State

Price Hike 2025: A-Z ಬೆಲೆ ಏರಿಕೆಯ ವಿಶ್ಲೇಷಣೆ: ರಾಜ್ಯದಲ್ಲಿ ಯಾವುದರ ಬೆಲೆ ಎಷ್ಟೆಷ್ಟು ಹೆಚ್ಚಳ..? ಪಟ್ಟಿ ಇಲ್ಲಿದೆ

ರ್ನಾಟಕದ A-Z ಬೆಲೆ ಏರಿಕೆ ಪಟ್ಟಿ: ರಾಜ್ಯದ ಜನತೆ ಮೇಲೆ ಒಂದಾದ ಮೇಲೊಂದರ ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ 2025 ಆರಂಭದಿಂದಲೇ ಈ ಬೆಲೆ ಏರಿಕೆಗಳ ಬಿಸಿಯಿಂದ ಆಘಾತ ಸಂಭವಿಸಿವೆ. ಮನೆ ಮಂದಿಯೆಲ್ಲಾ ದುಡಿದರೂ ಖರ್ಚು ಭರಿಸೋಕೆ ಇಂದಿಗೂ ಅದೆಷ್ಟೋ ಜನರು ಕಷ್ಟ ಪಡುತ್ತಿದ್ದಾರೆ.

ಇದರ ನಡುವೆ ಹೆಚ್ಚಾಗಿರುವ ಅಗತ್ಯತೆಗಳ ಬೆಲೆಯು, ಸೆರಗಲ್ಲಿ ಕೆಂಡ ಕಟ್ಟಿಕೊಂಡು ಜೀವಿಸುವಂತೆ ಮಾಡಿವೆ. ಒಂದಲ್ಲ ಎರಡಲ್ಲ..ಒಂದಾದ ಮೇಲೊಂದು..ಇವತ್ತು ನೀರಿನ ಶುಲ್ಕ, ನಾಳೆ ವಿದ್ಯುತ್ ಬಿಲ್ ದರ, ಆಮೇಲೆ ಸಾರಿಗೆ ದರ..ಹೀಗೆ ಜನ ಇನ್ನೇನು ಉಸಿರು ಎಳೆದುಕೊಳ್ತಿದ್ದಾರೆ ಅನ್ನೊವಾಗ್ಲೇ, ಮತ್ತೊಂದು ಅಗತ್ಯತೆಯ ಬೆಲೆ ಏರಿಕೆ ಉಸಿರುಗಟ್ಟಿಸುತ್ತಿದೆ.

ಈ ಬೆಲೆ ಏರಿಕೆಗಳ ನಡುವಿನ ಜೀವನ ದುಬಾರಿಯಾಗಿದೆ. ಆದರೆ ಸಂಬಳ ಮಾತ್ರ ದುಬಾರಿಯಾಗಿಲ್ಲ. ಆದಾಯ ಕಡಿಮೆ, ಖರ್ಚು ಹೆಚ್ಚು.. ಈ ಎರಡೂ ತಕ್ಕಡಿಗಳ ನಡುವೆ ಒದ್ದಾಡುವ ಸ್ಥಿತಿ ಬಂದೊದಗಿದೆ. ಸರ್ಕಾರದ ವಿವಿಧ ನೀತಿಗಳ ಪರಿಣಾಮವಾಗಿ ಈ ದರ ಏರಿಕೆಗಳು ಶೇ.1 ಅಥವಾ 2ರ ಮಟ್ಟವಲ್ಲ, ಶೇ.10ರಿಂದ 500ರಷ್ಟರವರೆಗೂ ಏರಿಕೆ ಕಂಡಿವೆ. ಹಾಗಾದರೆ ಯಾವುದೆಲ್ಲಾ ಬೆಲೆ ಏರಿಕೆ ಕಂಡಿದೆ. ಎಷ್ಟೆಷ್ಟು ಬೆಲೆ ಏರಿಕೆಯಾಗಿದೆ ಎಂಬುದರ A-Z ಡೀಟೆಲ್ಸ್ ಗುಡ್‌ರಿಟರ್ನ್ಸ್‌ ಕನ್ನಡದಲ್ಲಿದೆ ನೋಡಿ.

