ಕುಂಭಮೇಳಕ್ಕೆ 10 ಸಾವಿರ ಟ್ರೈನ್, ಇನ್ನು 3 ಸಾವಿರ ಫ್ಲೈಟ್ ಹೋಗಿವೆ: ಸುಳ್ಳು ಹೇಳೋದು ಬಿಡಿ ಸಂತೋಷ್ ಲಾಡ್ ಟಾಂಗ್
ಕುಂಭಮೇಳದಲ್ಲಿ ಭಾಗಿಯಾದವರು 65 ಕೋಟಿ ಭಕ್ತರೇ? ಸುಳ್ಳು ಹೇಳೋದು ಬಿಡಿ: ಸಂತೋಷ್ ಲಾಡ್ ಕಿಡಿನುಡಿ

- ಕುಂಭಮೇಳಕ್ಕೆ 10 ಸಾವಿರ ಟ್ರೈನ್, ಇನ್ನು 3 ಸಾವಿರ ಫ್ಲೈಟ್ ಹೋಗಿವೆ
- 65 ಕೋಟಿ, 70 ಕೋಟಿ ಜನ ಹೋಗಿದ್ರು ಅಂತಾರಲ್ಲ ಸುಳ್ಳು ಹೇಳೋದೆ ಇವ್ರ ಕೆಲಸ
- ಗೋರಕ್ಷಣೆ ಹಾಗೂ ಗೋಮಾಂಸ ವಿಚಾರವಾಗಿ ಸದನದಲ್ಲಿ ಜಟಾಪಟಿ
- ಗೋಮಾಂಸ ರಫ್ತಿನಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ: ಸಂತೋಷ್ ಲಾಡ್
ವಾರಣಾಸಿ ಮಹಾಕುಂಭಮೇಳಕ್ಕೆ 65 ಕೋಟಿ ಜನರು ಹೋಗಿದ್ದರು ಎಂದು ಬಿಜೆಪಿ ಸದಸ್ಯ ಶರಣು ಸಲಗಾರ್ ಸದನದಲ್ಲಿ ಹೇಳಿದರು. ಕುಂಭಮೇಳಕ್ಕೆ 7 ಸಾವಿರ ಟ್ರೈನ್‌ಗಳು ಹೋಗಿರಬಹುದು, ಈಗಿನದ್ದೆಲ್ಲ ಸೇರಿಸಿದರೂ 10 ಸಾವಿರ ಟ್ರೈನ್‌ಗಳಲ್ಲಿ ಜನರು ಹೋಗಿರಬಹುದು. ಇನ್ನು 3 ಸಾವಿರ ಫ್ಲೈಟ್ ಗಳು ಹೋಗಿವೆ. ಇವರು 65 ಕೋಟಿ, 70 ಕೋಟಿ ಜನ ಹೋಗಿದ್ರು ಅಂತಾರಲ್ಲ. 65 ಕೋಟಿ ಜನ ಹೇಗೆ ಆಗುತ್ತೆ ಹೇಳಿ ಎಂದು ಲಾಡ್ ಪ್ರಶ್ನಿಸಿದರು. ಇನ್ನೂ ಗೋ ಮಾತೆ ರಕ್ಷಣೆ ಬಗ್ಗೆ ಹಾಲು ಕೆಚ್ಚಲು ಅಂತ ಭಾವನಾತ್ಮಕವಾಗಿ ಮಾತನಾಡೋದು ಎಷ್ಟು ಸರಿ. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಷ್ಟು ಮಾತಾಡ್ತೀರಲ್ಲ ಗೋವುಗಳ ಬಗ್ಗೆ ಇದಕ್ಕೇನಂತೀರಿ ಅಂತ ಲಾಡ್ ಟಾಂಗ್ ಕೊಟ್ಟರು.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಶರಣು ಸಲಗಾರ್ ‘ಕುಂಭಮೇಳಕ್ಕೆ 65 ಕೋಟಿ ಜನರು ಹೋಗಿದ್ದರು’ ಎಂದರು. ಈ ವೇಳೆ ಶರಣು ಸಲಗಾರ್ ಮಾತಿಗೆ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು.
