ಬೆಳ್ಳಂಬೆಳಗ್ಗೆ ಸ್ವಚ್ಛತೆ ಕಾರ್ಯಕ್ಕೆ ನಿಂತ ಯಲಬುರ್ಗಾ ಪಟ್ಟಣ ಪಂಚಾಯತ್ ಪೌರಕಾರ್ಮಿಕರು. ವರದಿ ಶಶಿಧರ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಬೆಳ್ಳಂಬೆಳಗ್ಗೆ ಸ್ವಚ್ಛತೆ ಕಾರ್ಯಕ್ಕೆ ನಿಂತ ಯಲಬುರ್ಗಾ ಪಟ್ಟಣ ಪಂಚಾಯತ್ ಪೌರಕಾರ್ಮಿಕರು
ಯಲಬುರ್ಗಾ : ಪ್ರತಿ ದಿನ ಪ್ರತಿ ವಾರ್ಡಿನಲ್ಲೂ ಸ್ವಚ್ಛತೆ ಕಾರ್ಯಕ್ರಮವನ್ನು ದಿನನಿತ್ಯ ನೀಡುತ್ತಲೇ ಇದೆ ಆದರೆ ಈಗಿನ ಪರಿಸ್ಥಿತಿಯಲ್ಲಿ ಮಳೆ ಮತ್ತು ಗಾಳಿಗೆ ಮಳೆ ನೀರಿನ ರಭಸಕ್ಕೆ ಕಸ ಮತ್ತು ನೀರಿನ ಬಾಟಲ್ ಪ್ಲಾಸ್ಟಿಕ್ ಗಳು ಸಾರ್ವಜನಿಕರು ಮನೆಯಿಂದ ಹೊರಗಡೆ ಡ್ರೈನೇಜ್ಗೆ ತಂದು ಹಾಕುತ್ತಿದ್ದಾರೆ.

ಸಾರ್ವಜನಿಕರಿಗೆ ಪಟ್ಟಣ ಪಂಚಾಯಿತಿ ವ್ಯಾಣಿನ ಮುಖಾಂತರ ಪ್ರತಿದಿನ ಮಾಹಿತಿ ನೀಡಿದರು ಜನರು ತಿಳುವಳಿಕೆ ಇದ್ದರೂ ಕೂಡ ಕಸವನ್ನು ಡ್ರೈನೇಜ್ಗೆ ತಂದು ಹಾಕುತ್ತಿದ್ದಾರೆ. ಈಗ ಮಳೆಗಾಲ ಪ್ರಾರಂಭವಾಗಿದ್ದರಿಂದ ಡೈನೋಸಗಳಲ್ಲಿ ತುಂಬಿಕೊಂಡು ನೀರು ಹೋಗಲು ಅಡೆತಡೆ ಉಂಟಾಗುತ್ತದೆ.


ಪ್ರತಿದಿನ ಪೌರಕಾರ್ಮಿಕರ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯಕ್ಕೆ ನಿರತರಾಗಿದ್ದಾರೆ ಪಟ್ಟಣ ಪಂಚಾಯತ್ ಜೆಸಿಪಿ ಮೂಲಕ ಹಾಗೂ ಲೇಬರ್ ಮೂಲಕ ಪ್ರತಿಯೊಂದು ವಾರ್ಡಿನಲ್ಲಿ ಸ್ವಚ್ಛತೆ ನಡೆಯುತ್ತಿದೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡ ಪೌರಕಾರ್ಮಿಕರ ಅಧ್ಯಕ್ಷರಾದ ಹನುಮಂತಪ್ಪ ಚಲವಾದಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ನಾಗೇಶ್ ಕುಮಾರ್ ಅವರು ಶ್ರೀಯುತ ವಸಂತ್ ಬಾವಿಮನಿ ಮತ್ತು ಸರ್ವ ಸದಸ್ಯರು ಮತ್ತು ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರು ಸಾರ್ವಜನಿಕರಿಗೆ ಇದರ ಬಗ್ಗೆ ಪ್ರತಿದಿನ ಪ್ರತಿಯೊಂದು ವಾರ್ಡ್ ಗೆ ವಾಹನ ಬರುತ್ತಿದ್ದು ದಿನನಿತ್ಯದ ಕಸವನ್ನು ಪಂಚಾಯಿತಿಯಿಂದ ಬರುವ ಗಾಡಿಗೆ ಹಾಕುವಂತೆ ಸಾರ್ವಜನಿಕರು ಮಾಹಿತಿ ನೀಡಿದರು.
ವರದಿ ಶಶಿಧರ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



