State
Trending

ಬೆಳಗಾವಿ ಅಕ್ರವಾಗಿ ಸಂಗ್ರಹಿಸಿರುವ ಪಡಿತರ ಅಕ್ಕಿ ವಿಶ್ವಜೀತ್ ಪಾಟೀಲನ ಮೇಲೆ ಕೇಸ ದಾಖಲಿಸಿ ವಾಹನವನ್ನು ಸಿಜ್: ಸಮಾಜ ಸೇವಕ ಜಾನ್ ಕರೆಪ್ಪಗೋಳ

ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ KA22 A8564 ಸಂಖ್ಯೆಯ ಟ್ರಕ್ ಒಂದರಲ್ಲಿ ವಿಶ್ವಜಿತ್ ಪಾಟೀಲ್ ಎಂಬ ದಂದೆಕೊರನು ಅಕ್ರವಾಗಿ ಸಂಗ್ರಹಿಸಿರುವ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದನು.

ಖಚಿತ ಮಾಹಿತಿಯೊಂದಿಗೆ ಸಮಾಜ ಸೇವಕ ಜಾನ್ ಕರೆಪ್ಪಗೋಳರವರು ತಮ್ಮ ತಂಡದೊಂದಿಗೆ ವಾಹನದ ಮಾಹಿತಿಯನ್ನು ಫುಡ್ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ವಾಹನವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದಾರೆ.

ರಾತ್ರಿ ಇಡೀ ವಾಹನವನ್ನು ಟ್ರಾಫಿಕ್ ಪೊಲೀಸರು ಕಾಯ್ದು ಬೆಳಿಗ್ಗೆ ವಾಹನದಲ್ಲಿರುವ ಪಡಿತರ ಅಕ್ಕಿಯನ್ನು ದಕ್ಷ ಆಹಾರ ಅಧಿಕಾರಿ ಮಲ್ಲಪ್ಪ ಮಹಾದೇವಪ್ಪ ಗಾಣಗಿಯವರು ಜಪ್ತಿ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡು ಅಕ್ರಮ ದಂಧೆಕೋರ ವಿಶ್ವಜೀತ್ ಪಾಟೀಲನ ಮೇಲೆ ಕೇಸು ದಾಖಲಿಸಿ ವಾಹನವನ್ನು ಸಿಜ್ ಮಾಡಿದ್ದಾರೆ.

ಬಡವರಿಗೆ ತಲುಪಬೇಕಾದ ಅನ್ನಭಾಗ್ಯದ ಅಕ್ಕಿಯನ್ನುಇನ್ನು ಮುಂದೆ ಯಾರೂ ಅಕ್ರಮವಾಗಿ ಸಾಗಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಸಮಾಜ ಸೇವಕ ಜಾನ್ ಕರೆಪ್ಪಗೋಳ ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿಯವರು ಬೆಳಗಾವಿ ಡಿಸಿಯವರಿಗೆ ಬೆಳಗಾವಿ ನಗರ ಕಮಿಷನರವರಿಗೆ ಮತ್ತು ಎಸ್ ಪಿ ಯವರಿಗೆ ಮನವಿ ಸಲ್ಲಿಸಿದ್ದಾರೆ.

ಬಡವರಿಗೆ ತಲುಪಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೊರ ರಾಜ್ಯಕ್ಕೆ ಕಳುಹಿಸಿ ಬಡವರ ಹೊಟ್ಟೆ ಮೇಲೆ ಹೂಡೆದು ಲಕ್ಷ ಹಣ ಸಂಪಾದಿಸಿ ಮೆರೆಯುತ್ತಿದ್ದ ವಿಶ್ವಜೀತ್ ಪಾಟೀಲನಿಗೆ ತಕ್ಕ ಶಾಸ್ತಿಯಾಗಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button