
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆಗೆ ಸಂಸತ್ತು ಅನುಮೋದನೆ ನೀಡಿದ ಮಾರನೇ ದಿನ ಶುಕ್ರವಾರ (ಎ.04) ಮಸೂದೆಯ ಸಾಂವಿಧಾನಿಕ ಸಿಂಧತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 2 ಅರ್ಜಿಗಳು ಸಲ್ಲಿಕೆಯಾಗಿವೆ.
ಬಿಹಾರದ ಕಿಶನ್‌ಗಂಜ್‌ನ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮೊದಲಿಗೆ ಅರ್ಜಿಸಲಿಸಿದ್ದಾರೆ.
ಬಳಿಕ ಹೈದರಾಬಾದ್ ಸಂಸದ ಅಸಾದು ದ್ದೀನ್ ಒವೈಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಸಂಸತ್ತು ಅಂಗೀಕರಿಸಿರುವ ಮಸೂದೆಯು ಸಂವಿಧಾನದ ಆಶಯಗಳನ್ನು ಉಲ್ಲಂ ಸುತ್ತದೆ. ಅಲ್ಲದೇ, ನಾಗರಿಕರ ಮೂಲಭೂತ ಹಕ್ಕಿಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ತಮ್ಮ ಅರ್ಜಿಗಳಲ್ಲಿ ತಿಳಿಸಿದ್ದಾರೆ.