A-Z ಬೆಲೆ ಏರಿಕೆಯ ವಿಶ್ಲೇಷಣೆ:

A- Alcohol: ಅಂದರೆ ಮದ್ಯ..ಮದ್ಯದ ಮೇಲೆ ಶೇ.20ರಷ್ಟು ತೆರಿಗೆ ಹೆಚ್ಚಾಗಿದೆ. ಅದರಂತೆ ಬಿಯರ್ ಮೇಲೆ ಶೇ.10ರಷ್ಟು ತೆರಿಗೆ ಹೆಚ್ಚಾಗಿದೆ. ಇದು ನಿಜಕ್ಕೂ ಆಘಾತದ ಸುದ್ದಿ ಎನ್ನಬಹುದು. ಯಾಕೆಂದರೆ ಮದ್ಯಸೇವನೆ ಮಾಡುವವರಿಗೆ ಇದು ದೊಡ್ಡ ಹೊಡೆತ. ಅವರು ಯಾವುದೇ ಕಾರಣಕ್ಕೂ ತಮ್ಮ ಆಯ್ಕೆಯಿಂದ ಹಿಂದೆ ಹೋಗುವುದಿಲ್ಲ ಎನ್ನುವುದನ್ನೇ ಬಂಡವಾಳ ಮಾಡಿಟ್ಟುಕೊಂಡು, ಈ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ.

B- Bus: ಈಗಾಗಲೇ ಬಸ್‌ ಟಿಕೆಟ್ ದರ ಹೆಚ್ಚಳವಾಗಿದೆ. ಬಿಎಂಟಿಸಿ ಹಾಗೂ KSRTC ಬಸ್‌ಗಳಿಗೆ ಶೇ.15ರಷ್ಟು ಟಿಕೆಟ್ ದರ ಏರಿಕೆಯಾಗಿದೆ. ಇದರ ಬಿಸಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಟ್ಟುವುದಿಲ್ಲ. ಆದರೆ ಪ್ರತಿದಿನ ಪ್ರಯಾಣ ಮಾಡುವವರಿಗೆ ಇದು ನಿಜಕ್ಕೂ ಜೇಬಿಗೆ ಕತ್ತರಿ ಹಾಕುವ ಸಂಗತಿ.

C-cab & Auto: ಆಟೋ ಮತ್ತು ಟ್ಯಾಕ್ಸಿಗಳ 3% ಸಾರಿಗೆ ತೆರಿಗೆ ಹೆಚ್ಚಳದಿಂದ ಪ್ರಯಾಣ ವೆಚ್ಚ ಹೆಚ್ಚಾಗಿದೆ. ಈ ಬೆಲೆ ಏರಿಕೆ ಸಾಮಾನ್ಯವಾಗಿ ಬೇರೆ ನಗರಗಳಲ್ಲಿ ಹೆಚ್ಚಾಗಿ ಪ್ರಭಾವ ಬೀರಿಲ್ಲ. ಆದರೆ ಬೆಂಗಳೂರಿನಲ್ಲಿ ಅತಿಹೆಚ್ಚು ಜನ ನೆಲೆಸಿದ್ದಾರೆ. ಹೀಗಾಗಿ ಬೆಂಗಳೂರಿನ ಜನಕ್ಕೆ ಇದು ಹೆಚ್ಚಾಗಿ ಹೊಡೆತ ಬೀಳುತ್ತದೆ.

D-Diesel: ಡೀಸೆಲ್‌ ದರವೂ ಹೆಚ್ಚಳವಾಗಿದೆ. ಪ್ರತಿ ಲೀಟರ್‌ಗೆ ₹2 ಹೆಚ್ಚಳವಾಗಿರುವ ಕಾರಣ, ಲಾರಿ ಮಾಲೀಕರು, ಖಾಸಗಿ ಬಸ್ ಮಾಲೀಕರು ಕೆಂಡ ಕಾರುತ್ತಿದ್ದಾರೆ.

E – Electricity: ಈ ವರ್ಷದಲ್ಲಿ ವಿದ್ಯುತ್ ಬಿಲ್ ದರವೂ ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳವಾಗಿದೆ. ಇದೂ ಸಾಲದೆಂದು ಸ್ಥಿರ ಶುಲ್ಕವೂ ಜೊತೆಗೆ ಹೆಚ್ಚಲಾಗಿದೆ. ಇದೊಂಥರಾ ರಾಜ್ಯದ ಜನರಿಗೆ ಕರೆಂಟ್ ಶಾಕ್ ಕೊಟ್ಟಂತಾಗಿದೆ.

F – Fuel – ಜೂನ್ 2024ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ₹3ರಷ್ಟು ಏರಿಕೆಯಾಯಿತು. ಇದೀಗ ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ.

