Politics
ರಾಮನಗರ ಶಾಸಕರು ಏನು ಹೇಳಿಕೆ ಕೊಟ್ಟಿದ್ದಾರೋ ಅದು ಅವರ ವೈಯಕ್ತಿಕ ಅಭಿಪ್ರಾಯ. ಕಾರ್ಮಿಕ ಸಚಿವ ಸಂತೋಷ ಲಾಡ್

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ಟೀಂ ಇಲ್ಲ. ರಾಮನಗರ ಶಾಸಕರು ಏನು ಹೇಳಿಕೆ ಕೊಟ್ಟಿದ್ದಾರೋ ಅದು ಅವರ ವೈಯಕ್ತಿಕ ಅಭಿಪ್ರಾಯ. ಆ ಬಗ್ಗೆ ಅವರನ್ನೇ ಕೇಳಬೇಕು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಡಿ.ಕೆ.ಶಿವಕುಮಾರ ಅವರಿಗೆ ನೂರು ಶಾಸಕರ ಬೆಂಬಲ ಇದೆ ಎಂಬ ವಿಚಾರಕ್ಕೆ ಮಂಗಳವಾರ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಾಸಕರ ಜೊತೆ ಸುರ್ಜೆವಾಲಾ ಅವರು ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಾಡ್, ಎಲ್ಲೆಲ್ಲಿ ನಮ್ಮ ಪಕ್ಷದಲ್ಲಿ ಅಸಮಾಧಾನ ಇದೆಯೋ ಅದನ್ನು ಸರಿಪಡಿಸುವ ಕೆಲಸ ನಡೆದಿದೆ.
140 ಜನ ಶಾಸಕರ ಪಕ್ಷ ನಮ್ಮದು. ಕೆಲವರಿಗೆ ಅಭಿವೃದ್ಧಿ ಮತ್ತು ಗ್ರ್ಯಾಂಟ್ ವಿಚಾರದಲ್ಲಿ ಅಸಮಾಧಾನ ಇದೆ. ಹಾಗಂತ ಅವರು ಸಿಎಂ ಹಾಗೂ ಸರ್ಕಾರದ ವಿರುದ್ಧ ಇದ್ದಾರೆ ಅಂತಲ್ಲ. ಅದಕ್ಕಾಗಿಯೇ ಸುರ್ಜೆವಾಲಾ ಅವರು ಹೈಕಮಾಂಡ್ ವತಿಯಿಂದ ಬಂದಿದ್ದಾರೆ. ನಮ್ಮ ಹೈಕಮಾಂಡ್ ಎಲ್ಲವನ್ನೂ ಸರಿ ಮಾಡುತ್ತದೆ ಎಂದರು.