State

ಶಿವಮೊಗ್ಗ, ಧಾರವಾಡ ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ

ಬೆಂಗಳೂರು, ಜೂನ್ 24: ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ನಿರ್ದೇಶಕ ಪ್ರದೀಪ್, ಚಿಕ್ಕಮಗಳೂರು ನಗರಸಭೆ ಅಧಿಕಾರಿ ಲತಾಮಣಿ ಮನೆ ಮೇಲೆ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ದಾಳಿ ನಡೆಸಿದ್ದಾರೆ. ಆನೇಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್, ಗದಗದ ಪಟ್ಟಣ ಪೊಲೀಸ್ ನಿರೀಕ್ಷಕ ಧ್ರುವರಾಜ್​, ಧಾರವಾಡ ಮಲಪ್ರಭಾ ಯೋಜನೆ ಇಂಜಿನಿಯರ್ ಅಶೋಕ್ ವಾಲ್ಸಂದ್, ಕಲಬುರಗಿ ಪಿಆರ್​ಇ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ, ಸಣ್ಣೂರು ಗ್ರಾ.ಪಂ. ಪಿಡಿಒ ರಾಮಚಂದ್ರ ಮನೆ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಲೋಕಾಯಕ್ತ ದಾಳಿ ನಡೆದಿದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಲೋಕಾಯುಕ್ತ ದಾಳಿ?

  • ಪ್ರಕಾಶ್ ಎಇ, ಬಿಬಿಎಂಪಿ, ಗೋವಿಂದರಾಜನಗರ, ಬೆಂಗಳೂರು.
  • ಡಾ , ಎಸ್ ಪ್ರದೀಪ್, ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್ , ಅರ್ಗ್ಯಾನಿಕ್ ಫಾರ್ಮಿಂಗ್ ಶಿವಮೊಗ್ಗ.
  • ಡಾ. ಎಸ್. ಪ್ರದೀಪ್, ಸಹಾಯಕ ಸಂಶೋಧನಾ ನಿರ್ದೇಶಕರು, ಅರ್ಗಾನಿಕ್ ಫಾರ್ಮಿಂಗ್ ಶಿವಮೊಗ್ಗ
  • ಲತಾ ಮಣಿ, ಖಾತೆ ಅಧಿಕಾರಿ, ಯೌನ್ ನಗರಪಾಲಿಕೆ, ಚಿಕ್ಕಮಗಳೂರು.
  • ಕೆ.ಜಿ. ಅಮರನಾಥ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಆನೆಕಲ್.
  • ಧ್ರುವರಾಜ್, ಪಟ್ಟಣ ಪೊಲೀಸ್ ನಿರೀಕ್ಷಕ, ಗದಗ.
  • ಅಶೋಕ್ ವಾಲ್ಸಂದ್, ಎಂಜಿನಿಯರ್, ಮಲಪ್ರಭಾ ಯೋಜನೆ, ಧಾರವಾಡ.
  • ಮಲ್ಲಿಕಾರ್ಜುನ ಅಲಿಪುರ, ಮಾಜಿ ಎಂಜಿನಿಯರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಲಬುರ್ಗಿ
  • ರಾಮಚಂದ್ರ, ಪಿಡಿಒ, ಕಲಬುರ್ಗಿ

ಗದಗ ಶಹರ ಠಾಣೆ ಸಿಪಿಐ ಡಿಬಿ ಪಾಟೀಲ್​​ಗೆ ಲೋಕಾಯುಕ್ತ ಶಾಕ್

ಗದಗ ಶಹರ ಠಾಣೆ ಸಿಪಿಐ ಡಿಬಿ ಪಾಟೀಲ್​ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಇನ್ಸ್​​​ಪೆಕ್ಟರ್ ಪಾಟೀಲ್ ಅವರ ಗದಗದ ಶಿವಾನಂದ ನಗರದ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಅಲ್ಲದೆ, ಅವರ ಬಾಗಲಕೋಟೆ, ಜಮಖಂಡಿಯಲ್ಲಿರುವ ಮನೆಗಳ ಮೇಲೂ ದಾಳಿ ನಡೆದಿದೆ. ಕೆರೂರಿನಲ್ಲಿರುವ ಮನೆ ಮೇಲೂ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button