ಕಾರ್ಮಿಕ ದ್ವನಿ ವಿಶೇಷ ಅಭಿಯಾನ: ದುಡಿವ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ

ದುಡಿವ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ
ಕೊಪ್ಪಳ ಜಿಲ್ಲೆ , ಕುಕನೂರು ತಾಲೂಕಿನ ಎರೆ ಹಂಚಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ಮಾಡಿದ್ದು ಎನ್ಎಂಆರ್‌ನಲ್ಲಿ ಸಿಗ್ನೇಕೊಪ್ಪ ಗ್ರಾಮದಿಂದ ರಾಜರು ಜಿಮೀನಿನಿಂದ ನದಾಫ್ ಅವರ ಜಮೀನಿನವರಿಗೆ ಹಂಚಿನಾಳ ರಸ್ತೆ ನಾಲ ಹೂಳು ತೆಗೆಯುವ ಕಾಮಗಾರಿ ಎನ್ಎಂಆರ್ ದಿನಾಂಕ 8.4.2025ರಂದು ಗ್ರಾಮ ಪಂಚಾಯಿತಿಯಲ್ಲಿ ಎನ್ಎಂಆರ್ ಹಾಕಲಾಗಿದೆ.
ಪ್ರತಿಯೊಬ್ಬ ಕೂಲಿಗಾಗಿ ರೂ. 370 ನೀಡಬೇಕಾದ ಕಾಮಗಾರಿಗೆ ಗ್ರಾಮ ಪಂಚಾಯತ್ ಸಿಬ್ಬಂದಿಯವರು ಕೂಲಿಯ ಮೊತ್ತ ಕೆಲಸ ಪೂರ್ಣಗೊಂಡ ನಂತರ ನ್ಎಂಆರ್‌ನಲ್ಲಿ ಒಂದು ದಿನಕ್ಕೆ 130 ಎಂದು ಅಧಿಕಾರಿಗಳು ಪರಿಗಣಿಸಿದ್ದಾರೆ.

ಇದನ್ನು ಕೇಳಿದಕ್ಕೆ ಕೂಲಿ ಕೆಲಸಗಾರರಿಗೆ ಅದಕ್ಕೆ ಉತ್ತರ ನೀಡದೆ ದಿನಕ್ಕೊಂದು ರೀತಿ ಹೇಳುತ್ತಿರುವ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಶ್ರೀಯುತ ನೀಲಮ್ಮ ಮಂಗಳೂರು ಮತ್ತು ಕಂಪ್ಯೂಟರ್ ಆಪರೇಟರ್ಗಳಾದ ವೀರಣ್ಣ ಇಟಗಿ ಎರಂಚಿನಾಳ ಮತ್ತೊಬ್ಬ ಆಪರೇಟರ್ ವೀರಣ್ಣ ಅಂಬ್ರಪ್ಪ ಬಿನ್ನಾಳ ಸಿಗ್ನೇಕೊಪ್ಪ ಈ ಮೂರು ಜನ ಸೇರಿ ಯಾದ ರೀತಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ವೇತನ ನೀಡುವಲ್ಲಿ ದುರ್ಬುದ್ಧಿ ತೋರಿಸುತ್ತಿದ್ದಾರೆ.
ಸರ್ಕಾರದ ಈ ಯೋಜನೆ , ಗುಳೇ ಹೋಗೋತನ ತಪ್ಪಿಸಲು ಅನುಷ್ಠಾನಗೊಳಿಸಲಾಗಿದೆ ಈ ಅಧಿಕಾರಿಗಳು ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿಕೊಂಡು ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸ್ಥಳ ಪರಿಶೀಲನೆ ಮಾಡಿ ಕೂಲಿ ಕಾರ್ಮಿಕ ಗಳಿಗೆ ನ್ಯಾಯ ಒದಗಿಸಬೇಕೆಂದು ಕೆಲಸ ಕೆಲಸ ಮಾಡಿದ ಕಾರ್ಮಿಕರು ಆಗ್ರಹಿಸಿದ್ದಾರ.
ಕಾರ್ಮಿಕಗಳಾದ ದೇವಪ್ಪ ದೊಡ್ಡಮನಿ ಶಿವಪುತ್ರಪ್ಪ ಕಾಳೆ ಹುಲುಗಪ್ಪ ಚಲವಾದಿ ಶರೀಫ್ ಸಾಬ್ ಬಡಿಗೇರ್ ಬಸವರಾಜ್ ಮುತ್ತಾಳ ಚಂದ್ರು ಕಂಪರ್ ಮಂಜುನಾಥ್ ಮನಗೂಳಿ ಚಂದ್ರು ಬಾರ್ಕೆರ್ ರಾಮಣ್ಣ ರಾಜೂರು ಇವರುಗಳು ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಶ್ನೆ ಮಾಡಿದ್ದಕ್ಕೆ ನೀವು ಯಾರತ್ರ ಹೋಗಿ ಕಂಪ್ಲೇಟ್ ಮಾಡಬಹುದು ಎಂದು ದರ್ಪ ತೋರಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ಮಾಡಬೇಕೆಂದು ಮಾಡದಿದ್ದರೆ ಗ್ರಾಮ ಪಂಚಾಯತಿಯ ಮುಂದೆ ಮುಂದಿನ ದಿನಗಳಲ್ಲಿ ಧರಣಿ ಕೂಡುವುದಾಗಿ ತಿಳಿಸಿದ್ದಾರೆ.
ಕಾರ್ಮಿಕ ದ್ವನಿ ವಿಶೇಷ ಅಭಿಯಾನ
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


