ವಿಜಯನಗರ ಕೊಟ್ಟೂರು ಪಟ್ಟಣದ ಗಚ್ಚಿನ ಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ 598ನೇ ಜಯಂತಿ ಉದ್ಘಾಟನಾ ಕಾರ್ಯಕ್ರಮ. ವರದಿ ಕೆ ಕೊಟ್ರೇಶ ಆಚಾರಿ

ವಿಜಯನಗರ ಆತ್ಮೀಯ ಬಂಧುಗಳೇ ಇಂದು ಕೊಟ್ಟೂರು ಪಟ್ಟಣದ ಗಚ್ಚಿನ ಮಠದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ 598ನೇ ಜಯಂತಿ ಅಂಗವಾಗಿ ಪರಮಪೂಜ್ಯರಾದ ಶ್ರೀ ವೇಮನಾನಂದ, ಹಾಗೂ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಲಾಯಿತು.

ರೆಡ್ಡಿ ಸಮಾಜ ತನ್ನದೇ ಆದಂತ ಸಮಾಜ ಸೇವೆ ಹಾಗೂ ಒಳ್ಳೆಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಈ ಸಮಾಜದ ಅಭಿವೃದ್ಧಿಗೋಸ್ಕರ ನಾನು ಸಹ ತಮ್ಮಲ್ಲಿ ಒಬ್ಬರಾಗಿ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಭರವಸೆ ನೀಡಿಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹಿರಿಯರಾದ ಎಂ.ಎಂ.ಜೆ.ಹರ್ಷವರ್ಧನ್, ಅಣ್ಣನವರು, ಕೊಟ್ಟೂರು ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷರಾದ ಅಂಬಳಿ ಭರಮರೆಡ್ಡಿ. ಬಾದಾಮಿ ಮೃತ್ಯುಂಜಯ, ಜಿ.ಎಂ.ಜಗದೀಶ್, ವಿ ಎಸ್ ಎಸ್ ಏನ್ ಅಧ್ಯಕ್ಷರಾದ ಕೆ ಚಂದ್ರಶೇಖರ, ಹೋಟೆಲ್ ಸಿದ್ದರಾಜು, ಕೊಟ್ಟೂರು ಮುಖಂಡರಾದ ಬೂದಿ ಶಿವಕುಮಾರ್, ದೇವೇಂದ್ರ ಗೌಡ, ರವಿಪ್ರಸಾದ್ ರೆಡ್ಡಿ, ಮೈನಹಳ್ಳಿ ಕೊಟ್ರೇಶ್, ಮಂಜುನಾಥ್, ನಾಗರಾಜ್, ಸೋಮಶೇಖರ್, ಸಮಾಜದ ಮುಖಂಡರು,ಪಕ್ಷದ ಮುಖಂಡರು ಕಾರ್ಯಕರ್ತ ಬಂಧುಗಳು ಅಭಿಮಾನಿಗಳು ಇತರರು ಉಪಸ್ಥಿತಿ ಇದ್ದರು
ವರದಿ ಕೆ ಕೊಟ್ರೇಶ ಆಚಾರಿ ✍



