Politics
Trending
ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸರಕಾರಿ ಕಾರಲ್ಲಿ ಪುತ್ರನ ಬಿಂದಾಸ್ ಓಡಾಟ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣ

ಹಾವೇರಿ: ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇತ್ತ ಹಾವೇರಿಯಲ್ಲಿ ಅವರ ಪುತ್ರ ದರ್ಶನ್ ಲಮಾಣಿ ಅವರ ಸರಕಾರಿ ಕಾರಿನಲ್ಲಿ ಓಡಾಡುವ ಮೂಲಕ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಬೆಂಗಳೂರಿನಿಂದಲೇ ಸರಕಾರಿ ಕಾರಿನಲ್ಲಿ ಹಾವೇರಿಗೆ ಆಗಮಿಸಿದ್ದಾರೆ. ದರ್ಶನ್ ಲಮಾಣಿ ತಮ್ಮ ಬೆಂಬಲಿಗರ ಜತೆ ನಗರ ಸಂಚಾರ ಮಾಡಿದ್ದು, ಕೆಎ-05, ಜಿ-6000 ನಂಬರ್‌ನ ಸರಕಾರಿ ವಾಹನದಲ್ಲಿ ಓಡಾಟ ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.



