ಜಮೀನು ಸೋಲಾರ ಪಾಲು ರೈತರು ಬೀದಿ ಪಾಲು

ಜಮೀನು ಸೋಲಾರ ಪಾಲು
ರೈತರು ಬೀದಿ ಪಾಲು
ಕುಕನೂರು : ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ತಳಕಲ್ ಗ್ರಾಮದ ದಲಿತ ರೈತರಿಗೆ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆ ಅಡಿಯಲ್ಲಿ ಮಂಜೂರಾಗಿದ್ದು ಸುಮಾರು ಎಂಟು ಎಕ್ರೆ ಜಮೀನು ಭೂಮಿಯ ಮೂಲ ಮಾಲಕರು 2007 2008ನಲ್ಲಿ ಸರ್ಕಾರವು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಮಂಜೂರು ಮಾಡಲಾಗಿತ್ತು.


ಇದರಲ್ಲಿ ಒಬ್ಬರಿಗೆ ಎರಡು ಎಕರೆಯಂತೆ ಫಲಾನುಭವಿಗೆ ಹಂಚಿಕೆಯಾಗಿದೆ ಅಲ್ಲಿಂದ ಇಲ್ಲಿವರೆಗೂ ರೈತರೆ ಉಳಿಮೆ ಮಾಡುತ್ತಿದ್ದು ಈಗ ಏಕಾಏಕಿಯಾಗಿ ರೈತರಿಗೆ ಸೋಲಾರ್ ಕಂಪನಿಯವರು ಈ ಜಮೀನನ್ನು ಬಿಟ್ಟು ಕೊಡಿ ಎಂದು ಸರ್ವೆ ಕಾರ್ಯಕ್ಕೆ ಮುಂದಾಗಿದ್ದಾರೆ ಸರ್ವೇ ನಂಬರ್ 696 ಭೂ ಮಾಲೀಕರಿಗೆ ಫಲಾನುಭವಿಗಳಿಗೆ ಭೂಮಿಯನ್ನು ಬಿಟ್ಟು ಕೊಡದೆ ಸರ್ಕಾರದಿಂದ ಬಂದ ಹಣವನ್ನು ನುಂಗಿ ಹಾಕಿ ಅಕ್ರಮ ಮಾರ್ಗವಾಗಿ ಸೋಲಾರ್ ಕಂಪನಿಗೆ ಭೂಮಿಯನ್ನು ಮಾರಿದ್ದಾರೆ ಅನ್ಯಾಯ ಮಾಡಿದ್ದರಿಂದ ದಲಿತ ಕುಟುಂಬ ರೈತರು ತಮ್ಮ ಅಳಿಲನ್ನು ತೋಡಿಕೊಂಡಿದ್ದಾರೆ.
ಸದ್ರಿ ವಂಚನೆ ಮಾಡಿದ ಭೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಮ್ಮ ಜಮೀನಿನಲ್ಲಿ ಹಗಲು-ರಾತ್ರಿ ಬಿಸಿಲು ಮಳೆ ಲೆಕ್ಕಿಸದೆ ಹೊಲದಲ್ಲಿ ಧರಣಿ ಕುಳಿತುಕೊಂಡಿದ್ದಾರೆ ಧರಣಿಯಲ್ಲಿ ಪಾಲ್ಗೊಂಡ ಡಿಎಸ್ಎಸ್ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಬೆಣಕಲ್ ಅವರು ಮಾತನಾಡಿ ದಲಿತರಿಗೆ ಮಂಜೂರಾದ ಜಮೀನನ್ನು ಪ್ರದೀಪ್ ಎಂಬುವರು ಅಕ್ರಮವಾಗಿ ಸೋಲಾರ್ಗೆ ಕಂಪನಿಗೆ ನೀಡಿದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಕೂಡಲೆ ಸ್ಥಳಕ್ಕೆ ಧಾವಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ತೋರದಿದ್ದರೆ ಉಗ್ರವಾದ ಪ್ರತಿಭಟನೆಯನ್ನು ಮಾಡಲು ಸಂಘಟನೆಗಳು ಮುಂದಾಗ ಬೇಕಾಗುತ್ತದೆ ಎಂದು ಅವರು ಮಾತನಾಡಿ ತಿಳಿಸಿದರು.
ವರದಿಗಾರರು ಶಶಿಧರ್ ಕೊಪ್ಪಳ ಜಿಲ್ಲೆ ಯಲಬುರ್ಗಾ



