State

ಕರ್ನಾಟಕ ಸರಕಾರದಿಂದ ಜಾತಿ ಸಮೀಕ್ಷ. ಜಾತಿ ಕಾಲಂ ನಲ್ಲಿ ನಿಮ್ಮ -ನಿಮ್ಮ ಜಾತಿ ಪ್ರಮಾಣ ಪತ್ರದಲ್ಲಿರುವಂತೆ ನಿಮ್ಮ ಜಾತಿ ನಮೋದಿಸಿ.

ಕರ್ನಾಟಕ ಸರಕಾರದಿಂದ ಜಾತಿ ಸಮೀಕ್ಷೆ.

ಜಾತಿ ಕಾಲಂ ನಲ್ಲಿ ನಿಮ್ಮ -ನಿಮ್ಮ ಜಾತಿ ಪ್ರಮಾಣ ಪತ್ರದಲ್ಲಿರುವಂತೆ ನಿಮ್ಮ ಜಾತಿ ನಮೋದಿಸಿ.

ಗೌರವನ್ವಿತ ಜಸ್ಟೀಸ್ ನಾಗಮೋಹನ ದಾಸ್ ಸಮಿತಿಯವರ ತಂಡ, ಒಳ ಮೀಸಲಾತಿ ಜಾರಿಗಾಗಿ ಪರಿಶಿಷ್ಟ ಜಾತಿಗಳಲ್ಲಿನ ಉಪ ಜಾತಿಗಳ ಗಣತಿಗಾಗಿ, ತಮ್ಮ ಮನೆಗಳಿಗೆ ಭೇಟಿ ನೀಡಿ, ನಿಮ್ಮ ಉಪಜಾತಿಗಳ ಮಾಹಿತಿ ಕೇಳಿದಾಗ ತಾವುಗಳು ತಮ್ಮ ಜಾತಿ ಆದಿ ಕರ್ನಾಟಕ ಆದಿ ದ್ರಾವಿಡ, ಆದಿ ಅಂದ್ರ, ಅಥವಾ ಯಾವುದು ಇರಲಿ ನಿಮ್ಮ ಜಾತಿ ಚಲವಾದಿ -ಛಲವಾದಿ ಎಂದೇ ಬರೆಯಿಸಿ ಜಾಗೃತರಾಗಿ ಎಂದು ಶಶಿಧರ್ ಹೊಸಮನಿ,ಛತ್ರಪ್ಪ ಛಲವಾದಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪುನಂತೆ, ಈಗಾಗಲೇ ಕರ್ನಾಟಕ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸಲು ಕಾರ್ಯಪ್ರವೃತ್ತವಾಗಿದೆ.

ಆದರೆ, ಒಳ ಮೀಸಲಾತಿ ಹಂಚಿಕೆ ವಿಚಾರವಾಗಿ ಸರಿಯಾದ ಅಂಕಿ ಅಂಶಗಳನ್ನು ಕಲೆ ಹಾಕಿ ಮೀಸಲಾತಿ ಹಂಚಿಕೆ ಮಾಡುವಲ್ಲಿ ಹಲವು ಸಮಸ್ಸೆಗಳು ಉಂಟಾಗಿರುವದರಿಂದ, ದಲಿತ ಸಮುದಾಯದಲ್ಲಿ ಉಂಟಾಗಿರುವ ಬಿಕ್ಕತ್ತನ್ನು ಬಗೆಹರಿಸಲು ರಾಜ್ಯ ಸರಕಾರವು ಮುಂದಾಗಿದ್ದು, ಈ ದಿಕ್ಕಿನಲ್ಲಿ ಗೌರವನ್ವಿತ ನ್ಯಾಯಮೂರ್ತಿ ಹೆಚ್.ಏನ್. ನಾಗಮೋಹನ ದಾಸ್ ಅವರ ಏಕ ಸದಸ್ಯ ಆಯೋಗವನ್ನು ನೇಮಿಸಲಾಗಿದೆ. ಸದರಿ ಆಯೋಗವು ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಸಮರ್ಪಕವಾಗಿ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಅವಕಾಶವಾಗುವಂತೆ ಆಯೋಗಕ್ಕೆ ಸರಿಯಾದ ಮಾಹಿತಿಯನ್ನು ನೀಡಬೇಕಾಗಿರುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಎಂದು ಛಲವಾದಿ ಸಮಾಜದ ಅಧ್ಯಕ್ಷರಾದ ಅಂದಪ್ಪ ಹಾಳ್ಕೇರಿ ಮುಖಂಡರು ಶಂಕ್ರಪ್ಪ ಛಲವಾದಿ ಸಿದ್ದಪ್ಪ ಕಟ್ಟಿಮನಿ ತಿಪ್ಪಣ್ಣ ಹಿರೇಮಗೇರಿ ಕನಕೆಶ್ ಪೈಂಟರ್ ವಿಜಯ್ ಜಕ್ಲಿ ಅವರು ಜನರಲ್ಲಿ ತಿಳಿಯಪಡಿಸಿದರು.

ಆಯೋಗವು ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಕೋರುವ ಮಾಹಿತಿಯನ್ನು ಹೇಗೆ ನೀಡಬೇಕು ಎಂಬುದರ ಬಗ್ಗೆ ಈ ಮೂಲಕ ಸಮುದಾಯದ ಕುಲಬಾಂಧವರಿಗೆ ತಿಳಿಯಪಡಿಸಲಾಗುತ್ತಿದೆ.

ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ಪೈಕಿ ಈ ಕೆಳಗಿನ ಜಾತಿಗಳು ಹೊಳೆಯ/ಬಲಗೈ, ಛಲವಾದಿ, ಮಹರ್, ಪರಯ್ಯ, ಗುಂಪಿಗೆ ಸಂಬಂದಿಸಿದ ಸಮಾoತರ ಜಾತಿಗಳಗಿರುತ್ತವೆ.

ಕರ್ನಾಟಕ ಸರಕಾರದಿಂದ ಜಾತಿ ಸಮೀಕ್ಷೆ ಮಾಡಲು ನೇಮಿಸಲಾಗುವ ಗಣತಿದಾರರು ಮುಂದಿನ ಭಾಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜಾತಿ ಸಮೀಕ್ಷೆಯ ನಮೋನೆಯಲ್ಲಿ ಜಾತಿ ಮತ್ತು ಮೂಲ ಜಾತಿ, ಉಪ ಜಾತಿ, ಗಳನ್ನು ಕಡ್ಡಾಯವಾಗಿ ನಮೂಡಿಸಲು ಕೋರುತ್ತಾ ತಿಳಿಸಿದರು.

ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button