ಕುಂಭಮೇಳಕ್ಕೆ 7 ಸಾವಿರ ಟ್ರೈನ್‌ಗಳು ಹೋಗಿರಬಹುದು, ಈಗಿನದ್ದೆಲ್ಲ ಸೇರಿಸಿದರೂ 10 ಸಾವಿರ ಟ್ರೈನ್‌ಗಳಲ್ಲಿ ಜನರು ಹೋಗಿರಬಹುದು. ಇನ್ನು 3 ಸಾವಿರ ಫ್ಲೈಟ್ ಗಳು ಹೋಗಿವೆ. ಇವರು 65 ಕೋಟಿ, 70 ಕೋಟಿ ಜನ ಹೋಗಿದ್ರು ಅಂತಾರಲ್ಲ.
65 ಕೋಟಿ ಜನ ಹೇಗೆ ಆಗುತ್ತೆ ಹೇಳಿ ಎಂದು ಸಂತೋಷ್ ಲಾಡ್ ಪ್ರಶ್ನಿಸಿದರು. 65 ಕೋಟಿ ಜನ ಹೋಗಿಲ್ಲ. ಇದು ಸುಳ್ಳು ಮಾಹಿತಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸುಳ್ಳು ಹೇಳೋದೇ ನಿಮ್ ಕೆಲಸ. ಸುಳ್ಳು ಹೇಳೋದು ಬಿಟ್ಟು ಮತ್ತೇನೂ ಹೇಳಲ್ಲ ಎಂದು ಬಿಜೆಪಿ ಸದಸ್ಯ ಶರಣು ಸಲಗಾರ್ ವಿರುದ್ಧ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಗೋರಕ್ಷಣೆ ವರ್ಸಸ್ ಗೋಮಾಂಸ ವಿಚಾರಕ್ಕೆ ಜಟಾಪಟಿ!
ಇನ್ನು ಗೋರಕ್ಷಣೆ ಹಾಗೂ ಗೋಮಾಂಸ ವಿಚಾರವಾಗಿಯೂ ಸದನದಲ್ಲಿ ಜಟಾಪಟಿ ನಡೆಯಿತು. ಶಾಸಕ ಶರಣು ಸಲಗಾರ್ ವರ್ಸಸ್ ಸಚಿವ ಸಂತೋಷ್ ಲಾಡ್ ಮಧ್ಯೆ ವಾಕ್ಸಮರ ನಡೆಯಿತು.
ಚಾಮರಾಜಪೇಟೆಯಲ್ಲಿ ನಡೆದ ಹಸು ಕೆಚ್ಚಲು ಕೊಯ್ದ ಪ್ರಕರಣ ಪ್ರಸ್ತಾಪಿಸಿ, ಶರಣು ಸಲಗಾರ್ ವಾಗ್ದಾಳಿ ನಡೆಸಿದರು. ಗೋತಾಯಿ ಕೆಚ್ಚಲು ಕಡಿದು, ಗೋತಾಯಿ ಕತ್ತು ಕಡಿದು ಸರ್ಕಾರ ಅನ್ಯಾಯ ಮಾಡಿದೆ ಅಂತ ಶರಣು ಸಲಗಾರ್ ಆಕ್ರೋಶ ವ್ಯಕ್ತಪಡಿಸಿದರು.
ಗೋಮಾಂಸ ರಫ್ತಿನಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ
ಶರಣು ಸಲಗಾರ್ ಹೇಳಿಕೆಗೆ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು. ‘ಬಜೆಟ್ ಬಗ್ಗೆ ಭಾವುಕರಾಗಿ ಮಾತಾಡ್ತಿದ್ದೀರಿ, ಹಾಲು, ಕೆಚ್ಚಲು, ತಾಯಿ ಅಂತೆಲ್ಲ ಭಾವನಾತ್ಮಕ ವಿಚಾರ ಸೇರೋದು ಎಷ್ಟು ಸರಿ’ ಎಂದು ಲಾಡ್ ಪ್ರಶ್ನಿಸಿದರು. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇಷ್ಟು ಮಾತಾಡ್ತೀರಲ್ಲ ಗೋವುಗಳ ಬಗ್ಗೆ ಇದಕ್ಕೇನಂತೀರಿ ಅಂತ ಟಾಂಗ್ ಕೊಟ್ಟರು ಲಾಡ್. ಈವೇಳೆ ಪರಸ್ಪರ ಎರಡೂ ಕಡೆಯ ಸದಸ್ಯರ ನಡುವೆ ಜಟಾಪಟಿ, ಮಾತಿನ ಚಕಮಕಿ ನಡೆಯಿತು.



