
ಬೆಂಗಳೂರು, ಮೇ 07: ಕಾಶ್ಮೀರ ಪಹಲ್ಗಾಮ್‌ನಲ್ಲಿ ನಿಶಸ್ತ್ರಧಾರಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದ ಪಾಕಿಸ್ತಾನಿ ಉಗ್ರರ ಅಡಗುತಾಣಗಳನ್ನು ಭಾರತೀಯ ಸೇನೆ ಏರ್‌ಸ್ಟ್ರೀಕ್ ಮೂಲಕ ಧ್ವಂಸಗೊಳಿಸಿದೆ. ‘ಸಿಂಧೂರು ಕಾರ್ಯಾಚರಣೆ’ ಹೆಸರಿನಲ್ಲಿ ಈ ದಾಳಿ ನಡೆಸಿ ಭಾರತದ ಜನರಪರ ಸೇನೆ ಪಾಕಿಗಳಿಗೆ ತಕ್ಕ ಉತ್ತರ ನೀಡಿದೆ.
ಪದೇ ಪದೇ ಖ್ಯಾತೆ ತೆಗೆದ, ಜನರ ಜೀವಗಳ ಜೊತೆ ಆಟವಾಡುವ ಉಗ್ರರಿಗೆ ಈ ಬಾರಿ ತಕ್ಕ ಶಾಸ್ತಿ ಮಾಡುವಂತೆ ಇಡೀ ಭಾರತವೇ ಆಗ್ರಹಿಸಿತ್ತು. ಇದೀಗ ಏರ್‌ಸ್ಟ್ರೈಕ್ ನಡೆದಿದ್ದು, ಕರ್ನಾಟಕದಲ್ಲಿ ವಿಜಯೋತ್ಸವ ಆಚರಣೆ ನಡೆದಿದೆ. ಸೇನಾ ದಾಳಿ ಬಗ್ಗೆ ನಾಯಕರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಗಡಿ ಭಾಗದ ಪಾಕ್ ಆಕ್ರಮಿಕ ಪ್ರದೇಶಗಳ (PoK) ಮೇಲೆ ಭಾರತದ ನಡೆಸಿದ ಆಪರೇಷನ್ ಸಿಂಧೂರ ದಾಳಿಯನ್ನು ಅನೇಕರು ಸ್ವಾಗತಿಸಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಸಂಭ್ರಮಿಸಿದ್ದಾರೆ. ಸಿಹಿ ಹಂಚಿದ್ದಾರೆ. ಅಲ್ಲಲ್ಲಿ ಕೇಸರಿ ಧ್ವಜಗಳು ಪ್ರದರ್ಶನಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತೂ #OperationSindoor #IndiaPakistantensions #Indianarmy ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಈ ದಾಳಿ ಬಗ್ಗೆ ಬಿಜೆಪಿ ಶಾಸಕ ಸೇರಿ ಅನೇಕರು ಪ್ರತಿಕ್ರಿಯಿಸಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು, ಭಾರತದ ಸೇನೆಯಿಂದ ಏರ್ ಸ್ಟ್ರೈಕ್ ಸ್ವಾಗತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ ಪಹಲ್ಗಾಮ್ ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರ ತೆಗೆದುಕೊಂಡಿದೆ ಎಂದಿದ್ದಾರೆ.
ಇದು ಪ್ರಾರಂಭವಷ್ಟೇ, ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ. ಸಮಸ್ತ ಭಾರತೀಯರ ಪರವಾಗಿ ಈ ದಾಳಿಯನ್ನು ಸ್ವಾಗತಿಸುತ್ತೇನೆ. ಹಾಗೂ ಸೇನೆ ಮತ್ತು ಸರ್ಕಾರದ ಜೊತೆ ನಾವೆಲ್ಲರೂ ನಿಲ್ಲೋಣ. ಭಾರತ ಮಾತೆಗೆ ಜಯವಾಗಲಿ. ಜೈ ಹಿಂದ್ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಒಟ್ಟಾಗಿರುವಂತೆ ಅವರು ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಪ್ರತಿಕ್ರಿಯಿಸಿದ್ದು, ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಸೂಕ್ತ ಹಾಗೂ ನಿರ್ಣಾಯಕ ಪ್ರತಿಕ್ರಿಯೆ ನೀಡಿದ್ದು ಶ್ಲಾಘನೀಯ. ಭಯೋತ್ಪಾದನೆಯ ಮೂಲವನ್ನೇ ಧ್ವಂಸ ಮಾಡುವ ದಿಶೆಯಲ್ಲಿ ಕೈಗೊಂಡಿರುವ ಆಪರೇಶನ್ ಸಿಂಧೂರ ಒಂದು ದಿಟ್ಟ ನಿರ್ಧಾರವಾಗಿದೆ.
