Crime
ಬೆಳಗಾವಿಯ ಅನಗೋಳದಲ್ಲಿ ಪುಂಡರ ಅಟ್ಟಹಾಸ ಕೆಲಸ ಮಾಡುತ್ತಿದ್ದ ಯುವಕನನ್ನು ಎತ್ತಾಕಿಕೊಂಡು ಹೋಗಿ ಮಾರಣಾಂತಿಕ ಹಲ್ಲೆ

ಬೆಳಗಾವಿ: ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಯುವಕನ ಕರೆದುಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳು ಎಸ್ಕೇಪ್ ಆದ ಘಟನೆ ಬೆಳಗಾವಿಯ ಅನಗೋಳದಲ್ಲಿ ಬುಧವಾರ ನಡೆದಿದೆ.
ಶಿವರಾಜ್ ಮೋರೆ(25) ಹಲ್ಲೆಗೊಳಗಾದ ಯುವಕ. ಹತ್ತಕ್ಕೂ ಅಧಿಕ ಯುವಕರಿಂದ ಶಿವರಾಜ್ ಮೇಲೆ ಹಲ್ಲೆ.ತಲೆ, ಕೈ, ಕಾಲು, ಬೆನ್ನಿಗೆ ತೀವ್ರ ಗಾಯ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮನವಮಿ ದಿನ ಯುವಕನ ಜೊತೆಗೆ ಜಗಳವಾಡಿದ್ದ ಕೆಲವರು. ಆ ದಿನದ ಸೇಡಿಟ್ಟುಕೊಂಡು ಬಂದು ಅಂಗಡಿಯಿಂದ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.
ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಕೂಡಿಸಿಕೊಂಡು ಹಲ್ಲೆ. ಸ್ಕೂಟಿ ಮೇಲೆ ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಸ್ಪತ್ರೆ ಮುಂಭಾಗದಲ್ಲಿ ಯುವಕನ ಸ್ನೇಹಿತರು, ಕುಟುಂಬಸ್ಥರ ಜಮಾವಣೆಯಾಗಿದ್ದಾರೆ.ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


