Politics
ಹೊರಾಜ್ಯದವರ ಮೇಲೆ ನಿಗಾವಹಿಸಿ: ಸಚಿವ ಸಂತೋಷ್ ಲಾಡ್ ಮಹತ್ವದ ಆದೇಶ

ಬೆಂಗಳೂರು : ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಬಿಹಾರ ಮೂಲದ ರಿತೇಶ್ ಎಂಬಾತ ಹೊತ್ಯೋಯ್ದು ಅತ್ಯಾಚಾರ ಮತ್ತು ಕೊಲೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಕಾರ್ಮಿಕ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಹೊರ ರಾಜ್ಯದವರಿಂದ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಉದ್ಯಮಿಗಳ ಜೊತೆ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ಅವರು ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದವರ ಕೈವಾಡ ಹೆಚ್ಚಾಗಿದ್ದು, ಹೊರ ರಾಜ್ಯದಿಂದ ಬರುವ ಕಾರ್ಮಿಕರ ಮೇಲೆ ನಿಗಾವಹಿಸುವಂತೆ ಸಂತೋಷ್ ಲಾಡ್ ಮೌಖಿಕ ಆದೇಶ ಮಾಡಿದ್ದಾರೆ. ಕಾರ್ಮಿಕರ ಮಾಹಿತಿ ಒದಗಿಸಲು ಸರ್ಕಾರದಿಂದ ಸೂಚನೆ ನೀಡಿದ್ದಾರೆ. ವಿವಿಧ ಉದ್ಯಮಿಗಳ ಜೊತೆಗೆ ಲಾಡ್ ಅವರು ನಡೆಸಿದ ಸಭೆಯಲ್ಲಿ ಮಹತ್ವದ ಸೂಚನೆಗಳನ್ನು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.



