ಶ್ರೀಯುತ ಚೇತನ್ ಚಿತ್ರನಟ ಅವರು ಜೈ ಭೀಮ್ ಸಂಘಟನಾ ಹಾಗೂ ಎಸ್ ಸಿ,ಎಸ್ ಟಿ, ಅಭಿವೃದ್ಧಿ ಕುರಿತು ಸಾರ್ವಜನಿಕ ಜೈ ಭೀಮ್ ಸಾಮಾನ್ಯ ಸಭೆಯನ್ನು ನೆರವೇರಿಸಿದರು.

ಕೊಪ್ಪಳ ಜಿಲ್ಲೆ ಯಲಬುರ್ಗಾ ದಲ್ಲಿ ಶ್ರೀಯುತ ಚೇತನ್ ಚಿತ್ರನಟ ಅವರು ಜೈ ಭೀಮ್ ಸಂಘಟನಾ ಹಾಗೂ ಎಸ್ ಸಿ,ಎಸ್ ಟಿ, ಅಭಿವೃದ್ಧಿ ಕುರಿತು ಸಾರ್ವಜನಿಕ ಜೈ ಭೀಮ್ ಸಾಮಾನ್ಯ ಸಭೆಯನ್ನು ನೆರವೇರಿಸಿದರು.
ಯಲಬುರ್ಗಾ ದಲ್ಲಿ ಡಾ. ಬಿಆರ್. ಅಂಬೇಡ್ಕರ್ ಅವರ ಮೂರ್ತಿ ಹತ್ತಿರ ಬಂದು ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿ, ಮುಂದೆ ಪುನೀತ್ ರಾಜಕುಮಾರ್ ಅವರಿಗೂ ನಮನ ಸಲ್ಲಿಸಿ, ರಾಣಿ ಚನ್ನಮ್ಮ ಅವರಿಗೂ ನಮನ ಸಲ್ಲಿಸಿ ಮುಂದೆ ಸಾಗಿದರು.
ಮುಂದೆ ಐ ಬಿ ಗೆ ತೆರಳಿ ಸಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಸಮಾನತೆಯ ಬಗ್ಗೆ ತಿಳುವಳಿಕೆ ಹೇಳಿ ನಮಗೆ ಯಾವುದೇ ಭೇದ ಭಾವ ಇಲ್ಲ, ನಾವು ಸಮಾನರು ಎಂಬ ಮಾತನ್ನು ಜನರಿಗೆ ತಿಳಿಸಿದರು.

ಯಲಬುರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು ಹಾಗೂ ಯುವಕ ಮಿತ್ರರು ಈ ಸಭೆಗೆ ಸೇರಿ ಎಸೆಸ್ವಿಗೊಳಿಸಿದರು.
ಚಿತ್ರ ನಟ ಶ್ರೀಯುತ ಚೇತನ್ ಕುಮಾರ್ ಅವರು, ಪ್ರಾಜೆಕ್ಟರ್ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿ ಅವರಿಗೆ ಡಾ: ಬಿಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಗೂ ಅವರು ಯಾವ ರೀತಿ ಬದುಕನ್ನು ಬದುಕಿದರು, ಎಂಬ ಮಾತನ್ನು ಜನರಿಗೆ ತಿಳಿಸಿ ನಾವು ಕೂಡ ಅವರಂತೆ ಬದುಕಿ ಬಾಳೋಣ ಎಂಬ ಮಾತನ್ನು ಜನರಲ್ಲಿ ಮೂಡಿಸಿದರು.

ಭಾಷಾ ಹಕ್ಕುಗಳು, ಸಂಸ್ಕೃತಿಕ ವಿಚಾರಗಳು,ಪ್ರಾದೇಶಿಕತೆ ಬಗ್ಗೆ ಎಚ್ಚರ ಮೂಡಿಸಿ,ಕರ್ನಾಟಕ ಭಾಷೆಗಳು, ಮತ್ತು ಸಮಾನತೆಯ ಪರವಾದ ನೀತಿಗಳು,ಮತ್ತು ಜಾನಪದ ಸಂಸ್ಕೃತಿಗಳ ಸೇವೆಗಳು, ಮತ್ತು ನ್ಯಾಯಕ್ಕಾಗಿ ಹೊರಡೋಣ ಎನ್ನುವ ಮಾತು ಸಾರಿ ಸಾರಿ ಜನರಿಗೆ ತಿಳಿಸಿದರು.

ನಂತರ ಛತ್ರಪ್ಪ ಛಲವಾದಿ, ಶಶಿಧರ್ ಹೊಸಮನಿ, ವಿಜಯ್ ಜಕ್ಕಲಿ, ತಿಪ್ಪಣ್ಣ ಛಲವಾದಿ, ಕನಕೇಶ್ ಪೆಂಟರ್, ಮಂಜುಳಾ ಸನ್ಕಡೆರ್, ಬಸವರಾಜ್ ಮ್ಯಾಗೇರಿ, ಗಡ್ದೆಪ್ಪ
ಕುಡಗುಂಟಿ, ಲಕ್ಷ್ಮಣ್ ಕಾಳೆ, ಪರಶುರಾಮ ದೊಡ್ಡಮನಿ, ಸೋಮಣ್ಣ ಬಡಿಗೇರ್, ಹಿಮಾಮ್ ಕರ್ಮುಡಿ, ಇನ್ನೂ ಅಲವರು ಸೇರಿ ಈ ಸಭೆಯನ್ನು ಎಶಸ್ವಿ ಗೊಳಿಸಿದರು.
ವರದಿ. ಶಶಿಧರ್ ಹೊಸಮನಿ
ಕಾರ್ಮಿಕ ಧ್ವನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



