ಕೊನೆಗೂ ಅನಗೋಳ ನಾಕಾ ಬಳಿ ಪ್ರತಿಷ್ಠಾಪುಸಲಾಗಿದ್ದ ಸಂಭಾಜಿ ಮಹಾರಾಜರ ಪ್ರತಿಮೆ

ಬೆಳಗಾವಿ: ಕೊನೆಗೂ ಅನಗೋಳ ನಾಕಾ ಬಳಿ ಪ್ರತಿಷ್ಠಾಪುಸಲಾಗಿದ್ದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಪೊಲೀಸ್ ಬಂದೋಬಸ್ತಿ ನಡುವೆಯೇ ನಡೆಯಿತು.
ಮೇಯರ್ ಸವಿತಾ ಕಾಂಬಳೆ, ಸಮ್ಮುಖದಲ್ಲಿ ಮೂರ್ತಿ ಮೇಲಿನ ಬಟ್ಟೆ ತೆರವು ಮಾಡಲಾಯಿತು. ಈ ವೇಳೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಸಂಭಾಜಿ ಮಹಾರಾಜರ ಪ್ರತಿಮೆ ಪರದೆ ತೆರೆಯದಂತೆ ಸೂಚನೆ ನೀಡಿದರು. ಈ ವೇಳೆ ಗರಂ ಆದ ಮೇಯರ್ ಸವಿತಾ ಏನು ನೀವು ಮೂರ್ತಿ ಅನಾವರಣ ಮಾಡುವದನ್ನು ತಡೆಯುತ್ತಿರಾ ಎಂದು ಆಕ್ರೋಶ ಮಾತುಗಳಾನ್ನಾಡಿದರಿಂದ ಉಪ ಆಯುಕ್ತೆ ಮೌನಕ್ಕೆ ಶರಣಾದರು.
ಇಬ್ಬರು ಬೆಂಬಲಿಗರ ನಡುವೆ ವಾಗ್ವಾದ: ಮೂರ್ತಿ ಅನಾವರಣ ಘೋಷಣೆ ಹಿನ್ನೆಲೆ ಸ್ಥಳದಲ್ಲೆ ಕೊಂಡುಸ್ಕರ್ ಬೆಂಬಲಿಗರು ಬೀಡುಬಿಟ್ಟಿದ್ದು, ಛತ್ರಪತಿ ಸಂಭಾಜಿ ಮೂರ್ತಿ ಭವನಕ್ಕೆ ಅಳವಡಿಸಲಾಗುತ್ತಿದ್ದ ಲೈಟಿಂಗ್, ಧ್ವಜವನ್ನು ಕೊಂಡುಸ್ಕರ್ ಬೆಂಬಲಿಗರು ತೆರವು ಮಾಡಿದರು. ಇದರಿಂದ ಈ ವೇಳೆ ಎರಡು ಗುಂಪುಗಳಾದ ಶಾಸಕ ಅಭಯ ಪಾಟೀಲ್ ಮತ್ತು ಕೊಂಡುಸ್ಕರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.
ಕೊನೆಗಳಿಗೆಯಲ್ಲಿ ಸಂಭಾಜಿ ಮೂರ್ತಿಯನ್ನುಅನಾವರಣಗೊಳಿಸಲಾಯಿತು. ಸದ್ಯ ಸ್ಥಳದಲ್ಲೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯುವಕರು ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದಿದ್ದಾರೆ. ಸ್ಥಳದಲ್ಲೆ 7ಕೆಎಸ್ ಆರ್ ಪಿ ಪೊಲೀಸ್ ವಾಹನಗಳು, ಎಸಿಪಿ, ಮೂವರು ಸಿಪಿಐಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಭೇಟಿ ನೀಡಿದ್ದಾರೆ.


