ಕಾರ್ಮಿಕ ಸಚಿವರಿಂದ ಅನವಶ್ಯಕ ಯೋಜನೆ : ಅನಗತ್ಯ ಯೋಜನೆಗಳ ಹೆಸರಿನಲ್ಲಿ ಕಾರ್ಮಿಕರ ಸೆಸ್ ಹಣವನ್ನು ದುರ್ಬಳಕೆ ಮಾಡಿಕೊಳ್ಳುವದನ್ನು ನಿಲ್ಲಿಸದೇ ಹೋದರೆ ಕಾರ್ಮಿಕ ಸಂಘಟನೆಗಳು ತೀವ್ರ ಸ್ವರೂಪ ಹೋರಾಟಗಳನ್ನು ಸಂಘಟನೆಗಳು ನಡೆಸಲು ನಿರ್ಧರಿಸಲಾಗಿದೆ. ಆಧ್ಯತೆ ಯೋಜನೆ ಜಾರಿಗೊಳಿಸದಿದ್ದರೆ ಹೋರಾಟ-ಈರನಗೌಡ

ಕಾರ್ಮಿಕ ಸಚಿವರಿಂದ ಅನವಶ್ಯಕ ಯೋಜನೆ : ಆಧ್ಯತೆ ಯೋಜನೆ ಜಾರಿಗೊಳಿಸದಿದ್ದರೆ ಹೋರಾಟ-ಈರನಗೌಡ
ರಾಯಚೂರು, ಜು.1 ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕಾರ್ಮಿಕ ಸಚಿವರು ಅನಗತ್ಯ ಯೋಜನೆಗಳ ಹೆಸರಿನಲ್ಲಿ ಕಾರ್ಮಿಕರ ಸೆಸ್ ಹಣವನ್ನು ದುರ್ಬಳಕೆ ಮಾಡಿಕೊಳ್ಳುವದನ್ನು ನಿಲ್ಲಿಸದೇ ಹೋದರೆ ಕಾರ್ಮಿಕ ಸಂಘಟನೆಗಳು ತೀವ್ರ ಸ್ವರೂಪ ಹೋರಾಟಗಳನ್ನು ಸಂಘಟನೆಗಳು ನಡೆಸಲು ನಿರ್ಧರಿಸಲಾಗಿದೆ ಎಂದು ಕಟ್ಟಡ ಕಾರ್ಮಿಕರ
ಸಂಘಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಈರನಗೌಡ ಹೇಳಿದರು.
ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರಿಗೆ ಹಲವು ಬಾರಿಮನವಿಗಳನ್ನು ಸಲ್ಲಿಸಿದ್ದರೂ ಸಚಿವರು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ಕಾರ್ಮಿಕ ಸಚಿವರು ಅವೈಜ್ಞಾನಿಕ ಮಾನದಂಡ, ಅನವಶ್ಯಕವಾದ ಯೋಜನೆಗಳನ್ನು ರೂಪಿಸಿ ಕಾರ್ಮಿಕರಿಗೆ ಸೌಲಭ್ಯಗಳಿಂದ ವಂಚಿರನ್ನಾಗಿಸುತ್ತಿದ್ದಾರೆ.
ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳಿದ್ದರೂ ಪ್ರತ್ಯೇಕ ತರುತ್ತಿದ್ದು.ಆರ್.ಪಿ.ಎಲ್. ಟ್ರೈನಿಂಗ್ ವಿತ್.ಕಿಟ್, ಟೂಲ್ ಕಿಟ್, ನ್ಯೂಟ್ರೇಷನ್ ಕಿಟ್, ಪ್ಯೂಮನಿಟಿ ಕಿಟ್, ನೊಂದಣಿಗೆ ಅಂಬೇಡ್ಕರ ಸಹಾಯ ಹಸ್ತ ಯೋಜನೆ ರೂಪಿಸಿ ಖಾಸಗಿ ಯವರಿಗೆ ಟೆಂಡರ್ ನೀಡಿದ್ದಾರೆ. ಆದರೆ ಕಾರ್ಮಿಕರ ಮಕ್ಕಳಿಗೆ ಒದಗಿಸಬೇಕಾದ ಶೈಕ್ಷಣಿಕ ಸಹಾಯಧನ ಯೋಜನೆ, ಮದುವೆ ಮತ್ತು ಮರಣ ಸಹಾಯಧನ, ಮದುವೆ ಮತ್ತು ಮರಣ ಸಹಾಯಧನ ಪಿಂಚಣಿ ಇನ್ನಿತರೆ ಸವಲತ್ತುಗಳು ಸಹಾಯಧನವನ್ನು ಒಂದು ವರ್ಷದಿಂದ ನೀಡುತ್ತಿಲ್ಲ ಈಗಾಗಿ ಅವುಗಳನ್ನು ಒದಗಿಸಬೇಕು
ಇಲ್ಲವಾದಲ್ಲಿ ಮುಂದೆ ಕಾರ್ಮಿಕ ಸಚಿವ ಮನೆ ಮುಂದೆ ಧರಣಿ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆನಂದಪ, ವೀರಣ್ಣ ಹೊಸೂರು,ರಂಗಪ್ಪ ಅಸ್ಕಿಹಾಳ್, ತಿಮ್ಮಪ್ಪ ಸ್ವಾಮಿ ಮಲಿಯಾಬಾದ್, ತಿಮ್ಮಪ್ಪ, ಭೀಮಪ್ಪ, ನಾಗರಾಜ್, ವೀರೇಶ್ ಜಾಲಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.