State
ಯಲಬುರ್ಗಾ: ಐದು ದಿನಗಳ ಕಾಲ ಗ್ರಾಮ ದೇವತೆಯಾದ ದ್ಯಾಮವ್ವನ ಜಾತ್ರೆ ನಡೆದಿದ್ದು ಸ್ವಚ್ಛತೆ ಕಾಪಾಡದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳು. ವರದಿ ಶಶಿಧರ ಹೊಸಮನಿ

ಗ್ರಾಮ ದೇವತೆ ಜಾತ್ರೆ ನಡೆದಿದ್ದು ಸ್ವಚ್ಛತೆ ಕಾಪಾಡದ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿಗಳು
ಯಲಬುರ್ಗಾ ತಾಲೂಕು ಮುರುಡಿ ಗ್ರಾಮದಲ್ಲಿ ಐದು ದಿನಗಳ ಕಾಲ ಗ್ರಾಮ ದೇವತೆಯಾದ ದ್ಯಾಮವ್ವನ ಜಾತ್ರೆ ನಡೆದಿದ್ದು ಊರಿನ ನಾಡು ಮಧ್ಯದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನೋಡಿದ್ದರೂ ಕೂಡ ಕಣ್ಣು ಮುಚ್ಚಿ ಕುಳಿತಿದ್ದ ಅಧಿಕಾರಿಗಳು.

ಇದರ ಜೊತೆಗೆ ಮುರುಡಿ ಗ್ರಾಮದಲ್ಲಿ ಮಸೂದಿ ಹತ್ತಿರ ಫಿಲ್ಟರ್ ನೀರಿನ ಘಟಕ ಇದ್ದು ಇದರ ವೆಸ್ಟ್ ನೀರನ್ನು ಚರಂಡಿಗೆ ಬಿಡದೆ 24 ಗಂಟೆ ರೋಡಿಗೆ ಬಿಡುತ್ತಿರುವ ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಊರಿನ ಗ್ರಾಮಸ್ಥರು ಊರಿನ ಮುಖಂಡರುಗಳು ಆಗ್ರಹಿಸಿದ್ದಾರೆ
ವರದಿ ಶಶಿಧರ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ


