ಭಾರತ್ ಭೀಮ್ ಸೇನ್ ( ರಿ ) ರಾಜ್ಯ ಸಮಿತ ವತಿಯಿಂದ ಘಟನೆಯಾದ ಸ್ಥಳದಲ್ಲಿ ಉಗ್ರವಾಗಿ ಹೋರಾಟ ಮಾಡಲು ನಿರ್ಧರಿಸಿದೆ

ಈ ಕೃತ್ಯವನ್ನು ಖಂಡಿಸಿ ಭಾರತ್ ಭೀಮ್ ಸೇನ್ ( ರಿ ) ರಾಜ್ಯ ಸಮಿತ ವತಿಯಿಂದ ಘಟನೆಯಾದ ಸ್ಥಳದಲ್ಲಿ ಉಗ್ರವಾಗಿ ಹೋರಾಟ ಮಾಡಲು ನಿರ್ಧರಿಸಿದೆ
ಖುಷಿ ಎಂಬ ಈ ಹೆಣ್ಣುಮಗಳನ್ನು ಬಹಳ ಕ್ರೂರವಾಗಿ ನಾಲ್ಕರಿಂದ ಹೆಚ್ಚು ಜನ ಸೇರಿ ಅತ್ಯಾಚಾರ ಮಾಡಿ ಬೆನ್ನು ಮೂಳೆ ಮುರಿದು,ಕತ್ತು, ಕಾಲನ್ನ ತಿರುಚಿ ಬಹಳ ಹಿಂಸೆ ಕೊಟ್ಟು ಕೊಲೆ ಮಾಡಿ ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿದ್ದಾರೆ ಪಾಪ ಈ ಹುಡುಗಿಗೆ ಮಾತು ಬರಲ್ವಂತೆ,ಕಿವಿ ಕೂಡ ಕೇಳಿಸೋದಿಲ್ವಂತೆ ಬಡವರ ಮನೆಯ ಹುಡುಗಿ ಈ ಹೆಣ್ಣು ಮಗಳ ಅತ್ಯಾಚಾರದ ಬಗ್ಗೆ ಯಾವೊಂದು ಮೀಡಿಯಾದಲ್ಲೂ ಸುದ್ದಿಯಾಗಲಿಲ್ಲಾ…. ಈ ಕೃತ್ಯವನ್ನು ಖಂಡಿಸಿ ನಮ್ಮ ಭಾರತ ಭೀಮ್ ಸೇನೆಯ ಸಂಘಟನೆಯು ದಿನಾಂಕ 19.05.2025 ನೇ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.


ದಯಮಾಡಿ ಸಂಘಟನೆ ಎಲ್ಲ ಪದಾಧಿಕಾರಿಗಳು ಈ ಹೋರಾಟಕ್ಕೆ ಪಾಲ್ಗೊಳ್ಳಬೇಕಾಗಿ ಕೊಪ್ಪಳ ಜಿಲ್ಲೆಯ ಭಾರತ್ ಬೀಮ್ ಸೆನ್ ಜಿಲ್ಲಾಧ್ಯಕ್ಷರಾದ ಶ್ರೀ ವಿಜಯ ಜಕಲಿ ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲೂಕುಗಳಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ದಯವಿಟ್ಟು ನಾವ್ಗಳೇ ನಮ್ಮ ರಕ್ಷಣೆಗೋಸ್ಕರ ನಮ್ಮ ಬಳಿಯಿರುವ ಮೋಬೈಲ್ನಲ್ಲಿ ಸಮಾಜಿಕ ಜಾಲಾತಾಣಗಳಲ್ಲಿ ಎಲ್ಲರೂ ಗಟ್ಟಿ ಧ್ವನಿಯಿಂದ ಈ ಕೃತ್ಯವನ್ನ ಖಂಡಿಸುವ ಮುಖಾಂತರ ಸರ್ಕಾರದ ಗಮನಕ್ಕೆ ತಂದು ಕಾಮುಕರಿಂದ ಬಿದಿಲ್ಲಿ ಹೇಣ್ಣವಾದ ಹೆಣ್ಣು ಮಗಳ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ..
ಕೊಪ್ಪಳ ಜಿಲ್ಲೆ ಭಾರತ್ ಭೀಮ್ ಸೇನ್ ಜಿಲ್ಲಾಧ್ಯಕ್ಷರು ಶ್ರೀ ವಿಜಯ ಜಕಲಿ
ಸಂಸ್ಥಾಪಕ ರಾಜ್ಯಾಧ್ಯಕ್ಷರು
ದಿನೇಶ್
ಮಧು
ರಾಜ್ಯ ಸಂಘಟನಾ ಕಾರ್ಯದರ್ಶಿ


