
ಇಂದು ನಡೆದ ಯಲಬುರ್ಗಾ ತಾಲೂಕಿನ ಕ್ರೀಡಾಂಗಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ನಾಮಫಲಕದ ಉದ್ಘಾಟನೆ ಕಾರ್ಯಕ್ರಮ
ಅಭಿವೃದ್ಧಿ ಹರಿಕಾರ ಸಿಎಂ ಆರ್ಥಿಕ ಸಲಹೆಗಾರರಾದ ಮಾನ್ಯ ಬಸವರಾಜ್ ರಾಯರೆಡ್ಡಿ ಸಾಹೇಬರು ಇವರಿಂದ ಪ್ರಾಮಾಣಿಕ ಪ್ರಯತ್ನ ಫಲದಿಂದ ಕ್ರೀಡಾಂಗಣಕ್ಕೆ 9 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು ನಿಮಿತ್ಯ ಯಲ್ಬುರ್ಗಾ ತಾಲೂಕು ಕ್ರೀಡಾಪಟುಗಳು ಯುವಕ ಮಿತ್ರರು ಈ ಒಂದು ಕ್ರೀಡಾಂಗಣ ನವೀಕರಣಕ್ಕೆ ಕಾಲೇಜ್ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕ್ರೀಡಾಂಗಣಕ್ಕೆ 9 ಕೋಟಿ ಅನುದಾನ ತಂದ ಮಾನ್ಯ ಬಸರಾಜ್ ರಾಯರೆಡ್ಡಿಯವರಿಗೆ ನಾವು ಎಂದೆಂದಿಗೂ ಚಿರಋಣಿಯಾಗಿರುತ್ತವೆ ಎಂದು ಕ್ರೀಡಾಪಟುಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೀಡಾಂಗಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನುಯಲಬುರ್ಗಾ ಪಟ್ಟಣದಲ್ಲಿ ಕ್ರೀಡಾಂಗಣಕ್ಕೆ ನಾಮಫಲಕ ದೊಂದಿಗೆ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮತ್ತು ಪಟ್ಟಣ ಪಂಚಾಯಿತಿ ಇವರ ಸಂಯೋಗದೊಂದಿಗೆ ಈ ನಾಮಫಲಕ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಯಲಬುರ್ಗಾ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಕೆರಬಸಪ್ಪ ನಡುಗುಂದಿ ಕುಕನೂರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಹನುಮಂತಪ್ಪ ಚಂಡೂರ್ ಪಟ್ಟಣ ಪಂಚಾಯಿತಿ ಅಧಿಕಾರಿ ಶ್ರೀಯುತ ನಾಗೇಶ್ ಕುಮಾರ್ ಆರ್ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀಯುತ ಶೇಖರ್ ಗೌಡ್ರು ಉಳ್ಳಾಗಡ್ಡಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಶರಣಪ್ಪ ಗಾಂಜಿ ಶ್ರೀಯುತ ರೇವಣಪ್ಪ ಸಂಗಟಿ ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಸಮಿತಿ ಸದಸ್ಯರಾದ ಶ್ರೀಯುತ ಸುಧೀರ್ ಕೊರಲಹಳ್ಳಿ ಶ್ರೀಯುತ ಡಾ. ದಾನರೆಡ್ಡಿ ಡಾಕ್ಟರ್ ಶ್ರೀಯುತ ಮಲ್ಲಿಕಾರ್ಜುನ್ ಜಕ್ಕಲಿ ಹಾಗೂ ವಸಂತ್ ರಾವ್ ಕುಲಕರ್ಣಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಶ್ರೀ ಕಳಕಪ್ಪ ತಳವಾರ್ ಶರಣಪ್ಪ ಭಜಂತ್ರಿ ಶ್ರೀಮತಿ ನಂದಿನಿ ದಾನರೆಡ್ಡಿ ಶ್ರೀಮತಿ ಜಯಶ್ರೀ ಕಂದುಕುರ್ ಶ್ರೀಮತಿ ಸಾವಿತ್ರಿ ಗೊಲ್ಲರ್ ಇನ್ನು ಅನೇಕ ಜನಪ್ರತಿನಿಧಿಗಳು ಯುವಕರು ಕ್ರೀಡಾಪಟುಗಳು ಈ ಒಂದು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