ರಾಯಬಾಗ: ಪರವಾನಿಗೆ ಪಡೆಯದ ಆಕ್ರಮ ಕಲ್ಲು ಗಣಿಗಾರಿಕೆಗೆ ಬೀಗ ಜಡಿಸಿದ ಸಾಮಾಜಿಕ ಹೋರಾಟಗಾರ ಜಾನ್ ಕರೆಪ್ಪಗೋಳ

ರಾಯಬಾಗ: ಪರವಾನಿಗೆ ಪಡೆಯದ ಆಕ್ರಮ ಕಲ್ಲು ಗಣಿಗಾರಿಕೆಗೆ ಬೀಗ ಜಡಿಸಿದ ಜಾನ್ ಕರೆಪ್ಪಗೋಳ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವನಕಟ್ಟಿ ಗ್ರಾಮದ ಸರ್ವೇ ನಂಬರ್ 50/5 ರಲ್ಲಿ 2 ಎಕರೆ, 7 ಗುಂಟೆ ಜಮೀನಿನಲ್ಲಿ ಪರಶುರಾಮ ಶಿವಪ್ಪ ವಡ್ಡರ ಎಂಬುವವರ ಮಾಲಿಕತ್ವದಲ್ಲಿ ಮಹಾಲಕ್ಷ್ಮಿ ಸ್ಟೋನ್ ಕ್ರಷರ ಹಾಗೂ ಡಾಂಬರ ಘಟಕ ಸ್ಥಾಪಿಸಲಾಗಿದೆ. ಸುಮಾರು ವರ್ಷಗಳಿಂದ ಸುತ್ತ ಮುತ್ತಲಿನ ಗ್ರಾಮಗಳಿಂದ ಕಲ್ಲುಗಳನ್ನು ಕರಿದಿಸಿ ಕಡಿ ಮತ್ತು ಡಸ್ಟ್ ತಯಾರಿಸಿ ಒಂದು ಬರಾಸಿಗೆ ಈ ಕೆಳಗಿನ ದರದಲ್ಲಿ ಅಂದರೆ:-
2 mm,
4 mm,
6 mm Rs 3000/-,
10 mm Rs 2000/-,
20 mm Rs 2000/-,
M-Sand Rs 3000/-
ಡಸ್ಟ್ Rs 2500/-
ವೈಟ್ ಮಿಕ್ಸ್ Rs 1800, ರೂಪಾಯಿಗಳ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮೌನವಾಗಿರುವದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಕ್ರಷರ್ ಮಷೀನ್ ಯಂತ್ರೋಪಕರಣಗಳನ್ನು ಬಳಿಸುಲು ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಉಪಯೋಗ ಮಾಡಿದ್ದರು. ಸುಮಾರು 20 ಲಕ್ಷ ರೂಪಾಯಿಗಳಷ್ಟು ಮೊತ್ತದ ವಿದ್ಯುತ್ ನ್ನು ಬಳಕೆ ಮಾಡಿ ಕೆಇಬಿಗೆ ಹಣ ಪಾವತಿಸದೆ ಬಾಕಿ ಉಳಿಸಿದ್ದು ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರ ದುರುಪಯೋಗ ಎದ್ದು ಕಾಣಿದೆ.
ಅದರಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಕ್ರಷರ್ಗಳು ಗಾಳಿಗೆ ತೂರಿವೆ. ಇದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಗೊತ್ತಿದ್ದರೂ, ಕಂಡೂ ಕಾಣದಂತೆ, ಗಾಢ ನಿದ್ರೆಗೆ ಜಾರಿದ್ದರು.
ಯಾವುದೇ ರೀತಿಯ NA ಲೇಔಟ್ ಮಾಡದೆ ಗ್ರಾಮ ಪಂಚಾಯಿತಿಯ ಪರವಾನಿಗೆ ಕೂಡ ಪಡೆದಿಲ್ಲ ಈ ಆಕ್ರಮಕರಾರು….
೭ ತಿಂಗಳಿಂದ ಯಾರ ಭಯವಿಲ್ಲದೆ, ಕಾನೂನು ಬಾಹಿರವಾಗಿ, ಗಣಿಗಾರಿಕೆ ನಡೆಯುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ, ವ್ಯವಹಾರ ನಡೆಸಿದ್ದು, ಆದರೆ ಇದುವರೆಗೆ ಯಾವುದೇ ರೀತಿಯಾದಂತಹ ಜಿಎಸ್ಟಿ ಕಟ್ಟದೆ ಸರಕಾರದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದರು.
ಈ ಭ್ರಮ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆ ತರಲು ಸಮಾಜ ಸುಧಾರಕ ಜಾನ್ಸಕುಮಾರ ಮಾರುತಿ ಕರೆಪ್ಪಗೋಳ ಇವರು ದಿನಾಂಕ 24/02/2025 ರಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಮುಖಾಂತರ ಸಂಬಂಧಿಸಿದ ಇಲಾಖೆಗಳಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬರೆದಿದ್ದಾರೆ. ಈ ಅರ್ಜಿಗೆ ಎಚ್ಚತ್ತು ಗಣಿ ಮತ್ತು ಭವಿಜ್ಞಾನ ಇಲಾಖೆಯವರು ದಿನಾಂಕ 05/03/2025 ರಂದು ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ಸಂಬಂದಿಸಿದ ಇಲಾಖೆಗಳ ಜೊತೆಯಲ್ಲಿ ಜಂಟಿ ಪರಿಶೀಲನೆ ನಡೆಸಿ ರಾಯಬಾಗದ ದೇವನಕಟ್ಟಿ ಗ್ರಾಮದ ಮಹಾಲಕ್ಷ್ಮೀ ಕ್ರಷರ ಮಷಿನನ್ನು ಸೀಜ್ ಮಾಡಿದರು.
ಸೀಸ್ ಮಾಡುವ ಸಂದರ್ಭದಲ್ಲಿ ತಹಶಿಲ್ದಾರ ಹಾಗೂ ಎಲ್ಲಾ ಅಧಿಕಾರಿಗಳ ಮುಂದೆಯೇ ಸಾಮಾಜಿಕ ಹೋರಾಟಗಾರ ಜಾನ್ಸಕುಮಾರನ ಮೇಲೆ ಕ್ರಷರ್ ಮಷಿನ್ ನವರು ಹಲ್ಲೆಗೆ ಯತ್ನಿಸಿದರೂ ಕೂಡ ಎದೆಗುಂದದೆ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿರುವ ಜಾನ್ಸಕುಮಾರ ಮಾರುತಿ ಕರೆಪ್ಪಗೋಳ ಇವರು ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ, ಜ್ಯೋತಿಬಾ ಬೆಂಡಿಗೇರಿ.