ಭಾರತೀಯ ಸೇನೆಯ ಶೌರ್ಯ, ಪರಾಕ್ರಮ ಹಾಗೂ ಕಾರ್ಯಕ್ಷಮತೆ ನಮಗೆ ಹೆಮ್ಮೆ ತಂದಿದೆ. ಭದ್ರತೆ, ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಯ ರಕ್ಷಣೆಗೆ ಕೇಂದ್ರ ಸರ್ಕಾರ ಮತ್ತು ನಮ್ಮ ಸೇನೆ ಕೈಗೊಂಡಿರುವ ಎಲ್ಲಾ ಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಆಪರೇಷನ್ ಸಿಂಧೂರ’ ಮೂಲಕ ಪ್ರತ್ಯುತ್ತರ
ಗೃಹ ಸಚಿವ ಜಿ.ಪರಮೇಶ್ವರ ಅವರು, ಪಾಕಿಸ್ತಾನದ ಉಗ್ರಗಾಮಿ ನೆಲೆಗಳ ಮೇಲೆ ನಮ್ಮ ರಕ್ಷಣಾ ಇಲಾಖೆಯು ‘ಆಪರೇಷನ್ ಸಿಂಧೂರ’ ಕಾರ್ಯಚರಣೆಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿದೆ. ಪಹಲ್ಗಾಮ್‌ನಲ್ಲಿ ರಾಕ್ಷಸ ಕೃತ್ಯ ಎಸಗಿದ್ದ ಭಯೋತ್ಪಾದಕರಿಗೆ ತಕ್ಕ ಶಾಸ್ತಿಯಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಮ್ಮೆಲ್ಲರ ಬೆಂಬಲ ಇರುತ್ತದೆ. ದೇಶದ ಹಿತ ಕಾಪಾಡಲು ನಾವೆಲ್ಲ ಒಟ್ಟಾಗಿ ನಿಲ್ಲಬೇಕು ಎಂದು ಅವರು ಕರೆ ನೀಡಿದ್ದಾರೆ.
ಪ್ರಮೋದ್ ಮುತಾಲಿಕ್ ಎಚ್ಚರಿಕೆ
‘ಆಪರೇಷನ್ ಸಿಂಧೂರ’ ದಾಳಿ ಕುರಿತು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ವತಿಯಿಂದ ಆವರಿಸಿದ ವಿಜಯೋತ್ಸವ ನಡೆಯಿತು. ಪಾಪಿ ಪಾಕಿಸ್ತಾನಕ್ಕೆ ಬೆಂಬಲ ಕೊಡುವ ಭಾರತೀಯ ಮುಸ್ಲಿಮರು ಎಲ್ಲಿ ಇದ್ದಿರಿ? ಬನ್ನಿ ನಿಮ್ಮ ತಾಕತ್ ಏನೆಂದು ತೋರಿಸಿರಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
‘ಕು*ಡ್ಯಾಗ ಬಾಂಬ್’ ಇಟ್ಟು ಉಡಾಯಿಸುತ್ತೇವೆ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ಪ್ರತಿದಾಳಿ ವಿಚಾರವಾಗಿ ಮಾತನಾಡಿದ ಅವರು, ಪಾಪಿ ಪಾಕಿಸ್ತಾನ ಹೇಡಿ ಆಗಿದ್ದು ಎಲ್ಲಿ ಇದೆ ತಮ್ಮ ಹೇಡಿತನದ ರಾಜಕಾರಣ, ತಮ್ಮ ಸವಾಲುಗಳನ್ನು ಮೊದಲು ಸ್ವೀಕಾರ ಮಾಡಿ ಹೇಡಿತನದಿಂದ ಹೋಗಬೇಡಿ ಎಲ್ಲಿ ಇದ್ದಿರಿ?. ಪಾಕಿಸ್ತಾನಕ್ಕೆ ಬೆಂಬಲ ಕೊಡುವ ಭಾರತೀಯ ಮುಸ್ಲಿಮರೇ ನಮಕ್ ಹರಾಮ್ ಕೋರರು. ಇದೇ ರೀತಿ ವರ್ತನೆ ಮುಂದೆ ವರೆದರೆ ‘ನಿಮ್ಮ ಕು..