ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ: ವರದಿ ಶಶಿಧರ್ ಹೊಸ್ಮನಿ ಕೊಪ್ಪಳ

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಅವಮಾನ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕವಳಕೇರಿ ಗ್ರಾಮದ ನಿನ್ನೆ ರಾತ್ರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಚಪ್ಪಲಿ ಹಾಕುವುದರ ಮೂಲಕ ಗ್ರಾಮದ ಉಪ್ಪಾರ್ ಸಮಾಜದ ಯುವಕರು ಈ ಒಂದು ದುಷ್ಕೃತ್ಯ ಮಾಡಿದ್ದಾರೆಂದು ಕವಳಕೇರಿ ಗ್ರಾಮದ ದಲಿತ ಸಮಾಜದ ಈ ಒಂದು ಕೃತ್ಯ ಮಾಡಿದ ಯುವಕರನ್ನು ಪ್ರತ್ಯಕ್ಷ ಕಂಡಿದ್ದಾರೆ.

ಬೆಳಿಗ್ಗೆ ತಾಲೂಕಿನ ದಲಿತ ಮುಖಂಡರಿಗೆ ಜಿಲ್ಲಾ ಮುಖಂಡರುಗಳಿಗೆ ಫೋನಿನ ಮುಖಾಂತ್ರ ವಿಷಯವನ್ನು ತಿಳಿಸಿ ಸ್ಥಳಕ್ಕೆ ಆಗಮಿಸಬೇಕೆಂದು ತಿಳಿಸಿದರು ದಲಿತ ಮುಖಂಡರು ಆಗಮಿಸಿ , ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಲಾಯಿತು.

ಸ್ಥಳಕ್ಕೆ ಆಗಮಿಸಿದ ಕುಕನೂರ ತಾಲೂಕಿನ ಪಿಎಸ್ಐ ಯಲಬುರ್ಗಾ ತಾಲೂಕಿನ ಸಿಪಿಐ ಕೊಪ್ಪಳ ಜಿಲ್ಲೆಯ ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲಿನೆ ನಡೆಸಿದ್ದಾರೆ ದಲಿತ ಮುಖಂಡರುಗಳು ಈ ಯುವಕರನ್ನು ಬಂದನೆ ಮಾಡುವರಿಗೂ ಧರಣಿ ಸತ್ಯಾಗ್ರವನ್ನು ನಿಲ್ಲೋದಿಲ್ಲ ಎಂದು ಮುಖಂಡರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ಘಟನೆಗೆ ಕಾರಣ ರಾಧ ಯುವಕರನ್ನು ಗಡಿಪಾರು ಮಾಡಬೇಕೆಂದು ಗ್ರಾಮಸ್ಥರು ತಾಲೂಕು ಮತ್ತು ಜಿಲ್ಲಾ ದಲಿತ ಮುಖಂಡರುಗಳು ಬಂದಿದ್ದ ತಾಲೂಕ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ ದಲಿತ ಮುಖಂಡರುಗಳಾದ ಜಿಲ್ಲಾಧ್ಯಕ್ಷರಾದ ವಸಂತ್ ಬಾಯುಮನಿ ಯಲಬುರ್ಗಾ ತಾಲೂಕಿನ ಚಲವಾದಿ ಸಮಾಜ ಅಧ್ಯಕ್ಷರಾದ ಅಂದಪ್ಪ ಹಾಳ್ಕೇರಿ ಹನುಮಂತಪ್ಪ ಮುತ್ತಾಳ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಶ್ರೀಯುತ ಈರಪ್ಪ ಕುಡಗುಂಟಿ ಯಮನೂರಪ್ಪ ನಡವಲಮನಿ ಕೊಪ್ಪಳ ಜಿಲ್ಲೆ ಭಾರತ್ ಭೀಮ್ ಸೇನ್ ಅಧ್ಯಕ್ಷರಾದ ವಿಜಯ ಜಕ್ಲಿ ಬಸಪ್ಪ ಬಿನ್ನಾಳ್ ಸಿದ್ದಪ್ಪ ಮುರುಡಿ ಇನ್ನು ಅನೇಕ ದಲಿತ ಮುಖಂಡರುಗಳು ಈ ಒಂದು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ.
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