G – Guidance Value: ಆಸ್ತಿ ಮಾರಾಟದ ಮಾರ್ಗಸೂಚಿ ಮೌಲ್ಯ ಶೇ.15ರಿಂದ 30ರಷ್ಟು ವರೆಗೆ ಹೆಚ್ಚಳವಾಗಿದೆ. ಇದರಿಂದ ಆಸ್ತಿ ಕೊಳ್ಳುವವರಿಗೆ ಬರೆ ಎಳೆದಂತಾಗಿದೆ.

H – Hatchback to Luxury Cabs: ಹ್ಯಾಚ್‌ಬ್ಯಾಕ್ ಕಾರುಗಳು ಈಗ ಐಷಾರಾಮಿ ಕ್ಯಾಬ್‌ಗಳಾಗುತ್ತಿವೆ. ಇದರಿಂದ ಕಾರು ಬಾಡಿಗೆ ದರವೂ ಹೆಚ್ಚಾಗುತ್ತಿದೆ. ಏಕೆಂದರೆ ಕಾರುಗಳ ನಿರ್ವಹಣಾ ವೆಚ್ಚ ದುಬಾರಿಯಾಗಿದೆ.

I – Industry Costs: ಕೈಗಾರಿಕಾ ಬಳಕೆಗಾಗಿ ವಿದ್ಯುತ್, ನೀರು ಮತ್ತು ಇಂಧನದ ದರಗಳು ಹೆಚ್ಚಳ.

J – Journey Cost: ಖಾಸಗಿ ಬಸ್‌ಗಳ ಬಾಡಿಗೆ ಹೆಚ್ಚಳದಿಂದ ಪ್ರಯಾಣದ ಖರ್ಚು ದುಬಾರಿ. ಡೀಸೆಲ್ ದರ ಹೆಚ್ಚಳದ ಪರಿಣಾಮ ಖಾಸಗಿ ಬಸ್‌ಗಳು ದರ ಹೆಚ್ಚಿಸಿವೆ.

K – Karnataka College Fees: ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆಯಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದಂತಾಗಿದೆ.

L – Lifetime Tax on EVs: ₹25 ಲಕ್ಷ ಮೀರಿದ ವಿದ್ಯುತ್ ವಾಹನಗಳಿಗೆ ಶೇ.10ರಷ್ಟು ಲೈಫ್ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ.

M – Metro Fares: ಬೆಂಗಳೂರು ಮೆಟ್ರೋ ಶೇ.71ರಷ್ಟು ಬಾಡಿಗೆ ಏರಿಕೆ ಮೂಲಕ ಇತಿಹಾಸದಲ್ಲೇ ಅತಿಹೆಚ್ಚು ದರವಾಗಿದೆ. ಕೆಲವು ನಿಲ್ದಾಣಗಳಿಗೆ ತಲುಪುವ ಜನರಿಗೆ ಇದು 100% ದರ ಹೆಚ್ಚಳದ ಬಿಸಿ ಮುಟ್ಟಿಸಿದೆ.

N – Nandini Milk: ಹಾಲು, ಮೊಸರು, ಮಜ್ಜಿಗೆ ದರಗಳಲ್ಲಿ ₹4ರಷ್ಟು ಏರಿಕೆಯಾಗಿದೆ. ರಾಜ್ಯದ ಜನರು ಅತಿಹೆಚ್ಚು ಖರೀದಿಸುವ, ನಂದಿನಿ ಉತ್ಪನ್ನಗಳು ಏರಿಕೆಯಾಗಿರುವುದರಿಂದ ಜನರು ಕಂಗಾಲಾಗುವಂತೆ ಮಾಡಿದೆ.

O – OTT & Movie Tickets: OTT ಸೇವೆಗಳು ಮತ್ತು ಚಿತ್ರಮಂದಿರ ಟಿಕೆಟ್‌ಗಳಿಗೆ ಶೇ.2ರಷ್ಟು ಸೆಸ್ ವಿಧಿಸಲಾಗಿದೆ.

P – Parking Fees: ವಾಸಸ್ಥಳ ಮತ್ತು ವ್ಯಾಪಾರಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆಯಾಗಿದೆ.

Q – Quarry Fees: ಕ್ವಾರಿ ಚಾರ್ಜ್ ಹೆಚ್ಚಳದಿಂದ ಕಟ್ಟಡ ನಿರ್ಮಾಣದ ವೆಚ್ಚ ಗಗನಕ್ಕೆ ಏರಿದೆ.

