State
ಬೆಳಗಾವಿಯ ಶ್ರೀ ಕನಕದಾಸ ವೃತ್ತದಲ್ಲಿ ನೆಲಕಚ್ಚಿದ ಸಿಗ್ನಲ್ ಲೈಟ್ಸ್…ಸಂಚಾರ ದಟ್ಟಣೆ… ಸಂಚಾರಿ ಪೊಲೀಸರಿಲ್ಲದೇ ಪೇಚಿಗೆ ಸಿಲುಕುತ್ತಿರುವ ವಾಹನಧಾರಕ…

ಬೆಳಗಾವಿಯ ಶ್ರೀ ಕನಕದಾಸ ವೃತ್ತದಲ್ಲಿ ನೆಲಕಚ್ಚಿದ ಸಿಗ್ನಲ್ ಲೈಟ್ಸ್…ಸಂಚಾರ ದಟ್ಟಣೆ…
ಸಂಚಾರಿ ಪೊಲೀಸರಿಲ್ಲದೇ ಪೇಚಿಗೆ ಸಿಲುಕುತ್ತಿರುವ ವಾಹನಧಾರಕ…
ಇದು ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಆದರೇ ಇಲ್ಲಿನ ಸಿಗ್ನಲ್’ಗಳ ಸ್ಥಿತಿ ದಯನೀಯವಾಗಿದ್ದು, ಮುಂದೆ ಸಾಗುವ ಜನರು ಸಂಚಾರಿ ನಿಯಮವಿಲ್ಲದೇ ವಿಚಲಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವಾರು ದಿನಗಳಿಂದ ಕೆಟ್ಟು ನಿಂತಿರುವ ಸಿಗ್ನಲ್ ಲೈಟ್ಸ್’ಗಳು… ಮುರಿದು ನೆಲಕ್ಕೆ ವಾಲಿದರೂ ಹೇಳುವವರಿಲ್ಲ. ಕೇಳುವವರಿಲ್ಲ. ಯಾವಾಗಲೂ ಟ್ರಾಫಿಕ್ ಜಾಮ್. ಸಂಚಾರಿ ನಿಯಮವಂತೂ ಸುತಾರಾಂ ಯಾರೂ ಪಾಲಿಸುವವರಿಲ್ಲ.
ಹೌದು, ನೀವು ನೋಡುತ್ತಿರುವ ಈ ದೃಶ್ಯಗಳು ಬೆಳಗಾವಿಯ ಶ್ರೀ ಕನಕದಾಸ ವೃತ್ತದ್ದು. ಇದು ಬೆಳಗಾವಿಯ ಕಣಬರ್ಗಿ ಪ್ರದೇಶದಿಂದ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಕೆಳಗಿನ ಮಾರ್ಗ ಇದಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯ ಮಾರ್ಗವಾಗಿ ಸಂಚರಿಸುತ್ತವೆ. ಆದರೇ, ಹಲವಾರು ದಿನಗಳಿಂದ ಇಲ್ಲಿನ ಸಿಗ್ನಲ್ ಲೈಟ್ಸಗಳು ಅಧೋಗತಿಗೆ ತಲುಪಿದ್ದು, ಜನರು ಮಾಹಿತಿ ಸಿಗದೇ ಪೇಚಿಗೆ ಸಿಲುಕುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ನಿಂತು ಟ್ರಾಫಿಕ್ ನಿಯಮ ಪಾಲನೆಯ ಜಾಗೃತಿ ಮೂಡಿಸಿ ದಂಡ ವಿಧಿಸುವ ಪೊಲೀಸರು ಶ್ರೀ ಕನಕದಾಸ ವೃತ್ತದೆಡೆ ಜಾಣ ಕುರುಡುತನ ಯಾಕೆ
ಪ್ರದರ್ಶಿಸುತ್ತಿದ್ದಾರೆಂಬುದು ಜನರ ಪ್ರಶ್ನೆಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಹೊಸ ಹೊಸ ಅಭಿವೃದ್ಧಿಯನ್ನು ಪಡಿಸುವ ಮೊದಲೂ ಅವಶ್ಯಕತೆಯಿರುವಲ್ಲಿ ಸಿಗ್ನಲ್ ಲೈಟ್ಸ್’ಗಳನ್ನು ದುರಸ್ಥಿಗೊಳಿಸಬೇಕೆಂಬುದು ಜನರ ಬೇಡಿಕೆಯಾಗಿದೆ


