ಮೇ 15ಕ್ಕೆ ರೈಲ್ವೆ ಪ್ರಯಾಣಿಕರಿಗೆ ಬಹುದಿನದ ಕನಸು ನನಸಾಯಿತು ಕುಷ್ಟಗಿ ಟು ಹುಬ್ಬಳ್ಳಿ ಉದ್ಘಾಟನೆ ಸಮಾರಂಭ. ವರದಿ ಶಶಿಧರ್ ಹೊಸ್ಮನಿ

ಮೇ 15ಕ್ಕೆ ರೈಲ್ವೆ ಪ್ರಯಾಣಿಕರಿಗೆ ಬಹುದಿನದ ಕನಸು ನನಸಾಯಿತು
ಕುಷ್ಟಗಿ ಟು ಹುಬ್ಬಳ್ಳಿ ಉದ್ಘಾಟನೆ ಸಮಾರಂಭ
ಯಲಬುರ್ಗಾ : ಗದಗ್ ವಾಡಿ ರೈಲ್ವೆ ಯೋಜನೆ ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಚಾರ ಸೇವೆ ಮೇ 15ರಿಂದ ಪ್ರಾರಂಭವಾಗಲಿದೆ.
ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ ಸೋಮಣ್ಣ ಅವರಿಂದ ಅಧಿಕೃತವಾಗಿ ಮೇ 15ಕ್ಕೆ ಗುರುವಾರ ಬೆಳಿಗ್ಗೆ 9: 45 ನಿಮಿಷಕ್ಕೆ ಕುಷ್ಟಗಿ ನಗರದಿಂದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ನೂತನವಾಗಿ ನಿರ್ಮಾಣಗೊಂಡಿರುವ ಕುಷ್ಟಗಿ ಟು ತಳಕಲ್ ರೈಲ್ವೆ ಮಾರ್ಗಕ್ಕೆ ಮತ್ತು ಗದಗ್ ವಾಡಿ ಹೊಸ ರೈಲ್ವೆ ಮಾರ್ಗಕ್ಕೆ ವಿಸ್ತರಣೆ ಚಾಲನೆ ನೀಡಲಿದ್ದಾರೆ.

ಅದಾದ ನಂತರ ಕುಷ್ಟಗಿ ಟು ಹುಬ್ಬಳ್ಳಿ ವರೆಗೆ ಸಂಚರಿಸುವ ಪ್ಯಾಸೆಂಜರ್ ರೈಲ್ವೆ ಗೆ ಚಾಲನೆ ನೀಡಲಿದ್ದಾರೆ ಅಧಿಕೃತ ಕೇಂದ್ರ ಸಚಿವರಿಂದ ಟಿಪಿ.. ಪ್ರವಾಸದ ಮಾಹಿತಿ ವರ ಬಿದ್ದಿದೆ ಕುಷ್ಟಗಿಯಿಂದ ಹುಬ್ಬಳ್ಳಿ ಹೋಗುವ ಜನರು ಇನ್ನು ಮೂರು ನಾಲ್ಕು ದಿನ ಕಾಯು ಬೇಕಾಗುತ್ತದೆ ಬಹಳ ವರ್ಷಗಳ ಹಿಂದೆ ಯೋಜನೆಯನ್ನು ಯಲಬುರ್ಗಾ ಕ್ಷೇತ್ರದ ಶಾಸಕರಾದ ಶ್ರೀಯುತ ಬಸರಾಜ್ ರಾಯರೆಡ್ಡಿ ಅವರ ಬಹುದಿನದ ಕನಸು ಆಗಿತ್ತು ಈ ಕನಸು ಮೇ 15ಕ್ಕೆ ಗುರುವಾರದಂದು ನನಸಾಗಲಿದೆ.
ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕಿನ ಜನರು ಈ ಎರಡು ತಾಲೂಕಿಗೆ ಸಂಬಂಧಪಟ್ಟ ಹಳ್ಳಿಗಳು ನಿಂಗಲಬಂಡಿ ಹನುಮಾಪುರ ಕುಕನೂರು ಸಂಗನಾಳ ಗ್ರಾಮ ರೈಲಿನಲ್ಲಿ ಪ್ರಯಾಣಿಸಬೇಕೆಂಬ ಕಾತುರದಿಂದ ಇಲ್ಲಿನ ಜನ ಕಾಯುತ್ತಿದ್ದಾರೆ.
ಮಾ 28ರಂದು ಪ್ರಾಯೋಗಿಕವಾಗಿ ರೈಲ್ವೆ ಸಂಚಾರ ಪ್ರತಿವಾರದಲ್ಲಿ ಎರಡು ಬಾರಿ ಕುಷ್ಟಗಿಯಿಂದ ತಳಕಲ್ವರೆಗೂ ಪ್ರಯೋಗ ನಡೆಸಿದ್ದಾರೆ ಸಂಚಾರಕ್ಕೆ ರೈಲ್ವೆ ಇಲಾಖೆಯಿಂದ ಅಧಿಕೃತವಾಗಿ ಘೋಷಣೆಯಾಗಿದೆ.
ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸವಿರುವ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀಯುತ ವಿ ಸೋಮಣ್ಣ ಅವರು ಕೊಪ್ಪಳ ಸಂಸದರಾದರು ಶ್ರೀಯುತ ರಾಜಶೇಖರ್ ಹಿಟ್ನಾಳ್ ಅವರು ಯಲಬುರ್ಗಾ ಶಾಸಕರಾದ ಶ್ರೀಯುತ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಕುಷ್ಟಗಿ ಶಾಸಕರಾದ ಶ್ರೀಯುತ ದೊಡ್ಡನಗೌಡ ಪಾಟೀಲ್ ಅವರು ಯಲಬುರ್ಗಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಯುತ ಹಾಲಪ್ಪ ಹಾಜರಿ ಅವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಯುತ ಅರವಿಂದ್ ಗೌಡ್ರು ಮತ್ತು ಒಬ್ಬರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಯುತ ಈರಪ್ಪ ಕುಡುಗುಂಟಿ ಶ್ರೀಯುತ ಬಸವರಾಜ್ ಕವಟೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಮತ್ತು ಇನ್ನು ಅನೇಕ ಗಣ್ಯ ವ್ಯಕ್ತಿಗಳು ರಾಜಕೀಯ ಮುಖಂಡರುಗಳು ರೈಲ್ವೆ ಇಲಾಖೆ ಅಧಿಕಾರಿಗಳು ಇವರೊಂದಿಗೆ ಈ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ
ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