R – Rental Agreements: ಬಾಡಿಗೆ ದಾಖಲೆಗಳ ಸ್ಟಾಂಪ್ ಡ್ಯೂಟಿ ಶೇ.200ರಿಂದ 500ರಷ್ಟು ಹೆಚ್ಚಳ.

S – Solid Waste Fee: ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆಯೊಂದಿಗೆ ಮಿಕ್ಕುತ್ಯಾಜ್ಯ ಶುಲ್ಕ ಸೇರಿಸಲಾಗಿದೆ.

T – Toll Charges: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಶೇ.3ರಿಂದ 5ರಷ್ಟು ವರೆಗೆ ಏರಿಕೆ.

U – Union Gas Hike: ಎಲ್‌ಪಿಜಿ ಸಿಲಿಂಡರ್‌ ಬೆಲೆ ₹50 ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರಿಗೆ ದೊಡ್ಡ ಹೊಡೆತವೇ ಆಗಿದೆ.

V – Vehicle Registration: ಹೊಸ ವಾಹನ ನೋಂದಣಿಗೆ ₹500-₹1000 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.

W – Water Tariff: ಬೆಂಗಳೂರಿನಲ್ಲಿ ನೀರಿನ ಬಿಲ್ ದರ ಏರಿಕೆಯಿಂದ ಮನೆ ಬಳಕೆದಾರರಿಗೆ ಹೊರೆಯಾಗಿದೆ. ಅದರಲ್ಲೂ ಬಾಡಿಗೆ ಮನೆಯಲ್ಲಿರುವವರಿಗೆ ಈ ಶುಲ್ಕದ ಬಿಸಿ ನೇರವಾಗಿ ತಟ್ಟುತ್ತದೆ.

X – X-Ray, OPD Charges: ಖಾಸಗಿ ಆಸ್ಪತ್ರೆಗಳಲ್ಲಿ ಎಕ್ಸ್ರೆ, ಔಟ್ ಪೇಷೆಂಟ್ ಶುಲ್ಕ ಶೇ.50ರಿಂದ 100ರಷ್ಟು ಹೆಚ್ಚಳವಾಗಿದೆ.

Y – Your Daily Budget: ತರಕಾರಿ, ಹಣ್ಣುಗಳು, ಶಾಲಾ ಫೀಗಳಲ್ಲಿ ಏರಿಕೆಯಿಂದ ದಿನನಿತ್ಯದ ಖರ್ಚು ಹೆಚ್ಚಾಗಿದೆ.

Z – Zomato, Amazon & Rapido: ಗಿಗ್ ವರ್ಕರ್ಸ್ ನಿಧಿಗೆ ಈ ಕಂಪನಿಗಳಿಂದ ಶೇ.5ರಷ್ಟು ಸೆಸ್ ವಿಧಿಸಲಾಗಿದೆ.

ಈ ಎಲ್ಲ ಬೆಲೆ ಏರಿಕೆಗಳು ಸೇರಿ, ಸಾಮಾನ್ಯ ಮನೆತನದ ಆರ್ಥಿಕ ಸ್ಥಿತಿಗೆ ನಡುಕ ತಂದಿವೆ. ದಿನನಿತ್ಯದ ಖರ್ಚುಗಳೇ ತಿಂಗಳ ಸಂಬಳವನ್ನು ಮೀರಿಸುತ್ತಿರುವಂತಾಗಿದ್ದು, ಉಳಿತಾಯ ಮಾಡುವುದು ಅಸಾಧ್ಯವಾಗಿದೆ. ಖಾಸಗಿ ಉದ್ಯೋಗಿಗಳು, ಬಡವರು, ವಿದ್ಯಾರ್ಥಿಗಳು, ಉದ್ಯೋಗವಿಲ್ಲದವರು ಎಲ್ಲರಿಗೂ ಈ ದುಬಾರಿ ಜೀವನ ಭಾರವಾಗಿದೆ. ಮನೆಯ ಬಾಡಿಗೆ ದಾಖಲೆ, ಮೆಟ್ರೋ ಪ್ರಯಾಣ, ಪೆಟ್ರೋಲ್, ಹಾಲು, ವಿದ್ಯುತ್, ಶಾಲಾ ಶುಲ್ಕಗಳು ಎಲ್ಲದರ ಮೇಲೂ ಏರಿಕೆಯ ದಪ್ಪ ಹೊರೆಯಾಗಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button