State

ಡಾ : ಬಿ ಆರ್ ಅಂಬೇಡ್ಕರ್ಯಲಬುರ್ಗಾ ತಾಲೂಕ ಕುಡಗುಂಟಿ ಗ್ರಾಮದಲ್ಲಿ ಡಾ: ಬಿಆರ್ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಡಾ : ಬಿಆರ್ ಅಂಬೇಡ್ಕರ್ 134 ನೇ ಜಯಂತೋತ್ಸವ.

ಯಲಬುರ್ಗಾ ತಾಲೂಕ ಕುಡಗುಂಟಿ ಗ್ರಾಮದಲ್ಲಿ ಡಾ: ಬಿಆರ್ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕುಂಭ ಮೇಳ, ಡೋಲು, ಮಜಲು, ಡಿಜೆ ಅಚ್ಚಿ ಕುಣಿದು ಕುಪ್ಪಳಿಸಿದರು.

ಕುಂಭ ಮೇಳಕ್ಕೆ ಚಾಲನೆ ನೀಡಿದ ಶ್ರೀ ಅರವಿಂದಗೌಡ ಪಾಟೀಲ್,ಛತ್ರಪ್ಪ ಛಲವಾದಿ, ಶಶಿಧರ್ ಹೊಸಮನಿ,ತಿಪ್ಪಣ್ಣ ಮ್ಯಾಗೇರಿ, ರೇವನೇಪ್ಪ ಸಂಕಟಿ,ಶರಣಕುಮಾರ್ ಅಮರಗಟ್ಟಿ, ಗ್ರಾಂ ಪಂಚಾಯತ್ ಅಧ್ಯಕ್ಷರು ಚಿಕ್ಕಮ್ಯಾಗೇರಿ, ಹಾಗೂ ಮುಂತಾದವರು ಸೇರಿದ್ದರು.

ಡಾ: ಬಿಆರ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಉದ್ಘಾಟನೆ ಮಾಡಿದ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳಾದ ಶ್ರೀಧರ ಮುರಡಿ ಹಿರೇಮಠ ಸಂಸ್ಥಾನ ಮಠ ಯಲಬುರ್ಗಾ ಇವರ ಸಾನಿಧ್ಯದಲ್ಲಿ ನೆರವೇರಿತು.

ರೇವನೇಪ್ಪ ಸಂಕಟಿ ಮಾಜಿ ಗ್ರಾಂ ಪಂಚಾಯತ್ ಅಧ್ಯಕ್ಷರು ಈ ಸಂದರ್ಭದಲ್ಲಿ ಮಾತನಾಡಿದ ಅವರು,

ನಾವೆಲ್ಲರೂ ಇವತ್ತು ಎಷ್ಟೊಂದು ಚನ್ನಾಗಿರುವ ಬಟ್ಟೆಯನ್ನು ಹಾಕಿಕೊಂಡು ನಾವು ಜೀವನವನ್ನು ಮಾಡ್ತಾಯಿದ್ದೀವಿ ಅಂದ್ರೆ ಅದಕ್ಕೆ ಕಾರಣ ಬಾಬಾ ಸಾಹೇಬ ಅಂಬೇಡ್ಕರ್ ಎಂಬ ಮಾತನ್ನು ಹೇಳಿದರು.

ಗುರುಹಿರಿಯರು ತಾಯಂದಿರು ಸೇರಿ ಬಿಂದಿಗೆಯನ್ನು ಹೊತ್ತು ಕುಂಭ ಮೇಳದ ಸಾಲುಸಾಲಾಗಿ ಊರಿನ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಿದರು.

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೆ ಜಯಂತೋತ್ಸವ ಆಚರಣೆ ಮಾಡಲು ಕುಂಭ ಮೇಳ ಜೊತೆಗೆ ಡೋಲು, ಮಜಲು, ಕುಣಿತ, ಹಾಗೂ ಇನ್ನಿತರ ಮೇಳಗಳ ಜೊತೆಗೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ತದನಂತರ ಇಂದು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಜನ್ಮದಿನ. ಇಂದು ಅವರ ಕೊಡುಗೆಗಳನ್ನು ನೆನೆದು ಸ್ಮರಿಸುವ ದಿನ. ಅವರನ್ನು ಗೌರವಿಸುವ ಸುದಿನ. ಇಂದಿನ ಪ್ರಜೆಗಳು ಅವರ ಸಂದೇಶಗಳನ್ನು ತಿಳಿದು, ಸದಾ ಅನುಸರಿಸಬೇಕಾಗಿದೆ. ಅಂತಹ ಅವರ ಹಲವು ಸಂದೇಶಗಳನ್ನು ಇಲ್ಲಿ ತಿಳಿಸಲಾಗಿದೆ. ನೀವು ಒಮ್ಮೆ ಓದಿಕೊಂಡು, ಆಲೋಚಿಸಿ, ನಾವು ಅವರಂತೆ ನಡೆದುಕೊಳ್ಳೋಣ ಎಂದು ತಿಳಿಸಿದರು.

ಇಂದು ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆ. ಭಾರತದ ಪ್ರತಿ ಪ್ರಜೆಯೂ ಸಹ ಅವರ ಕೊಡುಗೆಗಳನ್ನು ನೆನೆದು, ಅವರನ್ನು ಸ್ಮರಿಸಿ, ಗೌರವಿಸಬೇಕಾದ ದಿನ.
ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ..! ಎಂಬ ತಮ್ಮ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು, ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುವವರೆಗಿನ ಬೃಹತ್‌ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಇವರು.

ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಬೃಹತ್‌ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿರುವುದು.

ನಾಡು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿಯೂ, ಎಲ್ಲರ ಜೀವನಕ್ಕೆ ಆದರ್ಶ ಹಾಗೂ ಮಾರ್ಗ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಸ್ಮರಣಾರ್ಥ. ಅವರ ಜೀವನ, ಅವರ ತತ್ವಗಳ ಕುರಿತು ಈ ಲೇಖನದಲ್ಲಿ ಅವರ ಜನ್ಮದಿನೋತ್ಸವದ ಅಂಗವಾಗಿ ತಿಳಿಸಲಾಗಿದೆ. ಎಂದು ಛಲವಾದಿ ಸಮಾಜದ ಮುಖಂಡರು ಶ್ರೀ ಛತ್ರಪ್ಪ ಛಲವಾದಿ, ಮತ್ತು ಕಾರ್ಮಿಕ ಸಂಘಟನಾ ಜಿಲ್ಲಾಧ್ಯಕ್ಷರು ಆದ ಶಶಿಧರ್ ಹೊಸಮನಿ ಅವರು ಮಾತನಾಡಿದರು.

ಡಾ. ಭೀಮರಾವ್ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್‌ನಲ್ಲಿ 1891 ರ ಏಪ್ರಿಲ್ 14 ರಂದು ಜನಿಸಿದರು. ಅವರು 1908ರಲ್ಲಿ ಎಲ್ಫಿನ್ ಸ್ಟೋನ್ ಹೈಸ್ಕೂಲ್‌ನಿಂದ ಮೆಟ್ರಿಕ್ಯೂಲೇಶನ್ ಪಾಸ್ ಮಾಡಿದರು. ಉನ್ನತ ಶಿಕ್ಷಣವನ್ನು ನ್ಯೂಯಾರ್ಕ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. 1927 ರ ಜೂನ್‌ 8 ರಂದು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಬಗ್ಗೆ ಹೋರಾಟವನ್ನು ಪ್ರಬಲವಾಗಿ ಆರಂಭಿಸಿದರು.

ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button