State
Trending

ದೇವಸ್ಥಾನಗಳ ಜೀರ್ಣೋದ್ಧಾರಕ ನಾಸೀರ ಭಾಗವಾನ ಅವರಿಂದ ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘ ಸುರಪುರ ಕೇರವಾಡ ಉದ್ಘಾಟನೆ

ದೇವಸ್ಥಾನಗಳ ಜೀರ್ಣೋದ್ಧಾರಕ ನಾಸೀರ ಭಾಗವಾನ ಅವರಿಂದ ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘ ಸುರಪುರ ಕೇರವಾಡ ಉದ್ಘಾಟನೆ

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಸುರಪುರ ಕೇರವಾಡ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ಮಾಡುತ್ತಾ ಬಂದು ಹಾಗೂ ತಾಲೂಕಿನಾದ್ಯಂತ ನೂರಾರು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿ ಕಲಿಯುಗದ ಕರ್ಣನೆಂದು ಬಿರುದು ಪಡೆದ ನಾಸೀರ್ ಭಾಗವಾನ ಅವರಿಂದ ಇಂದು ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘವನ್ನ ಸುರಪುರ ಕೇರವಾಡದಲ್ಲಿ ಉದ್ಘಾಟನೆ ಸಮಾರಂಭ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಸಿರ್ ಬಾಗವಾನ ಅವರು ನನಗೆ ಒಂದು ಅವಕಾಶ ಕೊಟ್ಟಿದ್ದರೆ ನಾನು ನನ್ನ ಕ್ಷೆತ್ರವನ್ನು ನೀರಾವರಿ ಮಾಡತಿದ್ದೆ. ಸ್ವಂತ ಶುಗರ್ ಫ್ಯಾಕ್ಟರಿ ಕುಡಾ ಅಗತ್ತಿತು ಈಗಲೂ ಕೂಡ ಫ್ಯಾಕ್ಟರಿ ಆಗುವವರೆಗೂ ಬಿಡುವುದಿಲ್ಲ ಶುಗರ್ ಫ್ಯಾಕ್ಟರಿ ಮಾಡಿಯೆ ಮಾಡುತ್ತೇನೆ ಅದು ಅಲ್ಲದೆ ಗಾರ್ಮೆಂಟ್ ಫ್ಯಾಕ್ಟರಿ ಕೂಡ ಹಾಕಿ ಯುವಕರಿಗೆ ನಿರುದ್ಯೋಗಿಗಳಿಗೆ ಕೆಲಸವನ್ನು ಕೊಡುತ್ತೇನೆ ಅಂತ ಹೇಳಿದರು.

ಗ್ರಾಮದ ಹಿರಿಯರಾದ ಶ್ರೀ ಭೀಮರಾಯಿ ಅಡಿವೆಪ್ಪ ಕಬಾಡಗಿ ಅವರು ನಾಸಿರ್ ಬಾಗವಾನ ಅವರನ್ನು ಉದ್ದೇಶಿಸಿ ಮಾತನಾಡುವಾಗ ನಾಸಿರ ಬಾಗವಾನ ಅವರು ಖಾನಾಪುರ್ ತಾಲೂಕಿನ ಶಾಸಕ ಆಗದಿರುವುದು ಈ ತಾಲೂಕಿನ ದುರಂತ ಸುರಪುರ ಕೆರವಾಡ ಒಂದೆ ಗ್ರಾಮಕ್ಕೆ ಸುಮಾರು 35 ಲಕ್ಷಕ್ಕಿಂತ ಹೆಚ್ಚು ಹಣ ಕೋಟ್ಟು ದೇವಾಲಯಗಳ ಜೀರ್ಣೋದ್ದಾರ ಮಾಡಿದ್ದಾರೆ ಎಂದು ಹೇಳಿದರು

ಮಹಾರಾಷ್ಪ್ರ ಗೋವಾ ಗಡಿಯಲ್ಲಿರುವ ಖಾನಾಪುರ ತಾಲೂಕು ರಾಜಕೀಯವಾಗಿ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕ ಆಗಿದೆ ಇಲ್ಲಿಯ ಭಾಷೆ ಹಾಗೂ ಜಾತಿ ರಾಜಕಾರಣದಿಂದ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಈ ಕ್ಷೇತ್ರಕ್ಕೆ ಹಣಬಲವುಳ್ಳ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಿಲ್ಲ ಎಂಇಎಸ್ ಪ್ರಾಬಲ್ಯದ ಕ್ಷೇತ್ರವಾಗಿದ್ದು ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾ ಬಂದಿದ್ದಾರೆ ಕಳೆದ 20 ವರ್ಷಗಳಿಂದ ಈ ಭಾಗದಿಂದ ಶಾಸಕರಾಗಲು ಖ್ಯಾತ ಉದ್ಯಮಿ ನಾಸಿರ್ ಬಾಗವಾನ್ ಶ್ರಮಿಸುತ್ತ ಬಂದಿದ್ದಾರೆ

