ಗಡಿ ವಿವಾದ 30 ವರ್ಷದ ಹಿಂದೆ ಮುಗಿದು ಹೋಗಿದೆ. ಎಂ.ಇ.ಎಸ್. ನಿಷೇಧಿಸುವುದರಿಂದ ವಿವಾದಕ್ಕೆ ಪರಿಹಾರ ಸಿಗಲ್ಲ…ಸಚಿವ ಸತೀಶ ಜಾರಕಿಹೊಳಿ

ಎಂ.ಇ.ಎಸ್. ನಿಷೇಧಿಸುವುದರಿಂದ ವಿವಾದಕ್ಕೆ ಪರಿಹಾರ ಸಿಗಲ್ಲ. ಬ್ಯಾನ್ ಮಾಡಿದರೇ, ಮತ್ತೇ ಬೇರೆ ಹೆಸರಿನಿಂದ ಸಕ್ರಿಯವಾಗುವ ಸಾಧ್ಯತೆಗಳಿದೆ. ಗಡಿ ವಿವಾದ 30 ವರ್ಷದ ಹಿಂದೆ ಮುಗಿದು ಹೋಗಿದೆ. ಸರ್ಕಾರ ಯೋಜನೆ ಮತ್ತು ಕಾರ್ಯಕ್ರಮವನ್ನು ಹಾಕಿಕೊಂಡು ನಿಯಂತ್ರಿಸಲು ಮುಂದಾಗಬೇಕು. ಮರಾಠಿಗರು ಮುಖ್ಯವಾಹಿನಿಗೆ ಬರಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ಇಂದು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ, ಅವರು ಮಾತನಾಡಿದರು. ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೇ, ಜನಸಾಮನ್ಯಾರಿಗೆ ತೊಂದರೆಯಾಗದಂತೆ ಪ್ರತಿಭಟನೆಯನ್ನು ಮಾಡಿದರೇ, ಒಳ್ಳೆಯದು. ಎಂ.ಇ.ಎಸ್. ನಿಷೇಧಿಸುವುದರಿಂದ ವಿವಾದಕ್ಕೆ ಪರಿಹಾರ ಸಿಗಲ್ಲ. ಬ್ಯಾನ್ ಮಾಡಿದರೇ, ಮತ್ತೇ ಬೇರೆ ಹೆಸರಿನಿಂದ ಸಕ್ರಿಯವಾಗುವ ಸಾಧ್ಯತೆಗಳಿದೆ. ಗಡಿ ವಿವಾದ 30 ವರ್ಷದ ಹಿಂದೆ ಮುಗಿದು ಹೋಗಿದೆ. ಸರ್ಕಾರ ಯೋಜನೆ ಮತ್ತು ಕಾರ್ಯಕ್ರಮವನ್ನು ಹಾಕಿಕೊಂಡು ನಿಯಂತ್ರಿಸಲು ಮುಂದಾಗಬೇಕು. ಮರಾಠಿಗರು ಮುಖ್ಯವಾಹಿನಿಗೆ ಬರಬೇಕು ಎಂದರು.
ಇನ್ನು ಗಡಿಭಾಗದಲ್ಲಿ ಮಹಾರಾಷ್ಟ್ರ ಸರ್ಕಾರ ತನ್ನ ಯೋಜನೆಗಳನ್ನು ಜಾರಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಇಲ್ಲಿನ ಮರಾಠಿ ಭಾಷಿಕರಿಗೆ ಪ್ರಯೋಜನಕ್ಕಾಗಿ ಅಲ್ಲ. ಮಹಾರಾಷ್ಟ್ರ ಸರ್ಕಾರ ಯೋಜನೆಗಳನ್ನು ಘೋಷಿಸಿರಬಹುದು ಆದರೇ, ಎಲ್ಲರಿಗೂ ಇದರ ಸದುಪಯೋಗ ಸಿಗುವುದಿಲ್ಲ. ರಾಜ್ಯ ಸರ್ಕಾರದ ಯೋಜನೆಗಳು ಎಲ್ಲ ಭಾಷಿಕರಿಗೂ ತಲುಪುತ್ತಿವೆ. ಗಡಿಭಾಗದಲ್ಲಿ ಹೆಚ್ಚಿನ ನರೇಗಾ ಯೋಜನೆಯನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಬೇರೆ ಭಾಷೆಯಲ್ಲಿ ಕಾಗದಪತ್ರಗಳಿದ್ದವು, ಆದರೇ ಈಗ ಕನ್ನಡದಲ್ಲಿಯೇ ನೀಡಲಾಗುತ್ತಿದೆ. ಇದರ ಕುರಿತು ಚರ್ಚಿಸಲಾಗುವುದು ಎಂದರು.



