
ಸಂವಿಧಾನ ಪೀಠಿಕೆಯೊಂದಿಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವದ ಕಾರ್ಯಕ್ರಮ.
ಪ್ರತಿ ವರ್ಷವಂತೆ ಈ ವರ್ಷ ನಡೆಯಲಿರುವ 134ನೇ ಜಯಂತೋತ್ಸವ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆ ತಾಲೂಕು ಯಲಬುರ್ಗಾ ನಗರದಲ್ಲಿ ಸಂವಿಧಾನ ಪೀಠಿಕೆಯೊಂದಿಗೆ ನಗರದಲ್ಲಿ ಅದ್ದೂರಿಯಾಗಿ ನೆಡೆಸಿಕೊಡಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಶ್ರೀಯುತ ಬಸವರಾಜ ರಾಯರೆಡ್ಡಿ ಸಾಹೇಬರು ಶಾಸಕರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿದರು.
ಇದರಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆ ತಸಿಲ್ದಾರರು ಪೊಲೀಸ್ ಇಲಾಖೆ ಅಧಿಕಾರಿಗಳು ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಸುತ್ತಮುತ್ತ ಹಳ್ಳಿಗಳಿಂದ ಬಂದಂತ ಜನ ಮತ್ತು ರಾಜಕಾರಣಿಗಳು ದಲಿತ ಮುಖಂಡರುಗಳು ನಗರದ ಸ್ಥಳೀಯರು ಭಾಗವಹಿಸಿ ಈ ವರ್ಷದ ವಿಶೇಷತೆ ಏನೆಂದರೆ ಅಂಬೇಡ್ಕರ್ ಅವರ ಬರೆದಿರುವಂತಹ ಸವಿಧಾನ ಪೀಠಿಕೆಯನ್ನು ಪ್ರತಿಯೊಬ್ಬರ ಮಹಿಳೆಯರ ಕೈಯಲ್ಲಿ ಮೆರವಣಿಗೆ ಮೂಲಕ ಇದೆ ಸಂವಿಧಾನ ಪೀಠಿಕೆ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಇದು ಒಂದು ಹೊಸ ಪ್ರಯತ್ನ ಮಾಡಲಾಯಿತು.
ದಲಿತ ಮುಖಂಡರುಗಳಾದ ಚಲವಾದಿ ಸಮಾಜದ ಅಧ್ಯಕ್ಷರಾದ ಅಂದಪ್ಪ ಹಾಳ್ಕೇರಿ ಛತ್ರಪ್ಪ ಚಲವಾದಿ ಸಿದ್ದಪ್ಪ ಕಟ್ಟಿಮನಿ ಬಸರಾಜ್ ಹರಬರ್ ನಿಂಗಪ್ಪ ಬಳೂಟಿಗಿ ಗದ್ದಪ್ಪ ಚಲವಾದಿ ಈರಪ್ಪ ಕುಡುಗುಟ್ಟಿ ವಸಂತ ಬಾಯಿಮುನಿ ಇನ್ನು ಅನೇಕ ಮುಖಂಡರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



