ಖಾನಾಪುರ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ರಾಜ್ಯದ ಹಲವೆಡೆ ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್

ಬೆಳಗಾವಿ: ರಾಜ್ಯದ ಹಲವೆಡೆ ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದ್ದು, ಅದರಲ್ಲಿ ಬೆಳಗಾವಿಯ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ.

ಖಾನಾಪುರ ತಹಶೀಲ್ದಾರ ಪ್ರಕಾಶ ಶ್ರೀಧರ ಗಾಯಕವಾಡ ಅವರ ಮೇಲೆ ಖಚಿತ ಮಾಹಿತಿ ಮೇರೆಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ. ಪ್ರಕಾಶ ಗಾಯಕವಾಡ ಅವರಿಗೆ ಸೇರಿರುವ ಬೆಳಗಾವಿಯ ಗಣೇಶಪುರ, ನಿಪ್ಪಾಣಿಯ ಮನೆಗಳು ಮತ್ತು ಖಾನಾಪುರದ ಅವರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಬೆಂಗಳೂರು ಸೇರಿ ರಾಜ್ಯದ 8 ಕಡೆಗಳಲ್ಲಿ ಲೋಕಾಯುಕ್ತ ದಾಳಿ: ಗದಗ, ಬಳ್ಳಾರಿ, ಬೀದರ್ ಸೇರಿದಂತೆ 8 ಕಡೆಗಳಲ್ಲಿ ಏಕಕಾಲಕ್ಕೆ ರೇಡ್ ಆಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಸಾರಿಗೆ ಇಲಾಖೆಯ ಜಂಟಿ ನಿರ್ದೇಶಕಿ ಶೋಭಾ ಮನೆ ಮೇಲೆ ದಾಳಿಯಾಗಿದೆ.
ಯಾರ ಮನೆ ಮೇಲೆ ರೇಡ್!
ಶೋಭಾ, ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ
ಡಾ.ಎಸ್.ಎನ್.ಉಮೇಶ್, ಕಡೂರು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ
ರವೀಂದ್ರ, ಬೀದರ್ ಸಣ್ಣ ನೀರಾವರಿ ಇಲಾಖೆ ಇನ್ಸ್ಪೆಕ್ಟರ್
ಹುಚ್ಚೇಶ್, ಗದಗ ಬೆಟಿಗೇರಿ ನಗರಸಭೆಯ ಎಇಇ
ಆರ್.ಹೆಚ್.ಲೋಕೇಶ್, ಬಳ್ಳಾರಿ BCM ತಾಲೂಕು ಅಧಿಕಾರಿ
ಹುಲಿ ರಾಜ್, ರಾಯಚೂರು ಜೆಸ್ಕಾಂ ಜೂ.ಇಂಜಿನಿಯರ್