ಡ್ಯಾಗ ಬಾಂಬ್’ ಇಟ್ಟು ಉಡಾಯಿಸುತ್ತೇವೆ ಎಂದು ಇದು ಕೇವಲ ಶುಭಾರಂಭ ಇದು ಟ್ರೇಲರ್ ಪಿಚ್ಚರ್ ಬಾಕಿ ಹೈ ಎಂದು ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಒಳ್ಳೆಯ ಕೆಲಸ ಆಗುತ್ತಿದೆ. ಈಗಲಾದರು ಪಾಕಿಸ್ತಾನ ಪಾಠ ಕಲಿಯಬೇಕು ಎಂದರು. ಇದೇ ಸಂದರ್ಭದಲ್ಲಿ ಪಟಾಕಿ ಹೊಡೆದು ಸಿಹಿ ತಿನಿಸಿ ಹಿಂದೂ ಕಾರ್ಯಕರ್ತರು ಸಂಭ್ರಮಪಟ್ಟರು.
‘ಭಾರತ್ ಮಾತಾಕಿ ಜೈ, ಪಾಕಿಸ್ತಾನ ಧಿಕ್ಕಾರ’ ಎಂದು ಕೂಗಿ ಕಾರ್ಯಕರ್ತರು ಸಂತಸ ಹಂಚಿಕೊಂಡರು.
ಕಾಂಗ್ರೆಸ್ ಶಾಂತಿ ಜಪ ಖಂಡನೀಯ: ಶೆಟ್ಟರ್ ಕೌಂಟರ್
ಸಂಸದ ಜಗದೀಶ್ ಶೆಟ್ಟರ್ ಅವರು ‘ಸಿಂದೂರ ಕಾರ್ಯಾಚರಣೆ’ ಬಗ್ಗೆ ಪ್ರತಿಕ್ರಿಯಿಸಿದ್ದು, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತದ ಪ್ರತಿದಾಳಿ ನಡೆದಿದೆ. ಜಮ್ಮು- ಕಾಶ್ಮೀರದಲ್ಲಿ ನಮ್ಮ ಭಾರತೀಯ ಮೇಲೆ ಉಗ್ರಗಾಮಿಗಳಿಂದ ದಾಳಿ ಆಗಿತ್ತು. ಇದಕ್ಕೆ ತಕ್ಕವಾದ ಉತ್ತರ ಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ದಿಟ್ಟವಾಗಿದೆ ಎಂದು ಅವರು ಹೆಮ್ಮೆ ಶ್ಲಾಘಿಸಿದರು.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ಮೇಲೆ ದಾಳಿ ಮಾಡಿದ್ದು ಶ್ಲಾಘನೀಯ. ಈಗ ‘ಆಪರೇಷನ್ ಸಿಂಧೂರ್’ಗೆ ದಾಖಲೆ ಸಹ ನಮ್‌ಯ ಸೈನಿಕರು ನೀಡಿದ್ದಾರೆ. ಎಲ್ಲಿ ಉಗ್ರರು ಅಡಗಿದ್ದಾರೆ ಅಲ್ಲಿಗೇ ಹೋಗಿ ಹೊಡೆದಿದ್ದಾರೆ. ಶಾಂತಿ ಮಂತ್ರ ಜಪಿಸಿದ ಕರ್ನಾಟಕ ಕಾಂಗ್ರೆಸ್ ನಡೆ ಇದು ಸರಿಯಲ್ಲ. ಜನರ ಆಕ್ರೋಶದ ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದು ಗೊತ್ತಾಗುತ್ತದೆ. ಕರ್ನಾಟಕ ಕಾಂಗ್ರೆಸ್ ಪಹಲ್ಗಾಮ್ ದಾಳಿಯಲ್ಲಿ ಈ ರೀತಿ ಕ್ರಮ ಸರಿಯಲ್ಲ ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ.