ನೀವು ಕೊಟ್ಟ ಶಕ್ತಿಗೆ, ನಿಮ್ಮ ಋಣ ತೀರಿಸಬೇಕು ಅಂತ ಬಂದ್ದಿದೇವೆ!

ನೀವು ಕೊಟ್ಟ ಶಕ್ತಿಗೆ, ನಿಮ್ಮ ಋಣ ತೀರಿಸಬೇಕು ಅಂತ ಬಂದ್ದಿದೇವೆ!
ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ಮತದಾರರೇ ಈಶ್ವರ…
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನ ಎಪಿಎಂಸಿ ಆವರಣದಲ್ಲಿ 650 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರೊಂದಿಗೆ ಪಾಲ್ಗೊಂಡು ಮಾತನಾಡಿದೆ.
ಶಿಶುನಾಳ ಶರೀಫರು, ಕನಕದಾಸರಂತಹ ಸಂತರು, ಸೂಫಿಗಳಿಗೆ ಜನ್ಮ ಕೊಟ್ಟಂತಹ ಪವಿತ್ರ ಭೂಮಿ ಹಾವೇರಿ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮನ್ನು ಗೆಲ್ಲಿಸಿಕೊಟ್ಟ ಜಿಲ್ಲೆ ಇದು. ಹಾಗಾಗಿ ಇಲ್ಲಿನ ಜನರ ಋಣವನ್ನು ತೀರಿಸಲು ನಾವು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಲ್ಲಿ ನಿರಂತರವಾಗಿ ಹಮ್ಮಿಕೊಂಡಿದ್ದೇವೆ.
ಈ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈತರ ಬದುಕಿನಲ್ಲಿ ಬದಲಾವಣೆ ತರಲು, ನೀರಾವರಿ ಯೋಜನೆಗಳನ್ನು ತರುತ್ತಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡರೆ ನಮಗೆ ಗೌರವವಿರುತ್ತದೆ. ನಮ್ಮ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ.
ಬಿಜೆಪಿಯವರು ಗ್ಯಾರಂಟಿಗಳನ್ನು ಟೀಕಿಸುತ್ತಿದ್ದಾರೆ. ಆದರೆ ಇದೀಗ ಅವರೇ ಅದನ್ನು ನಕಲು ಮಾಡುತ್ತಿದ್ದಾರೆ. ‘ಕರ್ನಾಟಕದ ಮಾದರಿ, ದೇಶಕ್ಕೆ ಮಾದರಿಯಾಗಿದೆ’ ಎಂಬುವುದನ್ನು ಅವರೂ ಅರ್ಥ ಮಾಡಿಕೊಂಡಿದ್ದಾರೆ. ಜನರ ಬದುಕನ್ನೇ ಗ್ಯಾರಂಟಿ ಯೋಜನೆಗಳು ಬದಲಾಯಿಸಿದೆ. ನಮ್ಮ ಸರ್ಕಾರ ಜನರ ಬದುಕು, ಶ್ರಮ, ಕಷ್ಟ, ಸುಖಗಳಲ್ಲಿ ಭಾಗಿಯಾಗಿದೆ.



