ಅಧಿಕಾರಿಗಳ ದುರಾಡಳಿತದಿಂದ ಬೇಸತ್ತ ಕೂಲಿ ಕಾರ್ಮಿಕರು ಕುಷ್ಟಗಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೂಲಿಕಾರ್ಮಿಕರ ಪ್ರತಿಭಟನೆ

ಕುಷ್ಟಗಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕೂಲಿಕಾರ್ಮಿಕರ ಪ್ರತಿಭಟನೆ ನಡೆಸಿದರು.
ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕಾರ್ಮಿಕರಿಂದ ಮನವಿ.
ಅಧಿಕಾರಿಗಳ ದುರಾಡಳಿತದಿಂದ ಬೇಸತ್ತ ಕೂಲಿ ಕಾರ್ಮಿಕರು.
ನಾವು ಅಧಿಕಾರಿಗಳನ್ನ ಪ್ರಶ್ನೆ ಮಾಡುವುದೇ ತಪ್ಪಾ ?.
ಅಧಿಕಾರಿಗಳ ದುರಾಡಳಿತವನ್ನು ಸಮರ್ಥನೆ ಮಾಡಿಕೊಳ್ಳುವ ಕೆಲವು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕರೇಗೌಡ ಪೊಲೀಸ್ ಪಾಟೀಲ್ ಆರೋಪಿಸಿದರು.

ಹಲವು ವರ್ಷಗಳಿಂದ ನೂರಾರು ಭ್ರಷ್ಟಾಚಾರ ಮಾಡಿ ಲಕ್ಷಗಟ್ಟಲೆ ಸರ್ಕಾರಕ್ಕೆ ನಷ್ಟ ಮಾಡಿದ ಪ್ರಸ್ತುತ ಇರುವ ಪಿಡಿಓ ಅಧಿಕಾರಿಗಳು, ಹಾಗೂ ಈ ಹಿಂದೆ ಕಾರ್ಯನಿರ್ವಹಿಸಿದ ಜೈ ಗಳೇ ಇದಕ್ಕೆಲ್ಲ ಕಾರಣ.
ಆ ನಷ್ಟವಾದ ಹಣವನ್ನ ಹಿಂತಿರುಗಿ ಸರ್ಕಾರಕ್ಕೆ ಒಪ್ಪಿಸುವವರೆಗೂ ನಮ್ಮ ಹೋರಾಟ ನಿಲ್ಲದು, ಎಂದು ಹಠ ಹಿಡಿದು ಕುಳಿತ ಕಾರ್ಮಿಕರು.

ಜನಪ್ರತಿನಿಧಿಗಳಿಗೆ ಒಂದು ನ್ಯಾಯ, ಜನರಿಗೊಂದು ನ್ಯಾಯ.ಜನರು ತಮ್ಮ ಸಮಸ್ಯೆಯನ್ನ ತಿಳಿಸಲು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ಕೈಗೊಂಡಿದ್ದರು, ಹಾಗೂ ನಿನ್ನೆ ದಿನ ಮಾದ್ಯಮದಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ವಿಷಯ ಗೊತ್ತಿದ್ದರೂ ಯೇಚ್ಚೆತ್ತು ಗೊಳ್ಳದ ಗ್ರಾಮ ಪಂಚಾಯತ್ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಮಳ್ಳಿಮಠ, ಹಾಗೂ ಜೈ ಗಳಾದ ಮುರಳೀಧರ್, ಸರಿಯಾದ ಸಮಯಕ್ಕೆ ಬಾರದೆ ಇರುವದು, ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸತತವಾಗಿ ಒಂದು ಘಂಟೆ ಕಾಲ ದೂರವಾಣಿ ಸಂಪರ್ಕ ಮಾಡಿ ಕಾರ್ಯಾಲಯಕ್ಕೆ ಬನ್ನಿ ಕಾರ್ಮಿಕರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು, ಅವರ ಮಾತಿಗೆ ಬೆಲೆ ಕೊಡಲಾರದೇ ಇರುವ ಅಧಿಕಾರಿಗಳು ಜನರ ಕೆಂಗಣ್ಣಿಗೆ ಗುರಿಯಾದರು.

