State

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬಳೂಟಗಿ ಗ್ರಾಮದಲ್ಲಿ ಎಸ್ ಸಿ, ಎಸ್ ಟಿ ಸಾಮಾನ್ಯ ಜನರ ಸಭೆ.

ಎಸ್ ಸಿ, ಎಸ್ ಟಿ ಸಾಮಾನ್ಯ ಜನರ ಸಭೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬಳೂಟಗಿ ಗ್ರಾಮದಲ್ಲಿ ದಿನಾಂಕ 11/05/2025 ರಂದು ಎಸ್ ಸಿ ಎಸ್ ಟಿ ಜನರ ಸಭೆ ನಡೆಸಲಾಯಿತು.

ಸಿ ಪಿ ಐ ಮೌನೇಶ್ ಪಾಟೀಲ್, ಪಿ ಎಸ್ ಐ ವಿಜಯ್ ಪ್ರತಾಪ್, ಅವರು ಬಳೂಟಗಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರನ್ನು ಉದ್ದೇಸಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳಿ, ಅವರಿಗೆ ಏನೇನು ಸಮಸ್ಸೆ ಇದೆ ಎಂದು ಖುದ್ದಾಗಿ ಕೇಳಿ ಅವರವರ ಕುಂದು ಕೊರತೆಗಳನ್ನು ಬೆರೆದುಕೊಂಡಿದ್ದಾರೆ.

ಊರಿನಲ್ಲಿ ಡಬ್ಬಿ ಅಂಗಡಿಗಳಲ್ಲಿ ಮದ್ಯ ನಿಷೇದಕ್ಕೆ ಅಗ್ರಹ ನೀಡಿದ ಸಾರ್ವಜನಿಕರಿಗೆ ಸರಿಯಾಗಿ ಜನರಿಗೆ ಸಮಸ್ಸೆ ಬಗೆಹರಿಸುತ್ತೇವೆ ಎಂದು ಹೇಳಿದರು. ನಂತರ ಗ್ರಾಮದ ಯುವಕರು ಮತ್ತು ಸಾರ್ವ ಜನಿಕರು ಸೇರಿ ಊರಿನ ಸಮಸ್ಸೆ ಗಳನ್ನು ಅಳಲು ತೋಡಿಕೊಂಡರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಸಾಮಾನ್ಯ ಜನರ ಎಸ್ ಸಿ ಎಸ್ ಟಿ ಗ್ರಾಮ ಸಭೆಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ನಿಂಗಪ್ಪ ಹಿರೇಮನಿ ಅವರು ಗ್ರಾಮದಲ್ಲಿ ಯಾವುದೇ ರೀತಿ ಮದ್ಯ ಪಾನ ಮಾರಾಟ ಮಾಡುವಂತಿಲ್ಲ, ಇಸ್ಪೀಟ್ ಆಡುವಂತಿಲ್ಲ , ಗ್ರಾಮದಲ್ಲಿ ಮಹಿಳೆಯರಿಗೆ ಸುಲಭ ಶೌಚಾಲಯ ಇರುವುದಿಲ್ಲ ಮಹಿಳೆಯರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಆದ್ದರಿಂದ ಗ್ರಾಮ ಪಂಚಾಯಿತಿ ಪಿ ಡಿ ಓ ಅವರಿಗೆ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡರು ಕ್ಯಾರೆ ಎನ್ನುತ್ತಿಲ್ಲ. ಹೀಗಾದರೆ ದಲಿತ ಕೇರಿಗಳು ಉದ್ಧಾರ ಆಗುವುದು ಹೇಗೆ ಸ್ವಾಮಿ.

ದಲಿತರ ಕಾಲೋನಿಯಲ್ಲಿ ಒಳಚರಂಡಿಗಳು ಸ್ವಚ್ಛತೆ ಇಲ್ಲದೆ ಇರುವದು ಗೊತ್ತಿದ್ದರೂ ಕೂಡ ದಲಿತರು ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಹೋಗಿ ಹೇಳಿದರು ಕೇಳುವ ಸ್ಥಿತಿಯಲ್ಲಿ ಇಲ್ಲ. ಆಮೇಲೆ ದಲಿತರ ಕೇರಿ ಎನ್ನುವ ತಾಸ್ತರವೇ! ಎಂದು ತಿಳಿಯುತ್ತಿಲ್ಲ. ಕಾರಣ ಪಿ ಡಿ ಓ ಅವರಿಗೆ ದಲಿತ ಕೇರಿಯಿಂದ ಸುಮಾರು ಸಾರಿ ಮನವಿ ಕೂಡ ಕೊಟ್ಟಿದ್ದಾರೆ. ಆದರೂ ಕೂಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿ ದಲಿತರ ಕಾಲೋನಿಗೆ ಏನು ಕೆಲಸ ಕಾರ್ಯವನ್ನು ಮಾಡುತ್ತಿಲ್ಲ. ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕೂಡ ಸರಿಯಾಗಿ ದಲಿತರ ಕಾಲೋನಿಗೆ ಒದಗಿಸುತ್ತಿಲ್ಲ, ಎಂದು ದಲಿತ ಕಾಲೋನಿಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿಂಗಪ್ಪ ಬಿ ಹಿರೇಮನಿ, ಇರಪ್ಪ ಮುರಡಿ ಗ್ರಾಮ ಪಂಚಾಯಿತಿ ಸದಸ್ಯರು,ಮತ್ತು ದಲಿತ ಕಾಲೋನಿಯ ಯುವಕ ಮಿತ್ರರು ಸಿಪಿಓ ಮತ್ತು ಪಿ ಎಸ್ ಐ ಸಾಹೇಬರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ನಂತರ ಈರಪ್ಪ ಮುರುಡಿ, ಮಂಜುನಾಥ್ ಬೇವಿನ ಗಿಡ, ಈರಪ್ಪ ಹಿರೇಮನಿ ಬಸವರಾಜ್ ಬೇವಿನ ಗಿಡ, ಹನುಮಂತಪ್ಪ ಬಿ, ಬಸಪ್ಪ ಬಿ, ಇನ್ನು ಅನೇಕ ದಲಿತ ಕಾಲೋನಿ ಯುವಕ ಮಿತ್ರರು ಸೇರಿ ಈ ಸಭೆಯನ್ನು ಯಶಸ್ವಿಗೊಳಿಸಿದರು.

ವರದಿಗಾರರು ಶಶಿಧರ್ ಹೊಸ್ಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button