ಇಂದು ಕುಷ್ಟಗಿಯಲ್ಲಿ ನಡೆದ ನೂತನ ರೈಲ್ವೆ ಪ್ಯಾಸೆಂಜರ್ ರೈಲ್ ಉದ್ಘಾಟನೆ ಸಮಾರಂಭ: ವರದಿ ಶಶಿಧರ್ ಹೊಸಮನಿ

ಇಂದು ಕುಷ್ಟಗಿಯಲ್ಲಿ ನಡೆದ ನೂತನ ರೈಲ್ವೆ ಪ್ಯಾಸೆಂಜರ್ ರೈಲ್ ಉದ್ಘಾಟನೆ ಸಮಾರಂಭ
ಗದಗ್ ಟು ವಾಡಿ ಈ ರೈಲ್ವೆ ಮಾರ್ಗವನ್ನು ಹಿಂದೆ ಇದ್ದ
ಕೇಂದ್ರ ರೈಲ್ವೆ ಖಾತೆ ಸಚಿವರಾದ ಶ್ರೀಯುತ ಕೇಂದ್ರ ರೈಲ್ವೆ ಖಾತೆ ಸಚಿವರಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆಜಿ ಯೋಜನೆ ಜಾರಿಗೆ ತಂದಿದ್ದರು. ಮತ್ತು ಯಲಬುರ್ಗಾ ಕ್ಷೇತ್ರ ಶಾಸಕರಾದ ಶ್ರೀಯುತ ಬಸವರಾಜ್ ರಾಯರೆಡ್ಡಿ ಸಾಹೇಬರು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಇವರ ಶ್ರಮದಿಂದ ಈ ನೂತನ ರೈಲ್ವೆ ಅಂದು ಕನಸು ಕಂಡಿದ್ದ ಶಾಸಕರಾದ ಬಸವರಾಜ ರಾಯರೆಡ್ಡಿ ಸಾಹೇಬರು ಇಂದು ನನಸಾಗಿತು.




ಇಂದು ಕುಷ್ಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವರಾದ ಶ್ರೀಯುತ ವಿ ಸೋಮಣ್ಣ ಅವರು ರಾಜ್ಯ ಸಚಿವರಾದ ಶ್ರೀಯುತ ಎಂ ಬಿ ಪಾಟೀಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀಯುತ ಶಿವರಾಜ್ ತಂಗಡಿಗೆ ಸಾಹೇಬರು ಹಾಗೂ ಕುಷ್ಟಗಿ ಕ್ಷೇತ್ರದ ಶಾಸಕರಾದ ಶ್ರೀಯುತ ದೊಡ್ಡನಗೌಡ ಪಾಟೀಲ್ ರವರು ಶ್ರೀಯುತ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಂಬರೀಗೌಡ ಬಯ್ಯಾಪುರ ಅವರು ಕೊಪ್ಪಳ ಜಿಲ್ಲಾ ಸಂಸದರಾದ ಶ್ರೀಯುತ ರಾಜಶೇಖರ್ ಹಿಟ್ನಾಳ್ ಅವರು ಹಾಗೂ ಮಾಜಿ ಸಂಸದರಾದ ಶ್ರೀಯುತ ಸಂಗಣ್ಣ ಕರಡಿಯವರು ಇನ್ನು ಅನೇಕ ಗಣ್ಯ ವ್ಯಕ್ತಿಗಳು ಸ್ಥಳೀಯ ನಾಯಕರು ಎಲ್ಲರೂ ತಾಲೂಕಿನ ಸ್ಥಳೀಯ ನಾಯಕರು ಮತ್ತು ಕುಷ್ಟಗಿ ತಾಲೂಕಿನ ಸ್ಥಳೀಯ ನಾಯಕರು ಮತ್ತು ಕುಕನೂರು ತಾಲೂಕಿನ ರಾಜಕೀಯ ಗಣ್ಯ ವ್ಯಕ್ತಿಗಳು ನೂರಾರು ಸಂಖ್ಯೆಯಲ್ಲಿ ಜನರು ಸೇರಿ ಈ ಒಂದು ನೂತನ ರೈಲ್ವೆ ಸಮಾರಂಭದಲ್ಲಿ ಕುಷ್ಟಗಿ ಟು ಹುಬ್ಬಳ್ಳಿ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಟ್ರೈನ್ ಸಂಚರಿಸುವ ವೇಳೆ ತಿಳಿಸಿದರು ಇಂದು ಪ್ರಾಯೋಗಿಕವಾಗಿ ಉದ್ಘಾಟನೆ ಕಾರ್ಯಕ್ರಮಕ್ಕೆಂದು ವಿಶೇಷ ಟ್ರೈನನ್ನು ಬಿಡಲಾಗಿದೆ ನಾಳೆಯಿಂದ ದಿನಾಂಕ 16-5-2025 ರಿಂದ 5 ಗಂಟೆ ಸಮಯ ಹುಬ್ಬಳ್ಳಿ ಬಿಟ್ಟು ಕುಷ್ಟಗಿ ರಾತ್ರಿ 10.40ಕ್ಕೆ ಬಂದು ತಲುಪಲಿದೆ ಎಂದು ರೈಲ್ವೆ ಅಧಿಕಾರಿಗಳು ವೇಳಾಪಟ್ಟಿ ವಿವರ ನೀಡಿದರು.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