ಜಾತಿ ಧರ್ಮ ಬೇದವಿಲ್ಲದೆ ಸುಮಾರು ನಾಲ್ಕು ನೂರು ದೇವಾಲಯಗಳನ್ನ ಜೀರ್ಣೋದ್ಧಾರ ಮಾಡಲು ತಮ್ಮ ಸ್ವಂತ ಹಣ ನೀಡಿದ್ದಾರೆ ಹಳ್ಳಿಗಳಲ್ಲಿ ಕುಡಿಯುವ ನೀರು ರಸ್ತೆ ಹಾಗೂ ಸೇತುವೆಗಳನ್ನ ನಿರ್ಮಾಣ ಮಾಡಿದ್ದಾರೆ ಸರಕಾರದ ಅನುದಾನ ಪಡೆಯುವಲ್ಲಿ ಎಡತಾಕುವ ಈ ಕಾಲದಲ್ಲಿ ಜನಸಾಮಾನ್ಯರು ಬಯಸುವ ಯುವಕರು ಬಯಸುವ ಗ್ರಾಮಾಭಿವೃದ್ದಿ ಚಟುವಟಿಕೆಗಳಿಗೆ ಹಣ ನೀಡುತ್ತಾ ಬಂದಿದ್ದಾರೆ ಅವರ ಸಹಾಯ ಪಡೆದ ಗ್ರಾಮಗಳ ಮತದಾರರು ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರು ಕೈಹಿಡಿಯಲಿಲ್ಲ ಆದರೆ ತಮ್ಮ ನಿಸ್ವಾರ್ಥ ಸೇವೆಯನ್ನ ಮುಂದುವರಿಸಿ ಜನಪ್ರಿಯತೆ ಮಾತ್ರ ಕಡಿಮೆಯಾಗಲಿಲ್ಲ ಹಾಗಿದ್ದರೆ ಚುನಾವಣೆಯಲ್ಲಿ ಮತದಾರ ಪ್ರಭು ನಾಸಿರ್ ಬಾಗವಾನ್ ಅವರಿಗೆ ಏಕೆ ಮನೆ ಹಾಕಲಿಲ್ಲ ಎಂಬುದು ಯಕ್ಷಪ್ರಶ್ನೆ ಯಾಗಿ ಉಳಿದಿದೆ

ಇಂಜಿನಿಯರಿಂಗ್ ಪದವೀಧರರಾಗಿರುವ ಪ್ರಗತಿಪರ ಚಿಂತಕರಾಗಿರುವ ನಾಸಿರ್ ಭಾಗವಾನ್ ಶಾಸಕರಾಗುವುದು ಹಣೆಯಲ್ಲಿ ಬರೆದಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ ನಾಸಿರ್ ಬಾಗವಾನ್ ಶಾಸಕ ಆಗದೇ ಇರುವುದು ಈ ಕ್ಷೇತ್ರದ ದುರಂತ. ಅಂತ ಭಾವನಾತ್ಮಕವಾಗಿ ಹೇಳಿದರು

ಈ ಸಂಧರ್ಭದಲ್ಲಿ ಶ್ರೀ ಮಹಾವೀರ ಪರಪ್ಪ ಗುಂಡಕಲಿ, ಶ್ರೀ ಕೆಂಪಣ್ಣ ಸಿದ್ದಪ್ಪ ತೀಲಿ, ಶ್ರೀ ಭೀಮರಾಯಿ ಅಡಿವೆಪ್ಪ ಕಬಾಡಗಿ , ಶ್ರೀ ರಾಜಶೇಖರ್ ಬಸವರಾಜ್ ಹಿಡಕಲ್ಕರ್ , ಶ್ರೀ ಜಿನಪ್ಪ ಬರ್ಮಪ್ಪ ಗುಂಡುಕಲ್ , ರಾಜು ತಳವಾರ್, ಕಾಶಪ್ಪ ದ್ಯಾಮಪ್ಪ ನಿಟವಿ, ಗ್ರಾಮದ ಹಿರಿಯರು ,ಯುವಕರು ಮತ್ತು ಶ್ರೀ ಲಗಮವ್ವಾದೇವಿ ಸೇವಾ ಅಭಿವೃದ್ಧಿ ಸಂಘ ಸುರಪುರ ಕೇರವಾಡ ಇದರ ಪದಾಧಿಕಾರಿಗಳು ಭಕ್ತರು ಉಪಸ್ಥಿತರಿದ್ದರು

ವರದಿ ಜ್ಯೋತಿಬಾ ಬೆಂಡಿಗೇರಿ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button