ಕಾರ್ಮಿಕ ಧ್ವನಿ ವಿಶೇಷ ಅಭಿಯಾನ: ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ ಚಿಕನ್ ಕೊಪ್ಪ ಗ್ರಾಮ

ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದ ಚಿಕನ್ ಕೊಪ್ಪ ಗ್ರಾಮ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಡಲಗೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಚಿಕನ್ ಕೊಪ್ಪ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬದು ನಿರ್ಮಾಣ ಕಾಮಗಾರಿಯನ್ನು ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಕೈಗೆ ತಗೊಂಡಿದೆ.



ಚಿಕನ್ ಕೊಪ್ಪ ಗ್ರಾಮದ ರೈತರದ ಬಸವರಾಜ್ ಕಡೆಮನಿ ಇವರ ಹೊಲದಲ್ಲಿ ಇಂದು ಬದು ನಿರ್ಮಾಣ ಕಾಮಗಾರಿಗೆ ಬಂದ ಕೂಲಿ ಕಾರ್ಮಿಕರಿಗೆ ಅವರ ಹೊಲದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಹೊಲದ ಮಾಲೀಕರಾದ ಸ್ವಯಂ ಪ್ರೇರಿತವಾಗಿ ಅವರೇ ಕೂಲಿಕಾರ್ಮಿಕರಿಗೆ ಅಡಿಗೆ ತಯಾರ ಮಾಡಿಸಿ ಊಟ ಮಾಡುವ ಮೂಲಕ ಕಾರ್ಮಿಕ ಜಯಂತಿಯನ್ನು ಆಚರಣೆ ಮಾಡಲಾಯಿತು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಮುಖಂಡರಾದ ಕನಕಮೂರ್ತಿ ಚಲವಾದಿ ಕಳಕಪ್ಪ ಚಲವಾದಿ ದೊಡ್ಡ ಕನಕಪ್ಪ ಚಲವಾದಿ ಬಸವರಾಜ್ ಕಡೆಮನಿ ಇನ್ನು ಅನೇಕ ಕೂಲಿ ಕಾರ್ಮಿಕರು ಸಾಮ್ರಾಚರಣೆ ಈ ಕಾರ್ಮಿಕ ದಿನವನ್ನು ಯಶಸ್ವಿಯಾಗಿ ನೆರವೇರಿಸಿದರು
ಕಾರ್ಮಿಕ ಧ್ವನಿ ವಿಶೇಷ ಅಭಿಯಾನ
ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



