
ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರು ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ 20.05.2025 ರಂದು ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನ ಸಮರ್ಪಣಾ ಸಮಾವೇಶ

ಸ್ಥಳವಾದ ಪುನೀತ್ ರಾಜಕುಮಾರ ಕ್ರೀಡಾಂಗಣ ವೀಕ್ಷಿಸಲು ತೋರಣಗಲ್ಲು ವಿಮಾನ ನಿಲ್ದಾಣದಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಾಸಕರಾದ ಶ್ರೀ ಮತಿ ಅನ್ನಪೂರ್ಣ ತುಕಾರಾಮ್ ಅವರು, ಹೂ ಗುಚ್ಛ ನೀಡುವುದರ ಮೂಲಕ ಆತ್ಮೀಯ ಸ್ವಾಗತ ಕೋರಿದರು ಈ ಸಮಯದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕರು, ಮಾಜಿ ಸಚಿವರಾದ ಬಿ ನಾಗೇಂದ್ರರವರು, ಬಳ್ಳಾರಿಯ ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ ಮಿಶ್ರಾರವರು, ಜಿಲ್ಲಾ ಫೋಲೀಸ್ ವರಿಷ್ಠಾಧಿಕಾರಿಗಳಾದ ಶೋಭಾರಾಣಿಯವರು, ವಿಜಯನಗರ ಜಿಲ್ಲೆಯ ಡಿ ಸಿ ಸಿ ಅಧ್ಯಕ್ಷರಾದ ಸಿರಾಜ್ ಷೇಕ್ ರವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿಗಾರರು *ಕೆ ಕೊಟ್ರೇಶ ಆಚಾರಿ ವಿಜಯನಗರ ನೆಲ್ಲುಕುದುರೆ


