Local News
ಬೆಳಗಾವಿ ಕಿತ್ತೂರು ಚನ್ನಮ್ಮ ಮೃಗಾಲಯಕ್ಕೆ ಬಂತು ಹೊಸ ಹೆಣ್ಣುಲಿ

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ ಆಗಮನವಾಗಿದ್ದು, ಹುಲಿ ಪ್ರಿಯರ ಕಣ್ಮನ ಸೆಳೆಯಲಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ ‘ನಿತ್ಯ’ ಹೆಸರಿನ 12 ವರ್ಷದ ಹೆಣ್ಣು ಹುಲಿಯನ್ನು ಅರಣ್ಯ ಅಧಿಕಾರಿಗಳು ಗುರುವಾರ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಮೃಗಾಲಯಕ್ಕೆ ಕರೆ ತಂದಿದ್ದಾರೆ.
ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಈಗಾಗಲೇ ಕೃಷ್ಣಾ, ಕನಿಷ್ಕಾ ಹೆಸರಿನ ಎರಡು ಗಂಡು ಹುಲಿಗಳು ಇದ್ದವು. ಆದರೆ, ಹೆಣ್ಣು ಹುಲಿ ಇರಲಿಲ್ಲ. ಹಾಗಾಗಿ, ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆ ಮೇರೆಗೆ ಅರಣ್ಯ ಅಧಿಕಾರಿಗಳು ಮೈಸೂರಿನ ಮೃಗಾಲಯದಿಂದ ನಿತ್ಯಳನ್ನು ತೆಗೆದುಕೊಂಡು ಬರಲಾಗಿದೆ.


