SHOCKING : ಅಳಿಯನ ಜೊತೆ ಅತ್ತೆ ಎಸ್ಕೇಪ್ ಕೇಸ್ – ಸ್ಟೋರಿಯಲ್ಲಿ ಧಿಡೀರ್ ಟ್ವಿಸ್ಟ್.! 6 ತಿಂಗಳ ಬಳಿಕ ಅತ್ತೆ ದಿಢೀರ್ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದಾರೆ.

ದಾವಣಗೆರೆ : ಕಳೆದ ಕೆಲ ದಿನಗಳ ಹಿಂದೆಯಷ್ಟೆ ದಾವಣಗೆರೆಯಲ್ಲಿ ಅಳಿಯನೋರ್ವ ತನ್ನ ಪತ್ನಿಯ ಮಲತಾಯಿಯೊಂದಿಗೆ ಪರಾರಿಯಾಗಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೀಗ 6 ತಿಂಗಳ ಬಳಿಕ ಅತ್ತೆ ದಿಢೀರ್ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಶಾಂತಾ ಎನ್ನುವವರು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವವರನ್ನು 13 ವರ್ಷದ ಹಿಂದೆ ಮದುವೆಯಾಗಿದ್ದಳು.
ನಾಗರಾಜ್ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ ಇದ್ದ.. ಅದರಂತೆ ಕಳೆದ ಎರಡು ವರ್ಷದ ಹಿಂದೆ 25 ವರ್ಷದ ಗಣೇಶ್ ಎಂಬಾತನನ್ನು ಮನೆಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದಳು.
ಈತ ಒಳ್ಳೆಯ ಹುಡುಗ ಹೇಮಾಳನ್ನು ಇವರಿಗೆ ಕೊಟ್ಟು ಮದುವೆ ಮಾಡೋಣ, ಮನೆ ಅಳಿಯನಾಗಿ ಇರುತ್ತಾನೆ ಎಂದು ನಂಬಿಸಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಒತ್ತಾಯದಿಂದ ಮದುವೆ ಮಾಡಿಸಿದ್ದಳು. ಆದರೆ ಮದುವೆಯಾಗಿ 15 ದಿನಕ್ಕೆ ಮಲತಾಯಿ ಹಾಗೂ ಪತಿಯ ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ಗೊತ್ತಾಗುತ್ತದೆ.
ಮೊಬೈಲ್ ನಲ್ಲಿ ಅಶ್ಲೀಲ ಮೆಸ್ಸೇಜ್, ಸರಸವನ್ನು ನೋಡಿದ ಹೇಮಾ ಅದನ್ನು ತನ್ನ ತಂದೆ ನಾಗರಾಜ್ ಗೆ ಕಳುಹಿಸುತ್ತಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಗಣೇಶ್ ಹಾಗೂ ಅತ್ತೆ ಶಾಂತಾ ಹಣ, ಆಭರಣ ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಶಾಂತಾ ಮನೆಗೆ ಮರಳಿದ್ದು, ನಾನು ಎಲ್ಲೂ ಹೋಗಿಲ್ಲ ಊರಿನಲ್ಲಿಯೇ ಇದ್ದೇನೆ ಆದರೆ ಅಳಿಯ ಎಲ್ಲಿ ಹೋಗಿದ್ದಾನೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾಳೆ. ನನಗೂ ಅವನಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾಳೆ.
ಅಷ್ಟೇ ಅಲ್ಲದೆ, ಪತಿ ನಾಗರಾಜ್ ಹಾಗೂ ಮಕ್ಕಳು ನನ್ನಿಂದ ಸಾಲ ಮಾಡಿಸಿ ಹಿಂಸೆ ಕೊಟ್ಟು, ಮಾರಣಾಂತಿಕವಾಗಿ ಹಲ್ಲೆ ಮಾಡಿ, ನನ್ನನ್ನು ಓಡಿಸಿದ್ದಾರೆ. ಅವರ ಹಿಂಸೆ ತಡೆಯಲಾರದೆ ನಾನು ಓಡಿ ಹೋಗಿದ್ದೆ. ಆದರೆ ಇದೀಗ ನನ್ನ ಮೇಲೆ ಆರೋಪ ಹೋರೆಸುತ್ತಿದ್ದಾರೆ ಎಂದು ಶಾಂತಾ ಆರೋಪಿಸಿದ್ದಾಳೆ.