ತಾರ ಎಂಬುವರಿಗೆ ಮರಾಠಿ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಮರಾಠಿ ಭಾಷಿಕನೋರ್ವ ಆವಾಜ್ ಹಾಕಿದ ಘಟನೆ ನಡೆದಿದೆ. ಈ ಕುರಿತಾದ ವಿಡ್ಹಿಯೋ ಎಲ್ಲೆಡೆ ವೈರಲ್ ಅಗಿದ್ದು, ಕೂಡಲೇ ಆತನ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಲಾಗುತ್ತಿದೆ.
ಇನ್ನು ಈ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ದೀಪಕ ಗುಡಗನಟ್ಟಿ ಅವರು ಬಲವಾಗಿ ಖಂಡಿಸಿದ್ದು, ಸಿದ್ಧರಾಮಯ್ಯನವರನ್ನು ಕನ್ನಡ ಸಿದ್ಧರಾಮಯ್ಯ ಎನ್ನುತ್ತಾರೆ. ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಎನ್ನಲಾಗುತ್ತದೆ. ಆದರೇ, ಇಲ್ಲಿನ ಜಿಲ್ಲಾಧಿಕಾರಿಗಳೇ ಕನ್ನಡ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರ ಕವಡೆಕಾಸಿನ ಕಿಮತ್ತು ನೀಡುತ್ತಿಲ್ಲ. ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿ, ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೇ, ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮರಾಠಿಯಲ್ಲಿ ಕೈಬರಹದ ಮೂಲಕ ದಾಖಲೆಗಳನ್ನು ನೀಡಲಾಗುತ್ತಿದೆ. ಭಾಷೆ ವಿಚಾರವನ್ನು ಸರ್ಕಾರಿ ದಾಖಲೆಗಳನ್ನು ಮರಾಠಿಯಲ್ಲಿ ನೀಡಿದರೇ, ಸಹಿಸುವುದಿಲ್ಲ. ಮತ್ತೊಂದು ದೊಡ್ಡ ಆಂದೋಲನ ಆಗುತ್ತದೆ ಎಂದು ಎಚ್ಚರಿಕೆ. ತಕ್ಷಣವೇ ನಿಲ್ಲಿಸದಿದ್ದರೇ, ಕನ್ನಡ ವಿರೋಧಿ ಜಿಲ್ಲಾಧಿಕಾರಿಗಳನ್ನು ಓಡಿಸಿ, ಕನ್ನಡವನ್ನು ಉಳಿಸಿ ಎಂಬ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.