ಕುಷ್ಟಗಿ: ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ, ಸೋಮವಾರ ಗ್ರಾಮದ ಕೂಲಿ ಕಾರ್ಮಿಕರು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯ ಗೊಂದಲ,15ನೇ ಹಣಕಾಸು ಯೋಜನೆ ಅಡಿಯಲ್ಲಿ ಹಣ ದುರುಪಯೋಗ, ಹಲವು ಕಾಮಗಾರಿಯಲ್ಲಿ ಬೋಗಸ್ ಬಿಲ್,ಕಾರ್ಯಾಲಯದಲ್ಲಿ ಜನರ ಕೆಲಸವಾಗಬೇಕಾದರೆ ಕಮಿಷನ್ ದಂದೆ, ನಡೆಯುತ್ತಿದೆ ಮನೆ ಜಿಪಿಎಸ್ ಮಾಡಬೇಕಾದರೂ ಫಲಾನುಭವಿಗಳಿಂದ ಹಣ ವಸೂಲಿ. ಈ ವಸೂಲಿ ಮಾಡುತ್ತಿರುವ ಪಿಡಿಒ ಗಳಾದ ಮಲ್ಲಿಕಾರ್ಜುನ್ ಮಳ್ಳಿಮಠ ಹಾಗೂ ಕಂಪ್ಯೂಟರ್ ಆಪರೇಟರ್ ಗಳಾದ ಕನಕರಾಯ ಇವರನ್ನ ಅಮಾನತ್ತು ಮಾಡಬೇಕು ಇಲ್ಲದಿದ್ದರೆ ಉಘ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಾರ್ಮಿಕರು ಹಾಗೂ ಯುವಕರಾದ, ನಾಗರಾಜ್ ನಾಯಕ್, ಸಿದ್ದರಾಮ ಪೊಲೀಸ್ಪಾಟೀಲ್ ,ಪರಶುರಾಮ್ ಬೇರ್ಗಿ ಆಪಾದಿಸಿದರು.
ಗ್ರಾಮದ ನೂರಾರು ಕಾರ್ಮಿಕರು ಮಹಿಳಾ ಕೂಲಿ ಕಾರ್ಮಿಕರು, ಪಂಚಾಯಿತಿ ಕಚೇರಿ ಮುಂದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಜೈ ಯವರ ವಿರುದ್ಧ ಘೋಷಣೆ ಕೂಗಿ ಗಮನ ಸೆಳೆದರು.ಕೊನೆಗೆ ಅಧಿಕಾರಿಗಳು ಜನರ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೆ ಮೌನಕ್ಕೆ ಶರಣಾದರು.
ಪ್ರತಿಭಟನೆಯಲ್ಲಿ ಹನುಮೇಶ್ ಗರ್ಜಿನಾಳ,ಮಾರುತಿ ಬೇರ್ಗೆ, ರಮೇಶ್ ವಡ್ಡರಕಲ್,ಕರೇಗೌಡ ಪೊಲೀಸ್ ಪಾಟೀಲ್, ಬಸವರಾಜ್ ವಡ್ಡರಕಲ್ ,ಬಸವರಾಜ್ ಡೊಳ್ಳಿನ ವೀರೇಶ್ ಕಲ್ಲುಗುಡಿ ಹಾಗೂ ಬಸವರಾಜ ಮೂಲಿಮನಿ ಮತ್ತು ಅಮರಗುಂಡಪ್ಪ ಹೊಸಮನಿ, ಶರಣಪ್ಪ ಬೆಂಕಿ, ಮತ್ತಿತರರು ಇದ್ದರು. ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಕೂಲಿಕಾರ್ಮಿಕರು ಪ್ರತಿಭಟನೆ ಕೈಗೊಂಡರ ಕಾರ್ಮಿಕ ದನಿ ವಿಶೇಷ ಅಭಿಯಾನ.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



